ಚಿತ್ರಸಂತೆಗೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ; ಬಜೆಟ್​ನಲ್ಲಿ 1 ಕೋಟಿ ಹಣ ಮೀಸಲಿಡಲು ಒಪ್ಪಿಗೆ

ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಣೆ ಮಾಡಿರುವುದು ನನ್ನ ಮನಸ್ಸಿಗೆ ಹತ್ತಿರವಾಗಿದೆ.  ಗ್ರಾಮೀಣ ಸ್ವರಾಜ್ಯದ ವಿಚಾರ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ. ಮಧ್ಯವರ್ತಿಗಳ ಕಾಟವಿಲ್ಲದೇ ಕಲೆಯನ್ನು ನೇರಾ ಮಾರಾಟ ಮಾಡುವುದು ಖುಷಿಯ ವಿಚಾರ- ಬಿಎಸ್​ವೈ

Latha CG | news18-kannada
Updated:January 5, 2020, 12:05 PM IST
ಚಿತ್ರಸಂತೆಗೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ; ಬಜೆಟ್​ನಲ್ಲಿ 1 ಕೋಟಿ ಹಣ ಮೀಸಲಿಡಲು ಒಪ್ಪಿಗೆ
ಸಿಎಂ ಬಿ.ಎಸ್. ಯಡಿಯೂರಪ್ಪ
  • Share this:
ಬೆಂಗಳೂರು(ಜ.05): ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ  ಆಯೋಜಿಸಲಾಗಿರುವ ಚಿತ್ರಸಂತೆಗೆ ಸಿಎಂ ಬಿಎಸ್​ ಯಡಿಯೂರಪ್ಪ ಚಾಲನೆ ನೀಡಿದರು.  ಮನೆಗೊಂದು ಕಲಾಕೃತಿ ಶೀರ್ಷಕೆಯಡಿ ನಡೆಯುತ್ತಿರುವ ಈ ಬಾರಿಯ ಚಿತ್ರಸಂತೆಯನ್ನು ನೇಗಿಲಯೋಗಿ ರೈತರಿಗೆ ಸಮರ್ಪಣೆ ಮಾಡಲಾಗಿದೆ. ಇದೇ ವೇಳೆ ಚಿತ್ರಸಂತೆಗೆ ಬಜೆಟ್​​ನಲ್ಲಿ 1 ಕೋಟಿ ಹಣ ಮೀಸಲಿಡಲು ಸಿಎಂ ಬಿಎಸ್​ವೈ ಒಪ್ಪಿಗೆ ನೀಡಿದ್ದಾರೆ. 

ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿಎಲ್ ಶಂಕರ್ ಮಾತನಾಡಿ,"ಸಿಎಂ ಯಡಿಯೂರಪ್ಪನವರ ಮುಂದೆ ಎರಡು ಬೇಡಿಕೆಗಳನ್ನು ಇಟ್ಟಿದ್ದೆವು. ಪೂರ್ಣಚಂದ್ರ ತೇಜಸ್ವಿ ಹೆಸರಲ್ಲಿ ಜಾಗ ಕೇಳಿದ್ದೆವು. ಅದನ್ನು ಕೊಟ್ಟಿದ್ದಾರೆ. ಉದಾರವಾಗಿ ಸಹಾಯ ಮಾಡುವ ಮನಸು  ಸಿಎಂ ಅವರದ್ದು. ಅದರಂತೆ ಇವತ್ತು ಸಿಎಂ ಮುಂದೆ ನಾನು ಎರಡು ವಿನಂತಿ ಇಟ್ಟಿದ್ದೆ.  ಚಿತ್ರಸಂತೆಗೆ ಎಷ್ಟು ಖರ್ಚಾಗುತ್ತೋ ಅಷ್ಟರಲ್ಲಿ ಅರ್ಧ ವೆಚ್ಚ ಭರಿಸಬೇಕು. ಈ ಬಾರಿ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಹಣವನ್ನ ಚಿತ್ರಸಂತೆಗೆ ಕೊಡಬೇಕು. ಡಿಸೈನ್ ಕಾಲೇಜ್ ಮಾಡಬೇಕು ಎನ್ನುವ ಉದ್ದೇಶ ಇದ್ದು, ಇದಕ್ಕೆ ಪ್ರೊತ್ಸಾಹ ನೀಡಬೇಕು ಎಂದು ಹೇಳಿದ್ದೆವು. ಅದರಂತೆ ಸಿಎಂ ಚಿತ್ರಸಂತೆಗೆ ಒಂದು ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲು ಒಪ್ಪಿಗೆ ನೀಡಿದ್ದಾರೆ," ಎಂದು ಹರ್ಷ ವ್ಯಕ್ತಪಡಿಸಿದರು.

ಚಿತ್ರಸಂತೆಗೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ; ಬಜೆಟ್​ನಲ್ಲಿ 1 ಕೋಟಿ ಹಣ ಮೀಸಲಿಡಲು ಒಪ್ಪಿಗೆ

ಚಿತ್ರಸಂತೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಿಎಸ್​ ಯಡಿಯೂರಪ್ಪ, "ಮಣಿಪುರ, ಮಿಜರಾಮ್ ಸೇರಿ 18 ರಾಜ್ಯಗಳಿಂದ ಕಲಾವಿದರು  ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾರೆ.  ಚಿತ್ರಸಂತೆ ಎಲ್ಲರ ಗಮನ ಸೆಳೆಯುತ್ತದೆ. ಚಿತ್ತಾರಗಳು ಚಿತ್ತಗಳನ್ನು ಸೆಳೆಯುತ್ತಿವೆ.  ಚಿತ್ರಕಲೆಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು," ಎಂದರು. ಇದೇ ವೇಳೆ, ಕಲಾಭಿಮಾನಿಗಳಿಗೆ ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

"ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಣೆ ಮಾಡಿರುವುದು ನನ್ನ ಮನಸ್ಸಿಗೆ ಹತ್ತಿರವಾಗಿದೆ.  ಗ್ರಾಮೀಣ ಸ್ವರಾಜ್ಯದ ವಿಚಾರ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ. ಮಧ್ಯವರ್ತಿಗಳ ಕಾಟವಿಲ್ಲದೇ ಕಲೆಯನ್ನು ನೇರಾ ಮಾರಾಟ ಮಾಡುವುದು ಖುಷಿಯ ವಿಚಾರ. ನಾವೆಲ್ಲ ರಸ್ತೆಯಲ್ಲಿರುವ ಚಿತ್ರಗಳನ್ನು ನೋಡಲು ಒಂದು ದಿನ ಸಾಲುವುದಿಲ್ಲ. ದೇಶದಲ್ಲಿಯೇ ಅಪರೂಪದ ಸಂಗತಿ. ಬಜೆಟ್​​​ನಲ್ಲಿ 1 ಕೋಟಿ ರೂ ಕೊಡುವ ಮೂಲಕ ನಿಮ್ಮ ಸರ್ಕಾರ ಜೊತೆಗಿದೆ ಎಂದು ಹೇಳಲು ಹರ್ಷಪಡುತ್ತೇನೆ," ಎಂದರು.

ಡಿಸಿ ಮಾತ್ರ ಅಲ್ಲ, ಪಕ್ಷಿ ವೀಕ್ಷಕರೂ ಹೌದು; ಮೈಸೂರು ಜಿಲ್ಲಾಧಿಕಾರಿಯ ಹವ್ಯಾಸ ಎಲ್ಲರಿಗೂ ಸ್ಪೂರ್ತಿ

ಚಿತ್ರಸಂತೆಯು ಇಂದು ರಾತ್ರಿ 8 ಗಂಟೆವರೆಗೂ ನಡೆಯಲಿದೆ. ನೇಗಿಲಯೋಗಿ ರೈತರಿಗೆ ಈ ಬಾರಿಯ ಚಿತ್ರಸಂತೆ ಸಮರ್ಪಣೆ ಮಾಡಲಾಗಿದೆ. ಚಿತ್ರ ಸಂತೆಯಲ್ಲಿ ರಾಜ್ಯದ ಕಲಾವಿದರು ಸೇರಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಒಡಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ ಸುಮಾರು 1500ಕ್ಕೂ ಹೆಚ್ಚಿನ ಕಲಾವಿದರು ಭಾಗಿಯಾಗಿದ್ದಾರೆ. ಚಿತ್ರಸಂತೆ ಹಿನ್ನೆಲೆ ಕುಮಾರಕೃಪ ರಸ್ತಯಿಂದ ಕ್ರಸೆಂಟ್​ ರಸ್ತೆ ತನಕ ಸಂಪೂರ್ಣ ರಸ್ತೆ ಬಂದ್ ಆಗಿದೆ.

 
First published:January 5, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ