HOME » NEWS » State » CM BS YEDIYURAPPA HOLD PRESS MEET AFTER BUDGET PRESENTATION RH

Karnataka Budget 2020 | ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಗಣನೀಯವಾಗಿ ಕಡಿಮೆಯಾಗಿದೆ, ಜಿಎಸ್​ಟಿಯಿಂದಲೂ ರಾಜ್ಯಕ್ಕೆ ಹಿನ್ನಡೆ; ಸಿಎಂ ಬಿಎಸ್​ವೈ

ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಗಣನೀಯವಾಗಿ ಕಡಿಮೆ ಆಗಿದೆ. ಜಿಎಸ್​ಡಿ ಪರಿಹಾರ ಕೂಡ ಕಡಿಮೆಯಾಗಿದೆ.  ಜಿಎಸ್ಟಿಯಿಂದ ಇಡೀ ದೇಶದಲ್ಲಿ ಕರ್ನಾಟಕ್ಕೆ ಹಿನ್ನಡೆ ಆಗಿದೆ. ಇದರಿಂದ ರಾಜ್ಯದ ಸಂಪನ್ಮೂಲ 15 ಸಾವಿರ ಕಡಿಮೆ ಆಗಿದೆ ಎಂದು ಬಿಎಸ್​ವೈ ಬೇಸರ ಹೊರಹಾಕಿದರು.

news18-kannada
Updated:March 5, 2020, 3:47 PM IST
Karnataka Budget 2020 | ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಗಣನೀಯವಾಗಿ ಕಡಿಮೆಯಾಗಿದೆ, ಜಿಎಸ್​ಟಿಯಿಂದಲೂ ರಾಜ್ಯಕ್ಕೆ ಹಿನ್ನಡೆ; ಸಿಎಂ ಬಿಎಸ್​ವೈ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು: ಇಂದು ಮಂಡನೆಯಾದ ಬಜೆಟ್ ದೂರದೃಷ್ಟಿಯುಳ್ಳ ಬಜೆಟ್ ಆಗಿದೆ. ಕೃಷಿಗೆ ಹೆಚ್ಚು ಒತ್ತು ನೀಡಿ, ರೈತರ ಆರ್ಥಿಕತೆ ಬಲಪಡಿಸುವ ಬಜೆಟ್ ಇದಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್​ವೈ, ಕೃಷಿ  ನೆಲಗಟ್ಟಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡಲಾಗಿದೆ. ಕೃಷಿ ಉತ್ತೇಜನಕ್ಕಾಗಿ ಭೂ ಮತ್ತು ಜಲ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಏತ ನೀರಾವರಿಗೆ 5 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಮಳೆಯಾಧಾರಿತ ಕೃಷಿ ಯೋಜನೆ ರೂಪಿಸಲಾಗಿದೆ. ಹಾಗೆಯೇ ಆಡಳಿತ ಸುಧಾರಣೆಗೆ ಹಲವು ಯೋಜನೆ ಜಾರಿ ಮಾಡಲಾಗಿದೆ.  ಬೆಳಗಾವಿ ಸುವರ್ಣ ಸೌಧಕ್ಕೆ ಕೆಲ ಇಲಾಖೆಗಳ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮಕ್ಕ ಹೆಚ್ಚು ಒತ್ತು ನೀಡಲಾಗಿದ್ದು, 500 ಕೋಟಿ ಮೀಸಲಿಡಲಾಗಿದೆ. ಕಳಸ ಬಂಡೂರಿಗೆ 500 ಕೋಟಿ ಮೀಸಲಿಡಲಾಗಿದ್ದು, ಕಳಸಾ ಬಂಡೂರಿ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಎತ್ತಿನ ಹೊಳೆಗೆ‌ 1500 ಕೋಟಿ ನೀಡಲಾಗಿದೆ. ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ ಎಂದು ಹೇಳಿದರು.

ಒಟ್ಟಾರೆ ಬಜೆಟ್ ಗಾತ್ರ 2,37,893 ಕೋಟಿ ಆಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಗಣನೀಯವಾಗಿ ಕಡಿಮೆ ಆಗಿದೆ. ಜಿಎಸ್​ಡಿ ಪರಿಹಾರ ಕೂಡ ಕಡಿಮೆಯಾಗಿದೆ.  ಜಿಎಸ್ಟಿಯಿಂದ ಇಡೀ ದೇಶದಲ್ಲಿ ಕರ್ನಾಟಕ್ಕೆ ಹಿನ್ನಡೆ ಆಗಿದೆ. ಇದರಿಂದ ರಾಜ್ಯದ ಸಂಪನ್ಮೂಲ 15 ಸಾವಿರ ಕಡಿಮೆ ಆಗಿದೆ. ಹಾಗಾಗಿ ರಾಜ್ಯದ ಸಂಪನ್ಮೂಲ ಕಳೆದ ವರ್ಷಗಳಿಗೆ ಹೊಲಿಸಿದರೆ ಈ ಬಾರಿ 15 ಸಾವಿರ ಕೋಟಿ ಕಡಿಮೆಯಾಗಿದೆ. ಕೇಂದ್ರದಿಂದ ಅನುದಾನ ಕಡಿಮೆ ಆಗಿದೆ. ಆರ್ಥಿಕ ಪರಿಸ್ಥಿತಿ‌ ಸ್ವಲ್ಪ ಸರಿ ಇಲ್ಲ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಆರ್ಥಿಕ ಸ್ಥಿತಿಯನ್ನು ಸರಿ ದಾರಿಗೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ಸಂಪನ್ಮೂಲ ಕ್ರೋಡೀಕರಣಕ್ಕೆ ತೆರಿಗೆ ಹೆಚ್ಚಳ ಅನಿವಾರ್ಯ. ಇದರಿಂದ 1500 ಕೋಟಿ ನಿರೀಕ್ಷೆ ಮಾಡಿದ್ದೇವೆ. ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಳದಿಂದ 1500 ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಲಿಕ್ಕರ್​ನಿಂದ ಇಂದ 1200 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: Karnataka Budget Updates: ಮಾತು ತಪ್ಪಿದ ಸಿಎಂ ಯಡಿಯೂರಪ್ಪ, ರೈತರ ಬೆಳೆ ಸಾಲಮನ್ನಾ ಮಾಡದ ಸರ್ಕಾರ

ಕೃಷಿ, ನೀರಾವರಿಗೆ ಆದ್ಯತೆ ಸೇರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿದ್ದೇವೆ. ರೈತರ ಸಾಲ ಮನ್ನಾದಿಂದ ಉಂಟಾದ ಸಮಸ್ಯೆಯನ್ನು ಸರಿಪಡಿಸುವ ಕೆಲಸ ನಡೆದಿದೆ. ಹಿಂದಿನ ಸರ್ಕಾರ ಮಾಡಿದ ಸಾಲ ಮನ್ನಾ,  ಇನ್ನೊಂದು ಕಡೆ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಬಂದಿಲ್ಲ. ಹೀಗಾಗಿ ಬೆಲೆ ಹೆಚ್ಚಳ ಮಾಡೋದು ಅನಿವಾರ್ಯವಾಗಿದೆ ಎಂದರು.
Youtube Video
 
First published: March 5, 2020, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories