HOME » NEWS » State » CM BS YEDIYURAPPA CONGRATS TO STUDENTS WHO PASS IN PUC EXAM RH

Karnataka 2nd PUC Result 2020: ಪಿಯುಸಿ ತೇರ್ಗಡೆಯಾದ ಮಕ್ಕಳಿಗೆ ಸಿಎಂ ಅಭಿನಂದನೆ; ಫೇಲಾದ ವಿದ್ಯಾರ್ಥಿಗಳಿಗೂ ಧೈರ್ಯ ಹೇಳಿದ ಯಡಿಯೂರಪ್ಪ

Karnataka 2nd PUC Result 2020: ಈ ವರ್ಷ ಒಟ್ಟಾರೆ 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 3,84,937 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಖಡಾವಾರು ಫಲಿತಾಂಶ ಶೇ. 61.80 ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ76.80 ವಾಣಿಜ್ಯ ಶೇ.65.52 ಹಾಗೂ ಕಲಾ ವಿಭಾಗದಲ್ಲಿ ಶೇ.41.27 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

HR Ramesh | news18-kannada
Updated:July 14, 2020, 1:12 PM IST
Karnataka 2nd PUC Result 2020: ಪಿಯುಸಿ ತೇರ್ಗಡೆಯಾದ ಮಕ್ಕಳಿಗೆ ಸಿಎಂ ಅಭಿನಂದನೆ; ಫೇಲಾದ ವಿದ್ಯಾರ್ಥಿಗಳಿಗೂ ಧೈರ್ಯ ಹೇಳಿದ ಯಡಿಯೂರಪ್ಪ
ಸಿಎಂ ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು; ಕೋವಿಡ್​ನಂತಹ ಸಂಕಷ್ಟ ಸಮಯದಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಹಾಗೆಯೇ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳು ಕುಗ್ಗದೆ, ಮುಂದಿನ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸುವಂತೆ ವಿಶ್ವಾಸ ತುಂಬಿದ್ದಾರೆ.

ಇಂದು ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಪಡೆದ ಎಲ್ಲ ಮಕ್ಕಳಿಗೂ ಶುಭ ಹಾರೈಸುತ್ತೇನೆ. ತೇರ್ಗಡೆಯಾಗಿರುವ ಮಕ್ಕಳಿಗೆ ಅಭಿನಂದನೆಗಳು. ಸ್ವಲ್ಪ ಹಿನ್ನಡೆಯಾಗಿದ್ದಲ್ಲಿ ಧೈರ್ಯ, ವಿಶ್ವಾಸ ಕಳೆದುಕೊಳ್ಳದೆ, ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿ, ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ತಂದೆ- ತಾಯಿಗಳಿಗೆ ಹೆಮ್ಮೆ, ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.


ಇಂದು ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಪಡೆದ ಎಲ್ಲ ಮಕ್ಕಳಿಗೂ ಶುಭ ಹಾರೈಸುತ್ತೇನೆ. ತೇರ್ಗಡೆಯಾಗಿರುವ ಮಕ್ಕಳಿಗೆ ಅಭಿನಂದನೆಗಳು. ಸ್ವಲ್ಪ ಹಿನ್ನಡೆಯಾಗಿದ್ದಲ್ಲಿ ಧೈರ್ಯ ವಿಶ್ವಾಸ ಕಳೆದುಕೊಳ್ಳದೆ, ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿ,ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ತಂದೆ ತಾಯಿಗಳಿಗೆ ಹೆಮ್ಮೆ, ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿ.ಇದನ್ನು ಓದಿ: Karnataka 2nd PUC Result 2020: ಅನೇಕ ಸವಾಲುಗಳ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗಿದೆ; ಸುರೇಶ್‌ ಕುಮಾರ್‌
Youtube Video
ಈ ವರ್ಷ ಒಟ್ಟಾರೆ 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 3,84,937 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಖಡಾವಾರು ಫಲಿತಾಂಶ ಶೇ. 61.80 ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ76.80 ವಾಣಿಜ್ಯ ಶೇ.65.52 ಹಾಗೂ ಕಲಾ ವಿಭಾಗದಲ್ಲಿ ಶೇ.41.27 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
Published by: HR Ramesh
First published: July 14, 2020, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories