ಜ.20ರಿಂದ 30ರವರೆಗೂ ಸರ್ಕಾರದ ಜಂಟಿ ಅಧಿವೇಶನ; ರಾಜ್ಯದ ನೆರೆ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ; ಸಚಿವ ಮಾಧುಸ್ವಾಮಿ

ಬಾಗಲಕೋಟೆಯಲ್ಲಿ ಪಟ್ಟದಕಲ್ಲು ಪ್ರವಾಸಿ ತಾಣ ಅಭಿವೃದ್ದಿ ಮಾಡಲಿದ್ದೇವೆ. ಇದರ ಅಭಿವೃದ್ದಿಗೆ 129.25 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ಪ್ಲಾಜಾ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. 24 ಎಕರೆ ಖರೀದಿಸಿ ಟ್ಯೂರಿಸಂ ಪ್ಲಾಜಾ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು. 

news18-kannada
Updated:December 12, 2019, 6:49 PM IST
ಜ.20ರಿಂದ 30ರವರೆಗೂ ಸರ್ಕಾರದ ಜಂಟಿ ಅಧಿವೇಶನ; ರಾಜ್ಯದ ನೆರೆ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ; ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ
  • Share this:
ಬೆಂಗಳೂರು(ಡಿ.12): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದಲ್ಲಿ ಜಂಟಿ ಅಧಿವೇಶನ ಕರೆಯಲು ತೀರ್ಮಾನಿಸಿದ್ದೇವೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಇಂದು ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಚಿವ ಮಾಧುಸ್ವಾಮಿ, ಜನವರಿ 20ರಿಂದ 30ರವರೆಗೂ ಜಂಟಿ ಅಧಿವೇಶನ ನಡೆಯಲಿದೆ. ಈ ಜಂಟಿ ಅಧಿವೇಶನದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಮತ್ತು 2020ನೇ ಸಾಲಿನ ಕ್ಷೇತ್ರವಾರು ಅನುದಾನ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ನಡೆಯಲಿದೆ ಎಂದು ತಿಳಿಸಿದರು.

ಇನ್ನು ಆರ್ಯ ವೈಶ್ಯ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ನಿರ್ಧಾರ ಮಾಡಿದ್ದೇವೆ. ಸಾಲ ತೆಗೆದುಕೊಳ್ಳಲು ಮಾತ್ರ ಸದ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು. ಶಿಕ್ಷಣ, ಉದ್ಯೋಗಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದರು ಸಚಿವ ಸಚಿವ ಮಾಧುಸ್ವಾಮಿ.

ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಕಟ್ಟಡ, ಇನ್ನಿತರ ಕಾಮಗಾರಿಗಳಿಗೆ 525 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಎಸ್​​ಸಿ ಐಟಿಐ ವಿದ್ಯಾರ್ಥಿಗಳಿಗೆ ಲ್ಯಾಪ್​​ಟಾಪ್​​ ನೀಡಲಾಗುವುದು. ಇದಕ್ಕಾಗಿ ಸುಮಾರು 16.98 ಕೋಟಿ ರೂ. ಮೀಸಲು ಇಡಲಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದರು.

ಬಾಗಲಕೋಟೆಯಲ್ಲಿ ಪಟ್ಟದಕಲ್ಲು ಪ್ರವಾಸಿ ತಾಣ ಅಭಿವೃದ್ದಿ ಮಾಡಲಿದ್ದೇವೆ. ಇದರ ಅಭಿವೃದ್ದಿಗೆ 129.25 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ಪ್ಲಾಜಾ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. 24 ಎಕರೆ ಖರೀದಿಸಿ ಟ್ಯೂರಿಸಂ ಪ್ಲಾಜಾ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ‘ರಾಹುಲ್​​ ಗಾಂಧಿಯೋರ್ವ ಮೂರ್ಖ; ಪಾಕಿಸ್ತಾನದ ಏಜೆಂಟ್​​ನಂತೆ ಮಾತಾಡುತ್ತಾರೆ‘; ಬಿಜೆಪಿ ಶಾಸಕ ಬಸನಗೌಡ ಯತ್ನಾಳ್​​​

ಬಿಡಿಎ ವ್ಯಾಪ್ತಿಯ ಅನಧಿಕೃತ ಕಟ್ಟಡದಾರರಿಗೆ ಗಿಫ್ಟ್ ನೀಡಲು ನಿರ್ಧರಿಸಿದ್ದೇವೆ. ಬಿಡಿಎ 98ಸಿಗೆ ತಿದ್ದುಪಡಿ ತರಲು ತೀರ್ಮಾನ ಮಾಡಿದ್ದೇವೆ. ಬಿಡಿಎ ವ್ಯಾಪ್ತಿಯ ಅನಧಿಕೃತ ಕಟ್ಟಡಗಳನ್ನ ಸಕ್ರಮಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. 75 ಸಾವಿರ ಅನಧಿಕೃತ ಕಟ್ಟಡಗಳ ಸಕ್ರಮಕ್ಕೆ ತೀರ್ಮಾನವಾಗಿದೆ. ಅಕ್ರಮ ಕಟ್ಟಡಗಳಿಗೆ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಲು ಚಿಂತನೆ ನಡೆಸಿದ್ದೇವೆ. ಇದರ ತಿದ್ದುಪಡಿ ತರಲು ಕಮಿಟಿ ರಚನೆ ಮಾಡಲಾಗಿದೆ. ಈ ಸಮಿತಿಯ ನೇತ್ವತ್ವ ಡಿಸಿಎಂ ಅಶ್ವಥ್ ನಾರಾಯಣ್, ವಿ. ಸೋಮಣ್ಣ, ಆರ್ ಅಶೋಕ್, ಸುರೇಶ್ ಕುಮಾರ್ ವಹಿಸಲಿದ್ದಾರೆ ಎಂದರು.
First published: December 12, 2019, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading