HOME » NEWS » State » CM BS YEDIYURAPPA DONE GOOD JOB SINCE ONE AND HALF YEAR SAYS AMIT SHAH RHHSN

ಒಂದೂವರೆ ವರ್ಷದಲ್ಲಿ ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ, ನಾವೆಲ್ಲರೂ ಅವರ ಕೈ ಬಲಪಡಿಸಬೇಕು; ಅಮಿತ್ ಶಾ

ಮುಂದಿನ ಸಲವೂ ಬಿಜೆಪಿಯೇ ಅಧಿಕಾರಕ್ಕೇ ಬರಲಿದೆ. ನಾವು ಜನರಿಗಾಗಿ ಕೆಲಸ ಮಾಡುವವರು. ಒಂದೂವರೆ ವರ್ಷ ಬಿಎಸ್ ವೈ ಉತ್ತಮ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಸಿಎಂ ಯಡಿಯೂರಪ್ಪ ಕೈ ಬಲಪಡಿಸಬೇಕು.  ಮೂಲಸೌಕರ್ಯಕ್ಕೆ ಭಾರತ ಸರ್ಕಾರ ಆದ್ಯತೆ ಕೊಡುತ್ತಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಎಲ್ಲಾ ಸಹಕಾರ ನೀಡಲಿದೆ ಎಂದು ಅಮಿತ್ ಶಾ ಭರವಸೆ ನೀಡಿದರು. ವೇದಿಕೆಯಲ್ಲಿ ಬಿಎಸ್​ವೈಗೆ ಶಹಬ್ಬಾಸ್ ಗಿರಿ ಕೊಟ್ಟರು. 

news18-kannada
Updated:January 16, 2021, 8:50 PM IST
ಒಂದೂವರೆ ವರ್ಷದಲ್ಲಿ ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ, ನಾವೆಲ್ಲರೂ ಅವರ ಕೈ ಬಲಪಡಿಸಬೇಕು; ಅಮಿತ್ ಶಾ
ಅಮಿತ್ ಶಾ.
  • Share this:
ಬೆಂಗಳೂರು; ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕಾಗಿ ಕ್ಷಮೆ ಕೇಳುವೆ. ಎಲ್ಲರಿಗೂ  ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವೆ. ಕೊರೋನಾದಿಂದ ಈ ಸಂಕ್ರಮಣ ಮುಕ್ತಿ ನೀಡಿದೆ. ಇಂದು ಪ್ರಧಾನಿ ಮೋದಿ ಅವರು ವ್ಯಾಕ್ಸಿನ್​ಗೆ ಚಾಲನೆ ನೀಡಿದ್ದಾರೆ. ಎರಡು ವ್ಯಾಕ್ಸಿನ್ ದೇಶದಲ್ಲೇ ತಯಾರಿಸಲಾಗಿದೆ. ಇನ್ನು ಐದಾರು ವ್ಯಾಕ್ಸಿನ್ ಸಂಶೋಧನೆ ನಡೆದಿದೆ. ಇಂದು ಸಾವಿರಾರು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಅಮಿತ್ ಶಾ ಅವರು ಪೊಲೀಸ್ ವಸತಿ ಗೃಹ 2020 ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,  ನಾವು ಕೊರೋನಾ ವಿರುದ್ಧ ಹೋರಾಡಿದ್ದೇವೆ. ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಮೊದಲ ಆದ್ಯತೆ ನೀಡಬೇಕು. ಅವರು ಫ್ರಂಟ್‌ಲೈನ್ ವಾರಿಯರ್ ಆಗಿದ್ದಾರೆ. ವಕ್ರದೋಷ ಇದ್ದವರು ಇದರಲ್ಲೂ ವಕ್ರದೃಷ್ಟಿ ಬೀರುತ್ತಿದ್ದಾರೆ. ದೇಶದಲ್ಲಿ ವ್ಯಾಕ್ಸಿನ್ ನೀಡಲು ಆರಂಭವಾಗಿದೆ. ಇಡೀ ಜಗತ್ತಿನಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಬೇರೆ ದೇಶಗಳ ಜೊತೆ ತುಲನಾತ್ಮಕವಾಗಿ ನೋಡಬೇಕು. ಬೇರೆ ದೇಶಗಳಿಗಿಂತ ಭಾರತ ಅತ್ಯುತ್ತಮವಾಗಿ ಲಸಿಕೆ ಹಂಚಿಕೆ ನಿರ್ವಹಣೆ ಮಾಡಿದೆ. ಹೀಗಾಗಿ ಕೋವಿಡ್ ವಿರುದ್ಧ ಪ್ರಬಲ‌ ಹೋರಾಟ ಮಾಡಿದ್ದೇವೆ ಎಂದು ಅಮಿತ್ ಶಾ ಹೇಳಿದರು.

ಮೋದಿ ಅವರ ನೀತಿಗಳಿಂದ ಕೋವಿಡ್ ವಿರುದ್ಧ ಸಮರ್ಥ ಹೋರಾಟ ನಡೆಸಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಲಾಯ್ತು, ಜನ ಪಾಲಿಸಿದರು. ಗಂಟೆ ಬಾರಿಸಲು ಕರೆ ನೀಡಿದರು. ಜನರು ಮೋದಿ ಕರೆಯನ್ನು ಪಾಲಿಸಿದರು. ದೀಪ ಹಚ್ಚಿ ಗೌರವ ಸಲ್ಲಿಸಿದರು. ಜನತೆ ಮೋದಿಯ ಎಲ್ಲ ಕರೆಗಳನ್ನು ಪಾಲಿಸಿದರು. ಈ ಕಾರಣದಿಂದ ಕೋವಿಡ್ ವಿರುದ್ಧ ಹೋರಾಡಲು ಸಾಧ್ಯವಾಯ್ತು. ಕರ್ನಾಟಕದ ಪೊಲೀಸರು ಸಾಕಷ್ಟು ಕೆಲಸ ಮಾಡಿದ್ದಾರೆ. ಕೋವಿಡ್ ನಲ್ಲಿ ಪೊಲೀಸರು ಮಾಡಿದ ಕಾರ್ಯ ಶ್ಲಾಘನೀಯ ಎಂದರು.

ಬಿಜೆಪಿ ಸರ್ಕಾರ ಪೂರ್ಣ ಅವಧಿ ಇರಲಿದೆ. ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆಯಲಿದೆ. ಸಚಿವರು ಜನರ ಜೊತೆಗಿದ್ದು ಕೆಲಸ ಮಾಡಬೇಕು. ರಾಜ್ಯದ ಜೊತೆ ಕೇಂದ್ರ ಸರ್ಕಾರ ಇದೆ. ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ.  ಕರ್ನಾಟಕದ‌ ವಿಕಾಸಕ್ಕಾಗಿ ಕೇಂದ್ರ ಸಹಾಯ ಮಾಡಲಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಮುಂದಿನ ಸಲವೂ ಬಿಜೆಪಿಯೇ ಅಧಿಕಾರಕ್ಕೇ ಬರಲಿದೆ. ನಾವು ಜನರಿಗಾಗಿ ಕೆಲಸ ಮಾಡುವವರು. ಒಂದೂವರೆ ವರ್ಷ ಬಿಎಸ್ ವೈ ಉತ್ತಮ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಸಿಎಂ ಯಡಿಯೂರಪ್ಪ ಕೈ ಬಲಪಡಿಸಬೇಕು.  ಮೂಲಸೌಕರ್ಯಕ್ಕೆ ಭಾರತ ಸರ್ಕಾರ ಆದ್ಯತೆ ಕೊಡುತ್ತಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಎಲ್ಲಾ ಸಹಕಾರ ನೀಡಲಿದೆ ಎಂದು ಅಮಿತ್ ಶಾ ಭರವಸೆ ನೀಡಿದರು. ವೇದಿಕೆಯಲ್ಲಿ ಬಿಎಸ್​ವೈಗೆ ಶಹಬ್ಬಾಸ್ ಗಿರಿ ಕೊಟ್ಟರು.
Published by: HR Ramesh
First published: January 16, 2021, 8:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories