Madhuswamy Controversy - ಸಚಿವ ಮಾಧುಸ್ವಾಮಿ ಮೇಲೆ ಸಿಎಂ ಯಡಿಯೂರಪ್ಪ ಕೋಪ

JC Madhuswamy: ಈ ಹಿಂದೆ ಹುಲಿಯಾರು ಕನಕ ವೃತ್ತದ ವಿವಾದದಲ್ಲಿ ಸಿಲುಕಿ ಕುರುಬ ಸಮುದಾಯದ ಸ್ವಾಮೀಜಿಗಳ ಕೆಂಗಣ್ಣಿಗೆ ಮಾಧು ಸ್ವಾಮಿ ಗುರಿಯಾಗಿದ್ದರು‌. ಆಗ ನೆರವಿಗೆ ಬಂದಿದ್ದು ಯಡಿಯೂರಪ್ಪನವರೇ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಂಗಳೂರು(ಮೇ 21): ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕಾನೂನು ಸಚಿವ ಮಾಧುಸ್ವಾಮಿ ಮೇಲೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಒಬ್ಬ ಮಹಿಳೆ ಬಗ್ಗೆ ಅಶ್ಲೀಲ ವಾಗಿ ಮಾತನಾಡೋದು ತಪ್ಪು, ಅದರಲ್ಲೂ ಸಚಿವರಾದಂಥವರು ಈ ರೀತಿ ಮಾತನಾಡಿರೋದು ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಇಂದು ಬೆಂಗಳೂರಿನ ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಾಗರಿಗಳಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ರು. ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ, ಮಾಧುಸ್ವಾಮಿ ಮೇಲೆ ಗರಂ ಆದರು. ಅಲ್ಲದೆ ಅವರ ವರ್ತನೆಯನ್ನು ನಾನು ಸಹಿಸೋದಿಲ್ಲ, ಅವರ ಹೇಳಿಕೆಯನ್ನು ನಾನು ನಾನು ಖಂಡಿಸುತ್ತೇನೆ ಎಂದರು.

ಮಾಧುಸ್ವಾಮಿಗೆ ಸಿಎಂ ಎಚ್ಚರಿಕೆ:

ಮಹಿಳೆ ಕುರಿತು ವಿವಾದದಲ್ಲಿ ಸಿಲುಕಿರುವ ಸಚಿವ ಮಾಧು ಸ್ವಾಮಿ ಮೇಲೆ ಸಿಎಂ ಸಿಟ್ಟಾಗಿದ್ದಾರೆ. ಪದೆ ಪದೆ ವಿವಾದಕ್ಕೆ ಸಿಲುಕುತ್ತಿರುವ ಮಾಧುಸ್ವಾಮಿಗೆ ವಾರ್ನ್ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಈ ಹಿಂದೆ ಹುಲಿಯಾರು ಕನಕ ವೃತ್ತದ ವಿವಾದದಲ್ಲಿ ಸಿಲುಕಿ ಕುರುಬ ಸಮುದಾಯದ ಸ್ವಾಮೀಜಿಗಳ ಕೆಂಗಣ್ಣಿಗೆ ಮಾಧು ಸ್ವಾಮಿ ಗುರಿಯಾಗಿದ್ದರು‌. ನಂತರ ಸಿಎಂ ಯಡಿಯೂರಪ್ಪ ಮಧ್ಯ ಪ್ರವೇಶ ಮಾಡಿ, ಆ ವಿವಾದ ಬಗೆಹರಿಸುವ ಮೂಲಕ ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಮಾಧುಸ್ವಾಮಿಗೆ ಬುದ್ದಿ ಹೇಳಿ ಕಳುಹಿಸಿದ್ದರು. ಇದೀಗ ಮತ್ತೆ ಮಹಿಳೆ ವಿಷಯದಲ್ಲಿ ಮಾಧುಸ್ವಾಮಿ ವಿವಾದಕ್ಕೆ ಸಿಲುಕಿರೋದು ಸಿಎಂ ಬಿಎಸ್​ವೈ ಅವರ ಮತ್ತಷ್ಟು ಕೋಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಹಿಳಾ ನಿಂದನೆ ಪ್ರಕರಣ: ‘ನಮ್ಮ ನಾಯಕರು ರಾಜೀನಾಮೆ ಕೇಳಿದ್ರೆ ಸುಮ್ಮನಿರಲ್ಲ‘ - ಮಾಧುಸ್ವಾಮಿ

ಸರ್ಕಾರ ಕೊರೋನಾ ನಿಯಂತ್ರಣದ ಸವಾಲು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿಯವರ ವರ್ತನೆ ಬೇಕಿತ್ತಾ ಎಂದು ಸಿಎಂ ಸಿಟ್ಟಾಗಿದ್ದಾರೆ. ಈಗಾಗಲೇ ಮಾಧುಸ್ವಾಮಿ ಹೇಳಿಕೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಮಾಧುಸ್ವಾಮಿಯನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹ ಮಾಡುತ್ತಿವೆ. ಇದೀಗ ಇಷ್ಟು ಸಮಸ್ಯೆ ಸೃಷ್ಟಿಗೆ ಕಾರಣವಾಗಿರುವ ಮಾಧುಸ್ವಾಮಿಗೆ ಸಿಎಂ ಖಡಕ್ ಎಚ್ಚರಿಕೆ ಕೊಡಲು ಮುಂದಾಗಿದ್ದಾರೆ. ಈಗಾಗಲೇ ಸಿಎಂ ಯಡಿಯೂರಪ್ಪ, ಸಚಿವ ಮಾಧುಸ್ವಾಮಿಗೆ ಬುಲಾವ್ ಕೊಟ್ಟಿದ್ದಾರೆ.‌ ಭೇಟಿ ಮಾಡುವ ಸಂದರ್ಭದಲ್ಲಿ ಆ ಘಟನೆ ಬಗ್ಗೆ ವಿವರಣೆ ಕೇಳುವುದರ ಮೂಲಕ ಇನ್ಮುಂದೆ ಈ ರೀತಿ ವರ್ತನೆ ತೋರದಂತೆ ನಡೆದುಕೊಳ್ಳುವಂತೆ ಎಚ್ಚರಿಕೆ ಕೊಡಲು ಮುಂದಾಗಿದ್ದಾರೆ. ಅಲ್ಲದೆ ನೊಂದ ಮಹಿಳೆಯನ್ನು ಕರೆದು ಮಾತನಾಡಲು ಕೂಡ ಸಿಎಂ ನಿರ್ಧರಿಸಿದ್ದಾರೆ.

ಅತ್ತ ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುವಂಥ ಮಾತುಗಳನ್ನಾಡಿದ್ದಾರೆ. ತಮ್ಮ ರಾಜೀನಾಮೆಗೆ ಯಾರಾದರೂ ಒತ್ತಾಯಿಸಿದರೆ ಸುಮ್ಮನರಿಲ್ಲ ಎಂದೂ ಎಚ್ಚರಿಕೆ ಕೊಟ್ಟಿದ್ದಾರೆ.

First published: