Karnataka Covid: ರಾಜ್ಯದಲ್ಲಿ ಲಾಕ್​ಡೌನ್​ ಇಲ್ಲ; ರಾತ್ರಿ ಕರ್ಫ್ಯೂ ವಿಸ್ತರಣೆ: ಮುಖ್ಯಮಂತ್ರಿ ಯಡಿಯೂರಪ್ಪ

ಲಾಕ್​ಡೌನ್ ಮಾಡುವಂಥ ಪರಿಸ್ಥಿತಿಯಿಲ್ಲ. ನಾಳೆ ಸಭೆ ಬಳಿಕ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು.

ಬೆಂಗಳೂರು ಭಾಗದ ಜನಪ್ರತಿನಿಧಿಗಳ ಸಭೆ.

ಬೆಂಗಳೂರು ಭಾಗದ ಜನಪ್ರತಿನಿಧಿಗಳ ಸಭೆ.

  • Share this:
    ಬೆಂಗಳೂರು (ಏ. 19):  ರಾಜ್ಯದಲ್ಲಿ ಲಾಕ್​ ಡೌನ್​ ಮಾಡುವುದಿಲ್ಲ. ಆದರೆ, ರಾತ್ರಿ ಕರ್ಫ್ಯೂವನ್ನು ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ತಿಳಿಸಿದ್ದಾರೆ.  ಸೋಂಕು ಹೆಚ್ಚಳ ಹಿನ್ನಲೆ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಸಭೆಯನ್ನು ಇಂದು ನಡೆಸಲಾಯಿತು. ಈ ವೇಳೆ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ ಸಿಎಂ, ರಾಜ್ಯದಲ್ಲಿ ಮತ್ತೊಂದು ಲಾಕ್​ ಡೌನ್​ ಘೋಷಣೆ ಮಾಡುವುದಿಲ್ಲ ಎಂದಿದ್ದಾರೆ. ಕರ್ಫ್ಯೂ ವಿಸ್ತರಣೆ ಸೇರಿದಂತೆ ಬಿಗಿ ನಿಯಂತ್ರಣದ ಕುರಿತು  ನಾಳೆ ತೀರ್ಮಾನಿಸುತ್ತೇವೆ. ರಾಜ್ಯಪಾಲರ ಅಭಿಪ್ರಾಯ ಪಡೆದ ಬಳಿಕ ಅಂತಿಮವಾಗಿ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದರು

    ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ಮತ್ತೊಂದು ಲಾಕ್​ಡೌನ್​ ಕುರಿತು ರಾಜ್ಯ ಸರ್ಕಾರ ನಿರ್ಧಾರ ಮಾಡುತ್ತದೆ ಎನ್ನಲಾಗಿತ್ತು. ಈ ಕುರಿತು ಮಾತನಾಡಿದ ಅವರು, ಲಾಕ್​ಡೌನ್ ಮಾಡುವಂಥ ಪರಿಸ್ಥಿತಿಯಿಲ್ಲ. ನಾಳೆ ಸಭೆ ಬಳಿಕ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಎಂಟು ವಲಯಕ್ಕೆ ಎಂಟು ಸಚಿವರಿದ್ದಾರೆ. ಯಾವುದೇ ಭಯ ಬೇಡ. ನಾಳೆ ಸರ್ವಪಕ್ಷ ಸಭೆ ಬಳಿಕ ಬೆಂಗಳೂರಿಗೆ ಮತ್ತು ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.



    ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್​ ಬೊಮ್ಮಯಿ, ಕೋವಿಡ್ ಸಂದರ್ಭದಲ್ಲಿ ಎಲ್ಲಾ ಜನಪ್ರತಿನಿಧಿಗಳು ರಾಜಕೀಯ ಮೀರಿ ಸಹಕರಿಸಬೇಕು. ಕೋವಿಡ್ ಸಮಯದಲ್ಲಿ ರಾಜಕೀಯ ಬಿಟ್ಟು ಎಲ್ಲರು ಕೋವಿಡ್ ಕುರಿತ ಜನಜಾಗೃತಿ ಮಾಡಬೇಕು. ಸರ್ಕಾರ ತಗೆದುಕೊಳ್ಳುವ ಕ್ರಮಗಳಿಗೆ ಎಲ್ಲಾರೂ ಸಹಕಾರಿಸಬೇಕಿದೆ‌. ರಾಜಕೀಯ ಮೀರಿ ನಾವು ಕೆಲಸ ಮಾಡಿದಾಗ ಮಾತ್ರ ಈ ಮಾಹಮಾರಿಯನ್ನು ಎದರಿಸಬಹುದು. ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಸಲಾಗುವುದು. ಈ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಸಹ ಭಾಗಿಯಾಗಲಿದ್ದಾರೆ ಎಂದರು.

    ಕೋವಿಡ್​ ನಿಯಂತ್ರಣಕ್ಕೆ ವಿರೋಧ ಪಕ್ಷಗಳು ಕೈ ಜೋಡಿಸಬೇಕು.ಸಾವಿನ ಸಂಖ್ಯೆ ಜರ್ಮನಿ ,ಅಮೆರಿಕಾದಲ್ಲು ತಡೆಯಲು ಆಗಲ್ಲ. ಇತರರಿಗೆ ನಾವು ಮಾಡಲ್ ಆಗಿ ಕೋವಿಡ್ ಕಂಟ್ರೋಲ್‌ ಮಾಡಬೇಕು. ಆಕ್ಸಿಜನ್​ ಪೂರೈಕೆ ಕುರಿತು ಈಗಾಗಲೇ ಜಿಂದಾಲ್ ಜೊತೆ ಚರ್ಚೆ ಮಾಡಿದ್ದೇವೆ. ಅವರು ಆಕ್ಸಿಜನ್ ಎಷ್ಟು ಬೇಕೋ ಅಷ್ಟು ಕೊಡುತ್ತೇವೆ ಎಂದಿದ್ದಾರೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆಂದು ಹೇಳಿದ್ದೇವೆ. ಕಳೆದ ಬಾರಿಗಿಂತ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡುತ್ತೇವೆ ಎಂದು ವಿಪಕ್ಷಗಳಿಗೆ ಹೇಳಿದ್ದೇವೆ.

    ಮುಂದಿನ ವಾರ ಶೇ.60 ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​​ ಮೀಸಲಿಡುವಂತೆ ಮಾಡುತ್ತೇವೆ. ಇನ್ನು ಮುಂದೆ ಕೋವಿಡ್ ಸೆಂಟರ್ ಮಾಡುತ್ತೇವೆ. ಅಲ್ಲಿ ಟೆಸ್ಟ್ ಮಾಡಿ ಆಕ್ಸಿಜನ್ ಅಗತ್ಯ ಇದ್ದವರಿಗೆ ಮಾತ್ರ ಆಕ್ಸಿಜನ್ ವ್ಯವಸ್ಥೆ ಮಾಡುತ್ತೇವೆ. ಯಾರಿಗೆ ಅವಶ್ಯಕತೆ ಇದೆ ಅವರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತೇವೆ. ಉಳಿದಂತವರಿಗೆ ಹೋಟೆಲ್ ನಲ್ಲಿ ವ್ಯವಸ್ಥೆ ಮಾಡಲಾಗುವುದು. ರೆಮಿಡಿಸಿವರ್​​ ಇಂಜೆಕ್ಷನ್​​ ಕೊರತೆ ಆಗದ ರೀತಿ ವ್ಯವಸ್ಥೆ ಮಾಡುತ್ತೇವೆ. ಯಾರಿಗೆ ಸಿಗಬೇಕು ಅವರಿಗೆ ಮಾತ್ರ ರೆಮಿಡಿಸಿವರ್​ ಔಷಧಿ ಕೊಡಬೇಕು ಎಂದು ಸೂಚಿಸಿದ್ದೇವೆ ಎಂದರು.
    Published by:Seema R
    First published: