ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ - ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಹೈಕಮಾಂಡ್​​ ಜತೆ ಚರ್ಚೆ

ಇನ್ನು, ಬಿಎಸ್​ ಯಡಿಯೂರಪ್ಪ ಜತೆ ಪುತ್ರ ಬಿವೈ ವಿಜಯೇಂದ್ರ ಕೂಡ ಆಗಮಿಸಿದ್ದಾರೆ. ಹಾಗೆಯೇ ಬಿಜೆಪಿ ಸಂಸದರಾದ ಬಿವೈ ರಾಘವೇಂದ್ರ ಮತ್ತು ಪಿಸಿ ಮೋಹನ್​​ ಕೂಡ ಯಡಿಯೂರಪ್ಪನವರ ಜತೆಯಲ್ಲಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ-ಪ್ರಧಾನಿ ಮೋದಿ

ಸಿಎಂ ಬಿಎಸ್​ ಯಡಿಯೂರಪ್ಪ-ಪ್ರಧಾನಿ ಮೋದಿ

 • Share this:
  ನವದೆಹಲಿ(ಸೆ.17): ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಹೈಕಮಾಂಡ್​​​​ ಜತೆ ಚರ್ಚಿಸಲು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದಿಢೀರ್ ದೆಹಲಿಗೆ ಆಗಮಿಸಿದ್ದಾರೆ. ಹಲವು ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಲುವಾಗಿ ಯಡಿಯೂರಪ್ಪ ಮೂರು ದಿನ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ದೆಹಲಿಗೆ ಬಂದಿಳಿದ ಕೂಡಲೇ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಯಡಿಯೂರಪ್ಪ, ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುತ್ತೇನೆ. ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇನೆ. ರಾಜ್ಯದ ಅಭಿವೃದ್ದಿ ಸೇರಿದಂತೆ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೂಡ ಹೈಕಮಾಂಡ್ ಜತೆ ಚರ್ಚಿಸುತ್ತೇನೆ. ಸಂಪುಟ ವಿಸ್ತರಣೆಯೋ, ಪುನರ್​​ರಚನೆಯೋ ಎಂಬ ಬಗ್ಗೆ ಗೊತ್ತಿಲ್ಲ. ಹೈಕಮಾಂಡ್​​ ಭೇಟಿ ಮಾಡಿದ ಬಳಿಕ ಯಾವಾಗ ಸಂಪುಟ ವಿಸ್ತರಣೆ ಎನ್ನುವ ಬಗ್ಗೆ ಗೊತ್ತಾಗಲಿದೆ. ಇದೇ ವಿಷಯವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಚರ್ಚೆ ಮಾಡುತ್ತೇನೆ ಎಂದರು.

  ರಾಜ್ಯದ ಅಭಿವೃದ್ದಿ ಸಂಬಂಧ ಹಲವಾರು ಕೆಲಸಗಳಿಗೆ. ಇದರ ಬಗ್ಗೆ ಚರ್ಚಿಸಲು ಕೇಂದ್ರ ಸಚಿವರನ್ನು ಭೇಟಿಯಾಗಬೇಕಿದೆ. ಮೊದಲು ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ಹತ್ತಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವೆ. ಇದಾದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಮಾತಾಡುತ್ತೇನೆ ಎಂದರು.

  ಇನ್ನು, ಬಿಎಸ್​ ಯಡಿಯೂರಪ್ಪ ಜತೆ ಪುತ್ರ ಬಿವೈ ವಿಜಯೇಂದ್ರ ಕೂಡ ಆಗಮಿಸಿದ್ದಾರೆ. ಹಾಗೆಯೇ ಬಿಜೆಪಿ ಸಂಸದರಾದ ಬಿವೈ ರಾಘವೇಂದ್ರ ಮತ್ತು ಪಿಸಿ ಮೋಹನ್​​ ಕೂಡ ಯಡಿಯೂರಪ್ಪನವರ ಜತೆಯಲ್ಲಿದ್ದಾರೆ.

  ರಾಜ್ಯದ ಪ್ರವಾಹ ಪರಿಹಾರ ನಿರ್ವಹಣೆಗೆ ಸಿಎಂ ಕೇಂದ್ರದಿಂದ 8 ಸಾವಿರ ಕೋಟಿ ಅನುದಾನ ಕೋರಿದ್ದರು. ಆದರೆ ಕೇಂದ್ರ ಸರ್ಕಾರ ಈ ಪೈಕಿ ಶೇ.10 ರಷ್ಟು ಮಾತ್ರ ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿಎಂ ಹೆಚ್ಚಿನ ಅನುದಾನ ಕೋರುವುದರೊಂದಿಗೆ ಕಳೆದ ವರ್ಷದಿಂದ ಉಂಟಾದ ಪ್ರವಾಹ ಹಾನಿಯ ಸಂಬಂಧವು ಚರ್ಚಿಸಲಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ: ’ಹಿಂದಿಯಂತೆಯೇ ಕನ್ನಡಕ್ಕೂ ಸ್ಥಾನಮಾನ ನೀಡಲೇಬೇಕು‘ - ಕೇಂದ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯ

  ಶುಕ್ರವಾರ ಬೆಳಗ್ಗೆ 9ಕ್ಕೆ ಕರ್ನಾಟಕ ಭವನ-1 (ಕಾವೇರಿ) ಪುನರ್‌ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಿದ್ದಾರೆ. ನಂತರ ಮತ್ತೆ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ. ಶನಿವಾರವೂ ಕೇಂದ್ರ ಸಚಿವರ ಭೇಟಿ ಕಾರ್ಯಕ್ರಮವಿದೆ.
  Published by:Ganesh Nachikethu
  First published: