HOME » NEWS » State » CM BS YEDIYURAPPA HAPPY ABOUT INVEST KARNATAKA DONE SUCCESSFULLY SESR

ಇನ್ವೆಸ್ಟ್​ ಕರ್ನಾಟಕ ಯಶಸ್ವಿ; ಒಂದು ಲಕ್ಷ ಕೋಟಿಗೂ ಅಧಿಕ ಒಡಂಬಡಿಕೆ: ಸಿಎಂ ಬಿಎಸ್​ ಯಡಿಯೂರಪ್ಪ

ಬಂಡವಾಳ ಹೂಡಿಕೆದಾರರ ಸಮಾವೇಶ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಎರಡನೆಯ ಹಂತದ ನಗರಗಳಲ್ಲಿ ಸಮಾವೇಶ ಆಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ- ಜಗದೀಶ್​ ಶೆಟ್ಟರ್​​

news18-kannada
Updated:February 14, 2020, 3:22 PM IST
ಇನ್ವೆಸ್ಟ್​ ಕರ್ನಾಟಕ ಯಶಸ್ವಿ; ಒಂದು ಲಕ್ಷ ಕೋಟಿಗೂ ಅಧಿಕ ಒಡಂಬಡಿಕೆ: ಸಿಎಂ ಬಿಎಸ್​ ಯಡಿಯೂರಪ್ಪ
ಸಮಾವೇಶ ಉದ್ಘಾಟಿಸಿದ ಸಿಎಂ
  • Share this:
ಹುಬ್ಬಳ್ಳಿ(ಫೆ.14): ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ಸಿಎಂ ಬಿಎಸ್​ ಯಡಿಯೂರಪ್ಪ ಚಾಲನೆ ನೀಡಿದರು. 

ದೇಶದ ಪ್ರತಿಷ್ಠಿತ ಉದ್ಯಮಿಗಳು,‌ ಉದ್ಯಮ ಸಂಸ್ಥೆಯ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದು,  ಒಂದು ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಿಎಸ್​ ಯಡಿಯೂರಪ್ಪ, ಇನ್ವೆಸ್ಟ್​ ಕರ್ನಾಟಕ ಸಮಾವೇಶ ಯಶಸ್ವಿಯಾಗಿದ್ದು, 1 ಲಕ್ಷ ಕೋ.ಗೂ ಅಧಿಕ ಒಡಂಬಡಿಕೆಯಾಗಿದೆ. ರಾಜ್ಯದ ಇತಿಹಾಸದಲ್ಲೇ ಇದು ದಾಖಲೆ ಕಾರ್ಯಕ್ರಮ ಎಂದರು. 

ದೇಶ ಐದು ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಬೇಕು. ಅದಕ್ಕೆ ಪೂರಕವಾದ ಕೆಲಸಗಳನ್ನು ರಾಜ್ಯದಲ್ಲಿ ಮಾಡಿ ತೋರಿಸುತ್ತೇವೆ. ಹೂಡಿಕೆದಾರರನ್ನು ಸೆಳೆಯಲು ಕೈಗಾರಿಕಾ ನೀತಿಗೆ ತಿದ್ದುಪಡಿ ಮಾಡಲಾಗುತ್ತಿದೆ. ಬೆಂಗಳೂರಿನ ಹೊರಗೆ ಎರಡನೆ, ಮೂರನೆ ಹಂತದ ನಗರಗಳು ಬೆಳೆಯಬೇಕು.  ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಎಲ್ಲಾ ಸಹಾಯ, ಸಹಕಾರ ಕೊಡಲು ಸಿದ್ಧ ಎಂಬ ಭರವಸೆ ನೀಡಿದರು.

 ಬಂಡವಾಳ ಹೂಡಿಕೆದಾರರ ಸಮಾವೇಶ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಎರಡನೆಯ ಹಂತದ ನಗರಗಳಲ್ಲಿ ಸಮಾವೇಶ ಆಗಬೇಕೆಂಬುದು ನಮ್ಮೆಲ್ಲರ ಆಶಯವಾಗಿತ್ತು. ಮುಖ್ಯಮಂತ್ರಿಗಳು ಕೂಡ ಇದಕ್ಕೆ ಸಹಕಾರ, ಬೆಂಬಲ ನೀಡಿದರು ಎಂದು ಬೃಹತ್​ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್​ ತಿಳಿಸಿದರು.ಕರ್ನಾಟಕ ಮೊದಲಿನಿಂದಲೂ ಕೈಗಾರಿಕಾ ಸ್ನೇಹಿ ರಾಜ್ಯ. ಬೆಂಗಳೂರು ಬಿಟ್ಟರೆ ಎರಡನೆಯ ಹಂತದ ನಗರಗಳಿಗೆ ಕೈಗಾರಿಕೆಗಳು ಬರುತ್ತಿಲ್ಲ ಎನ್ನುವ ಕೂಗಿತ್ತು. ಈ ಹಿನ್ನೆಲೆಯಲ್ಲಿಯೇ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ.ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ಕೊಡಲು, ಅನುಮತಿ ಸರಳೀಕರಿಸಲು ನಿರ್ಧರಿಲಾಗಿದ್ದು, ಭೂಮಿ ಹಸ್ತಾಂತರಕ್ಕೆ ಇರುವ ನಿಯಮಗಳನ್ನು ಸರಳ ಮಾಡಲಾಗುವುದು ಎಂಬ ಭರವಸೆ ನೀಡಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ದೇಶದಲ್ಲಿ 4ನೇ ದೊಡ್ಡ ಆರ್ಥಿಕ ಶಕ್ತಿ ಇರುವ ರಾಜ್ಯ ಕರ್ನಾಟಕವಾಗಿದೆ, ಐಟಿ, ಬಯೋಟೆಕ್ ಉದ್ಯಮಕ್ಕೆ ರಾಜ್ಯ ಮಾದರಿಯಾಗಿದೆ. ಸರ್ಕಾರ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸುತ್ತಿದ್ದು, ಏಕರೂಪ ತೆರಿಗೆ ನೀತಿ ಉದ್ಯಮಕ್ಕೆ ಪೂರಕವಾಗಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ 1 ಲಕ್ಷ ಕೋಟಿ ನೀಡಲಾಗಿದೆ. ಕಡೆಚೂರ ಬಳಿ ಔಷಧಿ ಪಾರ್ಕ್ ನಿರ್ಮಾಣಕ್ಕೆ ಸಿದ್ಧತೆ ಜೊತೆಗೆ ಧಾರವಾಡದಲ್ಲಿ ಸಿಪೆಟ್  ಸ್ಥಾಪನೆಯ ಒಡಂಬಡಿಕೆ ಮಾಡಲಾಗುವುದು ಎಂದು ಘೋಷಿಸಿದರು.

ಇದನ್ನು ಓದಿ: ಅರಣ್ಯ ಸಚಿವ ಆನಂದ್ ಸಿಂಗ್ ಮೇಲಿನ ಪ್ರಕರಣಗಳ ಮಾಹಿತಿ ಕೇಳಿದ ಹೈಕಮಾಂಡ್

ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಬಸವರಾಜ್ ಬೊಮ್ಮಾಯಿ, ಪ್ರಭಾಕರ್ ಕೋರೆ, ಭಗವಂತ ಖೂಬಾ, ವಿಜಯ ಸಂಕೇಶ್ವರ್ ಸೇರಿ ಗಣ್ಯರು ಉಪಸ್ಥಿತರಿದ್ದರು.
First published: February 14, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories