ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದ ಸಿಎಂ ಬಿಎಸ್​ ಯಡಿಯೂರಪ್ಪ

ಹುತಾತ್ಮ ಯೋಧರ ಕುಟುಂಬದ ಕಲ್ಯಾಣಕ್ಕೆ ನೀಡುತ್ತಿರುವ ಅನುದಾನ ಒಂದು ಕೋಟಿ ಹೆಚ್ಚಳ ಮಾಡಿಲಾಗಿದೆ. ವೀರ ಚಕ್ರ, ಶೌರ್ಯ ಚಕ್ರಕ್ಕೆ ನೀಡುವ ಗೌರವ ಧನ 25 ಸಾವಿರಕ್ಕೆ ಹೆಚ್ಚಳ, ಸೇನಾ ಮೆಡಲ್ ಗೌರವ ಧನ 2 ಲಕ್ಷದಿಂದ 15 ಲಕ್ಷ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ಸಿಎಂ ಬಿಎಸ್​ವೈ

ಸಿಎಂ ಬಿಎಸ್​ವೈ

  • Share this:
ಬೆಂಗಳೂರು(ಡಿ.16): ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಇಂದು ವಿಜಯ ದಿವಸ್ ಆಚರಣೆ ಮಾಡಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲಾಯಿತು. ಮುಖ್ಯಮಂತ್ರಿ ಸಿಎಂ ಬಿ.ಎಸ್​.ಯಡಿಯೂರಪ್ಪ ಯುದ್ದದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಕೆ ಮಾಡಿದರು. ಬಳಿಕ ಮಾತನಾಡಿದ ಸಿಎಂ ಬಿಎಸ್​ವೈ, "ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅತ್ಯಂತ ಹೆಮ್ಮೆಯಿಂದ ಪಾಲ್ಗೊಂಡಿದ್ದೇನೆ. ಹುತಾತ್ಮ ಯೋಧರ ಕುಟುಂಬದ ಜೊತೆ ಸರ್ಕಾರ ಇದೆ. ಯೋಧರ ಕುಟುಂಬಕ್ಕೆ ಅಗತ್ಯ ಎಲ್ಲಾ ಸವಲತ್ತು ಸರ್ಕಾರ ನೀಡುತ್ತದೆ," ಎಂದು ಭರವಸೆ ನೀಡಿದರು.ಹಿಂಸಾಚಾರಕ್ಕೆ ತಿರುಗಿದ ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆ; ಹಾಸ್ಟೆಲ್ ಖಾಲಿ ಮಾಡಲು ವಿದ್ಯಾರ್ಥಿಗಳಿಗೆ ಸೂಚನೆ

ಹುತಾತ್ಮ ಯೋಧರ ಕುಟುಂಬದ ಕಲ್ಯಾಣಕ್ಕೆ ನೀಡುತ್ತಿರುವ ಅನುದಾನ ಒಂದು ಕೋಟಿ ಹೆಚ್ಚಳ ಮಾಡಿಲಾಗಿದೆ. ವೀರ ಚಕ್ರ, ಶೌರ್ಯ ಚಕ್ರಕ್ಕೆ ನೀಡುವ ಗೌರವ ಧನ 25 ಸಾವಿರಕ್ಕೆ ಹೆಚ್ಚಳ, ಸೇನಾ ಮೆಡಲ್ ಗೌರವ ಧನ 2 ಲಕ್ಷದಿಂದ 15 ಲಕ್ಷ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ನಿವೃತ್ತ ಹಿರಿಯ ಸೇನಾಧಿಕಾರಿಗಳು ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ಎನ್.ಸಿ.ಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳು ಹಾಗೂ ನಿವೃತ್ತ ಸೇನಾಧಿಕಾರಿಗಳು ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು.

ಕಳೆದ 3 ವರ್ಷಗಳಲ್ಲಿ ದುಪ್ಪಟ್ಟಾಯ್ತು ಆಸ್ಟ್ರೇಲಿಯಾಗೆ ಭೇಟಿ ನೀಡಿದ ಕನ್ನಡಿಗರ ಸಂಖ್ಯೆ
Published by:Latha CG
First published: