ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ - 17 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ

ಐಪಿಎಸ್​ ಅಧಿಕಾರಿ ಎಮ್​​​. ಎನ್​​ ಅನುಚೇತ್​​ ಅವರನ್ನು ವೈಟ್​ ಫೀಲ್ಡ್ ವಿಭಾಗದಿಂದ ಕೇಂದ್ರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ರೋಹಿಣಿ ಕಟೋಚ್​ ಅವರನ್ನ ದಕ್ಷಿಣ ವಿಭಾಗದಿಂದ ಸಿಐಡಿಗೆ ವರ್ಗಾವಣೆ ಮಾಡಿದೆ.

news18-kannada
Updated:August 3, 2020, 7:00 PM IST
ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ - 17 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ
ಸಿಎಂ ಬಿ.ಎಸ್​​ ಯಡಿಯೂರಪ್ಪ.
 • Share this:
ಬೆಂಗಳೂರು(ಆ.03): ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, 17 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಐಪಿಎಸ್​ ಅಧಿಕಾರಿ ಎಮ್​​​. ಎನ್​​ ಅನುಚೇತ್​​ ಅವರನ್ನು ವೈಟ್​ ಫೀಲ್ಡ್ ವಿಭಾಗದಿಂದ ಕೇಂದ್ರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ರೋಹಿಣಿ ಕಟೋಚ್​ ಅವರನ್ನ ದಕ್ಷಿಣ ವಿಭಾಗದಿಂದ ಸಿಐಡಿಗೆ ವರ್ಗಾವಣೆ ಮಾಡಿದೆ.

ಇನ್ನು, ಹರೀಶ್ ಪಾಂಡೆಯವರನ್ನು ದಕ್ಷಿಣ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ವೈಟ್​ ಫೀಲ್ಡ್​​ ವಿಭಾಗಕ್ಕೆ ಡಿ. ದೇವರಾಜು ವರ್ಗಾವಣೆ ಮಾಡಲಾಗಿದೆ. ಸಂಜೀವ್ ಪಾಟೀಲ್ ಪಶ್ಚಿಮ ವಿಭಾಗಕ್ಕೆ ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ.

ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಸಿಐಡಿಗೆ ವರ್ಗಾವಣೆ ಮಾಡಿದ್ದಾರೆ. ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಸ್ಥಳಕ್ಕೆ ಧರ್ಮೇಂದರ್ ಕುಮಾರ್ ಮೀನಾ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳ ಲೀಸ್ಟ್​ ಹೀಗಿದೆ...

 • ಉಮೇಶ್ ಕುಮಾರ್-ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧ
 • ರೂಪಾ ಡಿ - ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ

 • ಎನ್. ಶಶಿಕುಮಾರ್- ಎಸ್​​ಪಿ, ವೈರ್​​ಲೆಸ್, ಬೆಂಗಳೂರು

 • ಡಾ. ರೋಹಿಣಿ ಕಟೋಚ್- ಎಸ್​​ಪಿ, ಸಿಐಡಿ

 • ಎಂ.ಎನ್. ಅನುಚೇತ್- ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ

 • ಬಿ. ರಮೇಶ್- ಎಸ್​​ಪಿ, ಸಿಐಡಿ

 • ಈಡಾ ಮಾರ್ಟಿನ್ ಮಾರ್ಬನ್ಯಾಂಗ್ - ಎಸ್​​​ಪಿ, ಎಎನ್ಎಫ್, ಕಾರ್ಕಳ

 • ನಿಕ್ಕಂ ಪ್ರಕಾಶ್ ಅಮೃತ್- ಎಸ್​​ಪಿ, ರಾಯಚೂರು

 • ಇಲಕ್ಕಿಯಾ ಕರುಣಾಗರನ್ - ಎಸ್​​ಪಿ, ಕೆಜಿಎಫ್

 • ಧರ್ಮೇಂದರ್ ಕುಮಾರ್ ಮೀನಾ- ಡಿಸಿಪಿ, ಉತ್ತರ ವಿಭಾಗ, ಬೆಂಗಳೂರು ನಗರ

 • ಡಾ. ಸುಮನ್ ಪೆನ್ನೇಕರ್- ಉಪ ನಿರ್ದೇಶಕಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು

 • ಹರೀಶ್ ಪಾಂಡೆ- ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು ನಗರ

 • ಮೊಹಮ್ಮದ್ ಸುಜೀತ- ಡಿಸಿಪಿ, ಸಿಎಆರ್ ಬೆಂಗಳೂರು

 • ಸಿಮಿ ಮರಿಯಂ ಜಾರ್ಜ್- ಎಸ್​​ಪಿ, ಕಲ್ಬುರ್ಗಿ

 • ಡಾ. ಸಿ.ಬಿ. ವೇದಮೂರ್ತಿ- ಎಸ್​​ಪಿ, ಗುಪ್ತಚರ, ಬೆಂಗಳೂರು

 • ಡಿ. ದೇವರಾಜ- ಡಿಸಿಪಿ, ವೈಟ್ ಫೀಲ್ಡ್, ಬೆಂಗಳೂರು

 • ಸಂಜೀವ್ ಎಂ. ಪಾಟೀಲ್- ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು ನಗರಇದನ್ನೂ ಓದಿ: ಕೊರೋನಾ ವ್ಯಾಪಕವಾಗಿ ಹರಡುವ ಸಂದರ್ಭದಲ್ಲಿ ರಾಮ ಮಂದಿರ ಶಂಕುಸ್ಥಾಪನೆ ಮುಂದೂಡಬಾರದೇಕೆ?; ದಿಗ್ವಿಜಯ್‌ ಸಿಂಗ್ ಪ್ರಶ್ನೆ
Published by: Ganesh Nachikethu
First published: August 3, 2020, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading