ಡಿಸಿಎಂ ಅಶ್ವಥ್​ ನಾರಾಯಣ-ಸಚಿವ ಆರ್​ ಅಶೋಕ್​ ನಡುವೆ ಸಂಧಾನ ನಡೆಸಿದ ಸಿಎಂ ಬಿಎಸ್​ವೈ

ಕ್ಷದ ಪ್ರಮುಖ ನಾಯಕರೇ ಈ ರೀತಿ ಭಿನ್ನಾಭಿಪ್ರಾಯಗಳನ್ನು ಹೊಂದಿದರೆ ಅದು ಬೇರೆ ಸಂದೇಶ ರವಾನೆ ಮಾಡಲಿದೆ. ಈ ಹಿನ್ನೆಲೆ ನಾವೆಲ್ಲ ಒಟ್ಟಾಗಿ ಸರ್ಕಾರ ನಡೆಸಬೇಕು. ನಮ್ಮಲ್ಲಿನ ತಪ್ಪುಗಳನ್ನು ನಾವೇ ಸರಿಪಡಿಸಿಕೊಂಡು ನಡೆಯಬೇಕಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಹೇಳಿದರು ಎಂದು ಮೂಲಗಳು ತಿಳಿಸಿವೆ

Seema.R | news18-kannada
Updated:September 23, 2019, 7:45 PM IST
ಡಿಸಿಎಂ ಅಶ್ವಥ್​ ನಾರಾಯಣ-ಸಚಿವ ಆರ್​ ಅಶೋಕ್​ ನಡುವೆ ಸಂಧಾನ ನಡೆಸಿದ ಸಿಎಂ ಬಿಎಸ್​ವೈ
ಆಶ್ವಥ್​ ನಾರಾಯಣ-ಬಿಎಸ್​ ಯಡಿಯೂರಪ್ಪ-ಆರ್​ ಅಶೋಕ್​
  • Share this:
ಬೆಂಗಳೂರು (ಸೆ.23): ಡಿಸಿಎಂ ಹುದ್ದೆ, ಉಸ್ತುವಾರಿ ಹಂಚಿಕೆ ಸಂಬಂಧ ಸಚಿವ ಆರ್​ ಅಶೋಕ್​ ಹಾಗೂ ಡಿಸಿಎಂ ಅಶ್ವಥ್​ ನಾರಾಯಣ ನಡುವಿನ ಮೂಡಿದ ಮುನಿಸನ್ನು ಬಗೆಹರಿಸುವಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. 

ಬಿಬಿಎಂಪಿ ಮೇಯರ್​ ಚುನಾವಣೆ ಸಭೆಗೂ ಮುನ್ನ ಬೆಂಗಳೂರಿನ ಇಬ್ಬರು ಶಾಸಕರ ಸಂಧಾನ ನಡೆಸಿದ ಸಿಎಂ ಹುದ್ದ ಹಂಚಿಕೆ ವಿಚಾರದಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ. ಡಿಸಿಎಂ ಆಗಲಿ, ಉಸ್ತುವಾರಿ ಹಂಚಿಕೆಯಾಗಲಿ ಎಲ್ಲವೂ ಹೈ ಕಮಾಂಡ್​ ನೇತೃತ್ವದಲ್ಲಿ ನಿರ್ಣಯವಾಗಿದೆ. ಈ ವಿಚಾರದಲ್ಲಿ ನಾವು ಹೈಕಮಾಂಡ್​ ಪ್ರಶ್ನಿಸಲು ಸಾಧ್ಯವಿಲ್ಲ. ಹೈಕಮಾಂಡ್​ ಆದೇಶದಂತೆ ನಾವು ನಡೆಯಬೇಕಿದೆ ಎಂದು ಮನದಟ್ಟು ಮಾಡಿಕೊಟ್ಟರು.

ಅಲ್ಲದೇ, ಪಕ್ಷದ ಪ್ರಮುಖ ನಾಯಕರೇ ಈ ರೀತಿ ಭಿನ್ನಾಭಿಪ್ರಾಯಗಳನ್ನು ಹೊಂದಿದರೆ ಅದು ಬೇರೆ ಸಂದೇಶ ರವಾನೆ ಮಾಡಲಿದೆ. ಈ ಹಿನ್ನೆಲೆ ನಾವೆಲ್ಲ ಒಟ್ಟಾಗಿ ಸರ್ಕಾರ ನಡೆಸಬೇಕು. ನಮ್ಮಲ್ಲಿನ ತಪ್ಪುಗಳನ್ನು ನಾವೇ ಸರಿಪಡಿಸಿಕೊಂಡು ನಡೆಯಬೇಕಿದೆ ಎಂದು ತಿಳಿಹೇಳಿದರು.

ಜೊತೆಗೆ ಈ ಇಬ್ಬರ ನಾಯರ ಮುಸುಕಿನ ಗುದ್ದಾಟದಿಂದ ಪಕ್ಷದ ಕಾರ್ಯಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದೆ. ಆರ್​ ಅಶೋಕ್​ ಇದ್ದ ಕಾರ್ಯಕ್ರಮಕ್ಕೆ ಅಶ್ವಥ್​ ನಾರಾಯಣ ಗೈರಾಗುವುದು; ಅಶ್ವಥ್​ ನಾರಯಣ ಇರುವ ಕಾರ್ಯಕ್ರಮಕ್ಕೆ ಆರ್​ ಅಶೋಕ್​ ಗೈರಾಗುತ್ತಿರುವುದು ಇಬ್ಬರ ನಾಯಕರ ನಡುವಿನ ಮುನಿಸು ಜಗ್ಗಜಾಹೀರಾಗುವಂತೆ ಆಗಿದೆ. ಇದು ಹೀಗೆ ಮುಂದುವರೆದರೆ ತಮಗೆ ಹಾನಿಯಾಗಲಿದೆ ಎಂದು ಮನವರಿಕೆ ಮಾಡಿದರು.

ಇದನ್ನು ಓದಿ: ಎಂಟಿಬಿ ವಿರುದ್ಧ ಗೆಲುವಿಗೆ ಕೈ ತಂತ್ರ; ಬಿಜೆಪಿಯ ಶರತ್ ಬಚ್ಚೇಗೌಡ ಸೆಳೆಯಲು ಮುಂದಾದ ಕಾಂಗ್ರೆಸ್ ?

ಇನ್ನು ಬಿಬಿಎಂಪಿ ಮೇಯರ್​ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಬೆಂಗಳೂರಿನ ಶಾಸಕರೇ ಈ ರೀತಿ ದೂರದೂರಾದರೆ ಗೆಲುವಿಗೆ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಒಮ್ಮತದ ಮೇಲೆ ಎಲ್ಲರೂ ನಡೆಯುವುದು ಪಕ್ಷಕ್ಕೆ ಒಳಿತು. ಈ ರೀತಿಯಾಗಿ ದೂರ ದೂರ ಆದರೆ ಯಾರಿಗೂ ಒಳಿತಲ್ಲ ಎಂದು ಸಿಎಂ ಬುದ್ದಿವಾದ ಹೇಳಿದರು ಎನ್ನಲಾಗಿದೆ.

ಸಿಎಂ ಮಾತಿನ ಬಳಿಕ ಇಬ್ಬರು ನಾಯಕರು ಒಟ್ಟಾಗಿ ಮುನ್ನಡೆಯುವುದಾಗಿ ತಿಳಿಸಿದರು ಅಲ್ಲದೇ ಪಕ್ಷ ಹಾಗೂ ಸರ್ಕಾರದ ಹಿತ ದೃಷ್ಟಿಯಿಂದ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ನಡೆಯುವುದಾಗಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.(ವರದಿ: ರಮೇಶ್​ ಹಿರೇಜಂಬೂರು)

First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ