HOME » NEWS » State » CM BS YEDIYURAPPA MEETING WITH SENIOR OFFICERS ON NIGHT CURFEW AND TRANSPORT STRIKE RHHSN DBLTV

10 ನಗರಗಳಲ್ಲಿ ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಗೊಳಿಸಿ; ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಕಟ್ಟುನಿಟ್ಟಿನ ಸೂಚನೆ

ನಿಗಮದ ಬಸ್‌ಗಳಿಗೆ ಹಾನಿ‌ ಮಾಡುವ ಹಾಗು ನೌಕರರ ಮೇಲೆ ಹಲ್ಲೆ ನಡೆಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. 6ನೇ ವೇತನ‌ ಆಯೋಗದಂತೆ ವೇತನ ಜಾರಿ ಮಾಡುವುದು ಅಸಾಧ್ಯದ ಮಾತು. ಈ ಬಗ್ಗೆ ನೌಕರರಿಗೆ ಮನವರಿಕೆ ಮಾಡಿಕೊಡಬೇಕು. ಬಸ್ ಹಾಗೂ ಕೆಲಸಕ್ಕೆ ಹಾಜರಾಗುವ ಸಿಬ್ಬಂದಿ‌ ಮೇಲೆ‌ ಹಲ್ಲೆ ನಡೆಯುತ್ತಿರುವುದರಿಂದ ಅವಶ್ಯಕತೆ ಇದ್ದರೆ ಪ್ರತಿ ಬಸ್ ಗೆ ಒಬ್ಬ ಕಾನ್ಸ್‌ಟೇಬಲ್ ನೇಮಕ ಮಾಡಿ. ಕೆಲಸಕ್ಕೆ ಬಾರದ ನೌಕರರ ವಿರುದ್ದ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಹೇಳಿದರು.

news18-kannada
Updated:April 13, 2021, 8:24 PM IST
10 ನಗರಗಳಲ್ಲಿ ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಗೊಳಿಸಿ; ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಕಟ್ಟುನಿಟ್ಟಿನ ಸೂಚನೆ
ಅಧಿಕಾರಿಗಳೊಂದಿಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ.
  • Share this:
ಬೆಂಗಳೂರು: ಪ್ರಾಯೋಗಿಕವಾಗಿ ಹತ್ತು ನಗರಗಳಲ್ಲಿ ಜಾರಿ ಮಾಡಲಾಗಿರುವ ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಗೊಳಿಸಬೇಕೆಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಯುಗಾದಿ ದಿನವೂ ಹಿರಿಯ ಅಧಿಕಾರಿಗಳ ಜೊತೆ ತಮ್ಮ‌ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,  ಪೊಲೀಸ್ ಕಮಿಷನರ್ ಕಮಲ್ ಪಂಥ್, ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. 

ಮೊದಲು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸಭೆ ನಡೆಸಿ, ನಂತರ ಕೋವಿಡ್ ಬಗ್ಗೆಯೂ ಅಧಿಕಾರಗಳ ಜೊತೆ ಚರ್ಚೆ ನಡೆಸಿದ ಸಿಎಂ, ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕುರಿತು ಕ್ಷಣ ಕ್ಷಣದ ಮಾಹಿತಿ ಪಡೆಯಲು  ತೀರ್ಮಾನ ಮಾಡಿದರು. ಕೋವಿಡ್ ಲಸಿಕೆ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ನಿರಂತರ ಸಂಪರ್ಕ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಅವಶ್ಯಕತೆಗೆ ಅನುಗುಣವಾಗಿ‌ ಲಸಿಕೆ ಪಡೆಯಬೇಕು. ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಯಾಗಿ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ, ಮೈಕ್ರೋ ಕಂಟೇನ್ಮೆಂಟ್ ಜೋನ್ ಗಳಲ್ಲಿ ಹೆಚ್ಚಿನ‌ ಟೆಸ್ಟ್ ಮಾಡಲು ತಿಳಿಸಿದರು.

ಇದನ್ನು ಓದಿ: ರಾಮನಗರ- ಚನ್ನಪಟ್ಟಣ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಹವಾ, ಕಾಂಗ್ರೆಸ್ ಸೇಫ್ ಜೋನ್, ಬಿಜೆಪಿ ಫುಲ್ ಫೈಟ್!

ನಿಯಮ ಪಾಲಿಸದಿದ್ದರೆ ಕ್ರಮ ಕೈಗೊಳ್ಳಿ

ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ‌ ಪಾಲಿಸಬೇಕು. ಜನರು ಪಾಲಿಸದಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಸೋಂಕಿತರ ಸಂಪರ್ಕ ಪತ್ತೆ ಹಚ್ಚಲು ಹೆಚ್ಚಿನ‌ ಒತ್ತು‌‌ ನೀಡಬೇಕು. ಮಾಸ್ಕ್ ಹಾಕದವರ, ಕೋವಿಡ್ ನಿಯಮ‌ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ‌ಕ್ಕೆ ಮುಂದಾಗಬೇಕೆಂದು ಹೇಳಿದರು. ವೆಂಟಿಲೇಟರ್ ಲಭ್ಯತೆ ಬಗ್ಗೆ ಕ್ಷಣದ ಕ್ಷಣದ ಮಾಹಿತಿ ಇರಬೇಕು. ಪರಿಸ್ಥಿತಿ ನೋಡಿಕೊಂಡು ನೈಟ್ ಕರ್ಫ್ಯೂ ಮುಂದುವರೆಸುವ ಬಗ್ಗೆ ಚಿಂತನೆ ಇದೆ. ನೈಟ್ ಕರ್ಫ್ಯೂ ನಿಲ್ಲಿಸುವ ಬಗ್ಗೆ ಟಾಸ್ಕ್ ಪೋರ್ಸ್ ಸದಸ್ಯರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡೋಣ. ಸೋಂಕು ಕಾಣಿಸಿಕೊಂಡು ಮನೆಯಲ್ಲಿ ಐಸೋಲೇಷನ್ ಇರುವವರ ಬಗ್ಗೆ ನಿರಂತರ ಮಾಹಿತಿ ಪಡೆಯಬೇಕು. ಯಾವುದೇ‌ ಸಡಿಲಿಕೆ ಇಲ್ಲದೇ ನಿಯಮ ಜಾರಿಯಾಗಬೇಕು. ಈ ಹಿಂದಿನ‌ಂತೆ ಈಗಲೂ ಕ್ರಮ ಅನುಸರಿಸಬೇಕಾದ ಸ್ಥಿತಿ ಇದೆ. ಲಭ್ಯತೆಗೆ ಅನುಗುಣವಾಗಿ ರೆಮಿಡಿಸಿವರ ಅನ್ನು ಖಾಸಗಿ ಆಸ್ಪತ್ರೆಗಳಿಗೆ ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಬಸ್‌ಗೆ ಹಾನಿಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಮಂಗಳವಾರ ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ನೌಕರರ ಮುಷ್ಕರದ ಬಗ್ಗೆಯೂ ಚರ್ಚೆ ನಡೆಸಿದರು. ಕೆಲಸಕ್ಕೆ ಹಾಜರಾಗುವ ಸಾರಿಗೆ ನೌಕಕರಿಗೆ ಭದ್ರತೆ ನೀಡಲು ಸಿಎಂ ಸೂಚನೆ ನೀಡಿದರು. ನಿಗಮದ ಬಸ್‌ಗಳಿಗೆ ಹಾನಿ‌ ಮಾಡುವ ಹಾಗು ನೌಕರರ ಮೇಲೆ ಹಲ್ಲೆ ನಡೆಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. 6ನೇ ವೇತನ‌ ಆಯೋಗದಂತೆ ವೇತನ ಜಾರಿ ಮಾಡುವುದು ಅಸಾಧ್ಯದ ಮಾತು. ಈ ಬಗ್ಗೆ ನೌಕರರಿಗೆ ಮನವರಿಕೆ ಮಾಡಿಕೊಡಬೇಕು. ಬಸ್ ಹಾಗೂ ಕೆಲಸಕ್ಕೆ ಹಾಜರಾಗುವ ಸಿಬ್ಬಂದಿ‌ ಮೇಲೆ‌ ಹಲ್ಲೆ ನಡೆಯುತ್ತಿರುವುದರಿಂದ ಅವಶ್ಯಕತೆ ಇದ್ದರೆ ಪ್ರತಿ ಬಸ್ ಗೆ ಒಬ್ಬ ಕಾನ್ಸ್‌ಟೇಬಲ್ ನೇಮಕ ಮಾಡಿ. ಕೆಲಸಕ್ಕೆ ಬಾರದ ನೌಕರರ ವಿರುದ್ದ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಹೇಳಿದರು.

ವರದಿ : ದಶರಥ್ ಸಾವೂರು
Published by: HR Ramesh
First published: April 13, 2021, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories