ಕಲಬುರಗಿ (ಅ.21): ಮಳೆ, ಪ್ರವಾಹದಿಂದ ತತ್ತರಿಸಿದ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಸ್ಥಿತಿಗತಿ ಅರಿಯಲು ಮುಂದಾದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಈ ಸಮೀಕ್ಷೆ ಅರ್ಧಕ್ಕೆ ಮೊಟಕುಗೊಂಡಿತು. ಹೆಲಿಕ್ಯಾಪ್ಟರ್ ಹಾರಾಟಕ್ಕೆ ಪ್ರತಿಕೂಲ ಹವಾಮಾನ ಇಲ್ಲದ ಕಾರಣ ಸಮೀಕ್ಷೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸಿಎಂ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ಸಾದರು. ಅರ್ಧದಲ್ಲಿಯೇ ನಿಂತ ಅವರ ವೈಮಾನೀಕ ಸಮೀಕ್ಷೆ ವಿರುದ್ಧ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಪ್ರವಾಹ ಪ್ರವಾಸೋದ್ಯಮ ನಡೆಸಿದ ಸಿಎಂ ಜನರ ಸಂಕಷ್ಟ ಆಲಿಸಲಿಲ್ಲ ಎಂದು ಕುಟುಕಿದರು. ಅಲ್ಲದೇ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಬದಲು ಸಂತ್ರಸ್ತರ ಸಮಸ್ಯೆ ಆಲಿಸಿದ್ದರೆ, ಪ್ರಯೋಜನವಾಗುತ್ತಿತ್ತೇನೊ ಎಂದು ಕಿಡಿಕಾರಿದ್ದಾರೆ
ಮುಖ್ಯಮಂತ್ರಿ @BSYBJP ರವರು ಇಂದು ಕಲಬುರ್ಗಿ, ಯಾದಗಿರಿ, ಬೀದರ್ ಮತ್ತು ಬಳ್ಳಾರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಅತಿವೃಷ್ಟಿಗೆ ಸಂಬಂಧಿಸಿದಂತೆ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಸಭೆ ನಡೆಸಿದರು. (1/2) pic.twitter.com/5GDtCXQwmB
— CM of Karnataka (@CMofKarnataka) October 21, 2020
. @CMofKarnataka ನಿಮ್ಮ ಪ್ರವಾಹ ಪ್ರವಾಸೋದ್ಯಮ ತಡವಾಯಿತು.
ಈ ದೃಶ್ಯಗಳನ್ನು ನೋಡಿ. ವೈಮಾನಿಕ ಸಮೀಕ್ಷೆಯ ಮೂಲಕ ನಮ್ಮ ನೋವನ್ನು ನೀವು ನೋಡಲು ಸಾಧ್ಯವಾಗುವುದಿಲ್ಲ.
ಈಗ ಭೀಮ ಮತ್ತು ಕಾಗಿನ ನೀರು ಕಡಿಮೆಯಾಗಿದ್ದು, ಈಗ ಜನರ ಅಪೇಕ್ಷೆ, ಪರಿಹಾರ ಮಾತ್ರ.
ದಯಮಾಡಿ ನಮಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಿ, ನಮ್ಮ ನೋವಿಗೆ ಸ್ಪಂದಿಸಿ. pic.twitter.com/9AGxJ6Z5ql
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 21, 2020
ಸಿಎಂ ಈ ಸಮೀಕ್ಷೆ ಟೀಕಿಸಿರುವ ಪ್ರತಿಪಕ್ಷ ನಾಯಕರು, ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದಾಗಲೇ ಅಲ್ಲಿನ ಜನರ ನೋವು ಏನೆಂಬುದು ಅರ್ಧವಾಗುವುದು. ಈಗ ಭೀಮಾ ಹಾಗೂ ಕಾಗಿಣಾ ನದಿ ನೀರು ಕಡಿಮೆಯಾಗಿದೆ. ಈಗ ಜನರ ಅಪೇಕ್ಷೆ ಇರೋದು ಪರಿಹಾರದ ಬಗ್ಗೆ ಹೊರತು ವೈಮಾನಿಕ ಸಮೀಕ್ಷೆ ಬಗ್ಗೆಯಲ್ಲ ಎಂದು ಕಿಡಿಕಾರಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ