ಕರ್ನಾಟಕ ಲಾಕ್​​ಡೌನ್​ ಸಂಬಂಧ ಕೆಲವೇ ಕ್ಷಣಗಳಲ್ಲಿ ಸಿಎಂ ತುರ್ತು ಸುದ್ದಿಗೋಷ್ಠಿ; ಅಧಿಕೃತ ಘೋಷಣೆ ಸಾಧ್ಯತೆ

ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಸಂಜೆ 7 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ರಾಜ್ಯಾದ್ಯಂತ ಕಂಪ್ಲೀಟ್​ ಲಾಕ್​ಡೌನ್​ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

  • Share this:
ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್​ ಹೇರುವ ಸಂಬಂಧ ರಾಜ್ಯ ಸರ್ಕಾರ ಕೆಲವೇ ನಿಮಿಷಗಳಲ್ಲಿ ಅಧಿಕೃತ ಘೋಷಣೆ ಹೊರಡಿಸಲಿದೆ ಎನ್ನಲಾಗುತ್ತಿದೆ. ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಸಂಜೆ 7 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ರಾಜ್ಯಾದ್ಯಂತ ಕಂಪ್ಲೀಟ್​ ಲಾಕ್​ಡೌನ್​ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಲೇ ಲಾಕ್​ಡೌನ್​ ಸಂಬಂಧ ಸಿಎಂ ನಿವಾಸಕ್ಕೆ ತೆರಳಿದ ಸಿಎಸ್ ಪಿ ರವಿಕುಮಾರ್,  ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್,   ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್,   ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ  ಮಾರ್ಗಸೂಚಿ ಬಗ್ಗೆ ಚರ್ಚಿಸುತ್ತಿದ್ದಾರೆ.

ಲಾಕ್​ಡೌನ್​ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ ಕೆಲವೇ  ನಿಮಿಷಗಳಲ್ಲಿ ಸಿಎಂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಕೊಡ್ತಾರೆ. ಎಲ್ಲರ ಅಭಿಪ್ರಾಯ ಸಿಎಂ ಸಂಗ್ರಹ ಮಾಡಿದ್ದಾರೆ. ತಜ್ಞರು, ಜನರ ಮನಸ್ಥಿತಿ ಅನುಗುಣವಾಗಿ ಸಿಎಂ ನಿರ್ಧಾರ ಮಾಡ್ತಾರೆ. ಸಿಎಂ ಯಡಿಯೂರಪ್ಪ ಕೆಲವೇ ನಿಮಿಷಗಳಲ್ಲಿ ಇದನ್ನ ಘೋಷಣೆ ಮಾಡ್ತಾರೆ ಎಂದು ತಿಳಿಸಿದರು.

ಆಸ್ಪತ್ರೆಗಳ ನಿರ್ವಹಣೆ ವಿಚಾರ ಚರ್ಚೆ ಆಗಿದೆ. ಸಮಿತಿ ಕೊಟ್ಟ ಸಲಹೆಗಳನ್ನ ಅನುಷ್ಠಾನ ಮಾಡಲು ಇವತ್ತು ಸಭೆ ಮಾಡಿದ್ದೇವೆ. ಆಸ್ಪತ್ರೆಗಳಲ್ಲಿ ಸರ್ಕಾರದ ಕೋಟಾದಲ್ಲಿ ಅಡ್ಮಿಟ್ ಆಗಿರೋರು ಗುಣ ಆದ ಕೂಡಲೇ ಕೇರ್ ಸೆಂಟರ್, ಮತ್ತು ಸ್ಟೆಪ್ ಡೌನ್ ಆಸ್ಪತ್ರೆಗೆ ಸೇರಿಸಬೇಕು ಅಂತ ನಿರ್ಣಯ ಆಗಿದೆ. ಆಸ್ಪತ್ರೆಗೆ ಅವಶ್ಯಕತೆ ಇಲ್ಲದೆ ಹೋದ್ರೆ ಆಸ್ಪತ್ರೆಗೆ ಸೇರಲಾಗುತ್ತಿದೆ. 90% ಸ್ಯಾಚ್ಯರೇಷನ್ ಕಡಿಮೆ ಇರೋರು ಆಡ್ಮಿಟ್ ಆಗಬೇಕು.ಹೀಗಾಗಿ ಮನೆಯಲ್ಲಿ ಟೆಸ್ಟ್ ಮಾಡುವ ಕೆಲಸ ಮಾಡಲು ಕ್ರಮವಹಿಸಲಾಗಿದೆ. ಅಗತ್ಯ ಇರೋರಿಗೆ ಮಾತ್ರ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಾಗುತ್ತೆ. ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಸಲುವಾಗಿ ಮಾನಿಟರ್ ಮಾಡುವ ಕೆಲಸ ಮಾಡಲಾಗುತ್ತೆ.ಇದಕ್ಕೆ ಸಂಬಂಧಿಸಿದಂತೆ  ಆಡಿಟ್ ರಿಪೋರ್ಟ್ ತಯಾರು ಮಾಡುವ ಕೆಲಸ ಮಾಡಲಾಗ್ತಿದೆ. ಸಾ

ವಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಆಡಿಟ್ ಮಾಡಿ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ತೀವಿ.ಮನೆಯಲ್ಲಿ ಇರೋ ಸೋಂಕಿತ ರಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕ್ರಮಗಳ ತೆಗೆದುಕೊಳ್ಳಲಾಗುತ್ತೆ. ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡ್ತೀವಿ. ರಕ್ತ ಪರೀಕ್ಷೆಗಳು ಪ್ರಾಥಮಿಕ ಕೇಂದ್ರದಲ್ಲಿ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ತಿದ್ದೇವೆ ಎಂದು ಡಿಸಿಎಂ ಅಶ್ಚಥ್​ ನಾರಾಯಣ ತಿಳಿಸಿದರು.
Published by:Kavya V
First published: