ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಿಎಂ ಚಾಲನೆ; ಏಪ್ರಿಲ್​ 26ರಂದು ಸರ್ಕಾರದಿಂದ ನಡೆಯಲಿದೆ ಮೊದಲ ಮದುವೆ

ಏಪ್ರಿಲ್​ 26ರಂದು ಸರ್ಕಾರದಿಂದ ಮೊದಲ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ವಿವಾಹವಾಗಲು ಇಚ್ಚಿಸುವ ವಧು ವರರು ಸರ್ಕಾರದ ಸೌಲಭ್ಯ ಪಡೆಯಲು ಒಂದು ತಿಂಗಳ ಮೊದಲೇ ಹೆಸರು ನೋಂದಾಯಿಸಬೇಕು . 

news18-kannada
Updated:January 10, 2020, 12:35 PM IST
ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಿಎಂ ಚಾಲನೆ; ಏಪ್ರಿಲ್​ 26ರಂದು ಸರ್ಕಾರದಿಂದ ನಡೆಯಲಿದೆ ಮೊದಲ ಮದುವೆ
ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿದ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಜ.10):  ಸರ್ಕಾರದ ವತಿಯಿಂದಲೇ ಬಡವರ ಮದುವೆಗೆ ಪ್ರೋತ್ಸಾಹ ನೀಡುವ ಸಾಮೂಹಿಕ ವಿವಾಹ ಯೋಜನೆಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಚಾಲನೆ ನೀಡಿದರು. 

ವಿಧಾನಸೌಧದಲ್ಲಿ ಈ ಯೋಜನೆಗೆ ಚಾಲನೆ ನೀಡಿದ ಅವರು, ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಡೆಯುವ ಸಪ್ತಪದಿ ಸಾಮೂಹಿಕ ವಿವಾಹದ ಲಾಂಚನ , ಕರಪತ್ರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಸಾಮಾನ್ಯ ವರ್ಗದ ಕುಟುಂಬಗಳು ವಿವಾಹಕ್ಕಾಗಿ ಆಸ್ತಿ ಮಾರಿಕೊಂಡು ತೊಂದರೆ ಅನುಭವಿಸುವುದು ನಮ್ನ ಗಮನಕ್ಕೆ ಬಂದಿದೆ. ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಲ್ಲ ವರ್ಗಗಳ ಅನುಕೂಲಕ್ಕಾಗಿ ಆಯ್ದ ಪ್ರಮುಖ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಏಪ್ರಿಲ್​ 26ರಂದು ಸರ್ಕಾರದಿಂದ ಮೊದಲ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ವಿವಾಹವಾಗಲು ಇಚ್ಚಿಸುವ ವಧು ವರರು ಒಂದು ತಿಂಗಳ ಮೊದಲೇ ಹೆಸರು ನೋಂದಾಯಿಸಬೇಕು ಎಂದರು.ಮದುವೆ ದಿನವೇ ಸರ್ಕಾರದಿಂದ ವಧುವಿಗೆ 10,000 , ವರನಿಗೆ 5000 ರೂ,  ವಧುವಿನ ತಾಳಿಗೆ 40,000 ರೂ ಮೌಲ್ಯದ ತಾಳಿ , ಎರಡು ಚಿನ್ನದ ಗುಂಡು ಕೊಡಲಾಗುವುದು ಎಂದರು.

ಮುಜರಾಯಿ ದೇವಾಲಯಗಳಲ್ಲಿ ಮದುವೆ

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಕೊಲ್ಲೂರಿನ ಮುಕಾಂಬಿಕೆ ದೇವಸ್ಥಾನ, ಮಲೆಮಹದೇಶ್ವರ ದೇವಸ್ಥಾನ ಹಾಗೂ ಬನಶಂಕರಿ ದೇವಸ್ಥಾನ ಸೇರಿ ರಾಜ್ಯದ 100ಕ್ಕೂ ಹೆಚ್ಚು ಎ ದರ್ಜೆಯ ದೇವಾಲಯಗಳಲ್ಲಿ ಸರ್ಕಾರದಿಂದ ಸಾಮೂಹಿಕ ಮದುವೆ ನಡೆಸಲು ಚಿಂತನೆ ನಡೆಸಿದೆ.ಇದನ್ನು ಓದಿ: ವಿರೋಧದ ನಡುವೆ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಶೃಂಗೇರಿ ಬಂದ್​ ಕರೆ ನೀಡಿದ ಸಂಘಟನೆಗಳು

ಇನ್ನು ಈ ಮದುವೆಗೆ ಸರ್ಕಾರದ ವತಿಯಿಂದ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಮದುವೆಯಾಗುವ ಜೋಡಿಗಳಿಗೆ ಕಡ್ಡಾಯವಾಗಿ ಹುಡುಗನಿಗೆ 21, ಹುಡುಗಿಗೆ 18 ವರ್ಷ ತುಂಬಿರಬೇಕು.  ಮದುವೆ ಆಗುವ ಜೋಡಿಗೆ ಪೋಷಕರ ಸಮ್ಮತಿ ಕಡ್ಡಾಯವಾಗಿ ಇರಬೇಕು. ಮದುವೆಯಲ್ಲಿ ಪೋಷಕರ ಹಾಜರಾತಿ ಕಡ್ಡಾಯವಾಗಿದ್ದು, ಒಂದು ವೇಳೆ  ತಂದೆ-ತಾಯಿ ಇಲ್ಲದಿದ್ದರೆ ಸಂಬಂಧಿಕರ ಸಮ್ಮತಿ ಅವರಿಗೆ ಇರಬೇಕು.
First published: January 10, 2020, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading