ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ; 10 ದಿನದೊಳಗೆ ವರದಿ ನೀಡುವಂತೆ ಸಿಎಂ ಸೂಚನೆ

ಪೊಲೀಸ್​ ತನಿಖೆ ಮಧ್ಯೆ 3 ತಜ್ಞರನ್ನೊಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.  10 ದಿನಗಳೊಳಗೆ ಸರ್ಕಾರಕ್ಕೆ ವರದಿ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.  

Latha CG | news18-kannada
Updated:December 4, 2019, 11:54 AM IST
ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ; 10 ದಿನದೊಳಗೆ ವರದಿ ನೀಡುವಂತೆ ಸಿಎಂ ಸೂಚನೆ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು(ಡಿ.04): ಹುಳಿಮಾವು ಕೆರೆ ಕೋಡಿ ಒಡೆದು ಹತ್ತು ದಿನಗಳೇ ಕಳೆದಿವೆ. ಕಳೆದ ನವೆಂಬರ್ 24ರಂದು ಬಿಡಿಎ ವತಿಯಿಂದ ಹುಳಿಮಾವು ಕೆರೆ ಸ್ವಚ್ಛಗೊಳಿಸುವಾಗ ಕೆರೆ ಏರಿ ಒಡೆದು ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗಿತ್ತು. ಸುಮಾರು 250ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಸಾವಿರಾರು ಮಂದಿ ನಿರಾಶ್ರಿತರಾಗಿ ಬೀದಿಗೆ ಬಿದ್ದಿದ್ದರು. 

ತಡವಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಡಾ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಿದೆ. ಪೊಲೀಸ್​ ತನಿಖೆ ಮಧ್ಯೆ 3 ತಜ್ಞರನ್ನೊಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.  10 ದಿನಗಳೊಳಗೆ ಸರ್ಕಾರಕ್ಕೆ ವರದಿ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

ಐಐಎಸ್​​​ಸಿ ನಿವೃತ್ತ ಪ್ರಾಧ್ಯಾಪಕ ಬಿ.ಆರ್. ಶ್ರೀನಿವಾಸ್ ಮೂರ್ತಿ, ಶಾಂತರಾಜಣ್ಣ ಮತ್ತು  ನಿವೃತ್ತ ಅಭಿಯಂತರ ಎಂ.ಎಲ್‌ಮಾದಯ್ಯ ಅವರನ್ನೊಳಗೊಂಡ ಸಮಿತಿ ರಚನೆಯಾಗಿದೆ.

ಹುಳಿಮಾವು ಕೆರೆ ಪ್ರದೇಶಕ್ಕೆ ಸಿಎಂ ಬಿಎಸ್​ವೈ ಭೇಟಿ; ಇಂದು ಸಂಜೆಯೊಳಗೆ ಸಂತ್ರಸ್ತರ ಖಾತೆಗೆ 50 ಸಾವಿರ ಜಮಾ

ಸಿಎಂ ಬಿಎಸ್​ವೈ  ನೆರೆ ಸಂತ್ರಸ್ತರನ್ನು ಭೇಟಿಯಾಗಿ ಧೈರ್ಯ ತುಂಬಿ, ಅವರ ಖಾತೆಗಳಿಗೆ 50 ಸಾವಿರ ಜಮಾ ಮಾಡುವುದಾಗಿ ಘೋಷಿಸಿದ್ದರು. ಕೆರೆ ಒಡೆತಕ್ಕೆ  ಕಾರಣಕರ್ತರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ. ಏರಿ ಕಟ್ಟೆ ಸಧೃಢವಾಗಿ ಇರಬೇಕು. ಕಾಟಾಚಾರಕ್ಕೆ ಮಾಡುವಂತಿಲ್ಲ ಎಂದು ಸಿಎಂ ಸೂಚಿಸಿದ್ದರು.

ಕೆರೆ ಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿರುವ ಬಿಬಿಎಂಪಿ, ಬಿಡಿಎಗೆ ಹೈ ಕೋರ್ಟ್​​​ ತರಾಟೆಗೆ ತೆಗೆದುಕೊಂಡಿತ್ತು. ಕೋಡಿ ಒಡೆದ ಕಾರಣ ಜನರಿಗೆ ಸಮಸ್ಯೆಯಾಗಿದೆ. ಅಲ್ಲಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಬಿಬಿಎಂಪಿ, ಬಿಡಿಎ ನಡುವೆ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಘಟನೆಗೆ ನಿಖರ ಕಾರಣವನ್ನು ಪತ್ತೆ ಹಚ್ಚಬೇಕು.ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತ್ತು.

ವೀರಪ್ಪನ್ ಊರಲ್ಲಿ ತಮಿಳು ಬದಲು ಕನ್ನಡ ಮಾಧ್ಯಮ ಶಾಲೆ - ಸುರೇಶ್ ಕುಮಾರ್ ಆದೇಶ
First published: December 4, 2019, 11:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading