HOME » NEWS » State » CM BS YEDIYURAPPA INVITES DR MANJUNATH FOR DASARA INAUGURATION SESR PMTV

ದಸರಾ ಉದ್ಘಾಟಕರಾದ ಡಾ.ಮಂಜುನಾಥ್​ರಿಗೆ​ ಅಧಿಕೃತ ಆಮಂತ್ರಣ ನೀಡಿದ ಸಿಎಂ

ಕೊರೋನಾ ಕರಿಛಾಯೆ ನಡುವೆ ದಸರಾವನ್ನು ಸರಳವಾಗಿ ಅಚ್ಚುಕಟ್ಟಾಗಿ ಮಾಡುವುದು ಈಗ ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಿರುವುದು ಮತ್ತಷ್ಟು ಸವಾಲಿನ ಕೆಲಸವಾಗಿದೆ.

news18-kannada
Updated:October 12, 2020, 6:15 PM IST
ದಸರಾ ಉದ್ಘಾಟಕರಾದ ಡಾ.ಮಂಜುನಾಥ್​ರಿಗೆ​ ಅಧಿಕೃತ ಆಮಂತ್ರಣ ನೀಡಿದ ಸಿಎಂ
ಡಾ. ಮಂಜುನಾಥ್​ರಿಗೆ ಆಮಂತ್ರಣ ನೀಡಿದ ಮುಖ್ಯಮಂತ್ರಿಗಳು
  • Share this:
ಬೆಂಗಳೂರು (ಅ. 12): ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್​ ಮಂಜುನಾಥ್​ಗೆ ಇಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ದನ್, ಮೇಯರ್ ತಸ್ನೀಂ ಸ್ವಾಗತ ಕೋರಿದರು.  ಈ ವೇಳೆ ಅವರಿಗೆ ಮೈಸೂರು ಪೇಟ ತೋಡಿಸಿ ತಂಬೂಲ ನೀಡಿ ಆಹ್ವಾನಿಸಲಾಯಿತು. ಇದೇ ಸಂದರ್ಭದಲ್ಲಿ  ದಸರಾ ಸ್ವಾಗತ ಸಮಿತಿ  ಸದಸ್ಯರಾದ ಅಶ್ವತ್ಥ್​ ನಾರಾಯಣ್​ ಸೇರಿದಂತೆ ಅನೇಕರಿಗೆ ಆಹ್ವಾನ ನೀಡಲಾಯಿತು. ದಸರಾ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ನಿಟ್ಟಿನಲ್ಲಿ ಆಚರಣೆಯ ರೂಪುರೇಷದ ಕುರಿತು ಸಚಿವ ಸುಧಾಕರ್​ ಸರಣಿ ಸಭೆ ನಡೆಸಿದರು.

ಕೊರೋನಾ ಕರಿಛಾಯೆ ನಡುವೆ ದಸರಾವನ್ನು ಸರಳವಾಗಿ ಅಚ್ಚುಕಟ್ಟಾಗಿ ಮಾಡುವುದು ಈಗ ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಿರುವುದು ಮತ್ತಷ್ಟು ಸವಾಲಿನ ಕೆಲಸವಾಗಿದೆ.  ಈ ಹಿನ್ನಲೆ ಸೋಂಕು ಹರಡದಂತೆ ಯಾವ ರೀತಿ ದಸರಾ ಆಚರಣೆ ಮಾಡಬೇಕೆಂಬುದು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಸಚಿವ ಸುಧಾಕರ್​ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.
ಮೈಸೂರಿನಲ್ಲಿ ಸಾವಿನ ಸಂಖ್ಯೆಯನ್ನು ಶೇ.1ಕ್ಕೆ ಇಳಿಸುವುದು.  ಕರೊನಾ ಹರಡದಂತೆ ಅಚ್ಚುಕಟ್ಟಾಗಿ ದಸರಾ ಮಾಡುವುದು ನಮ್ಮ ಆದ್ಯತೆ ಅಂತ ತಿಳಿಸಿದರು


ಜಂಬೂ ಸವಾರಿಗೆ 2000 ಜನ ಸೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಕೋವಿಡ್  ಬಂದ ಮೇಲೆ ಯಾವೊಂದು ಸಭೆ, ಸಮಾರಂಭ, ಧಾರ್ಮಿಕ ಕಾರ್ಯಗಳಿಗೂ ಅಷ್ಟು ಜನ ಸೇರಲು ಅವಕಾಶ ನೀಡಿಲ್ಲ. ಹೀಗಾಗಿ ಅಂತಿಮವಾಗಿ 300 ಗಣ್ಯರಿಗೆ ಮಾತ್ರ ಜಂಬೂ ಸವಾರಿಯನ್ನು ಮಿತಿಗೊಳಿಸಿಕೊಳ್ಳಲಾಗಿದೆ. ಅಲ್ಲಿಯೂ ಸಾಮಾಜಿಕ ಅಂತರ ಕಾಪಾಡೋದು ಸವಾಲು. ಹೀಗಾಗಿ ಅಂತಿಮ ಹಂತದ ಸಿದ್ಧತೆಗಳಲ್ಲಿ ಜಿಲ್ಲಾಡಳಿತ ತಲ್ಲೀನವಾಗಿದೆ. ಈ ಕುರಿತು ಕೈಗೊಂಡ ಕ್ರಮಗಳನ್ನು ಮುಖ್ಯಮಂತ್ರಿಗಳೊಡನೆ ಸಚಿವರು ಚರ್ಚಿಸಿದರು.
Published by: Seema R
First published: October 12, 2020, 6:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories