• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅಸಮಾಧಾನಿತರ ಸಭೆ ನಡೆಸಿದ್ದ ಉಮೇಶ್ ಕತ್ತಿ ಮೇಲೆ ಸಿಎಂ ಯಡಿಯೂರಪ್ಪ ಕೆಂಗಣ್ಣು

ಅಸಮಾಧಾನಿತರ ಸಭೆ ನಡೆಸಿದ್ದ ಉಮೇಶ್ ಕತ್ತಿ ಮೇಲೆ ಸಿಎಂ ಯಡಿಯೂರಪ್ಪ ಕೆಂಗಣ್ಣು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ನಿಮ್ಮನ್ನು ಮಂತ್ರಿ ಮಾಡ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ. ನಿಮ್ಮ ತಮ್ಮನಿಗೆ ರಾಜ್ಯಸಭೆ ಟಿಕೆಟ್ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಬೇಕಿತ್ತು. ಅದು ಬಿಟ್ಟು ಶಾಸಕರ ಗುಂಪು ಕಟ್ಟಿಕೊಂಡು ಸಭೆ ಮಾಡೋದು ಎಷ್ಟು ಸರಿ..? ಎಂದು ಕತ್ತಿಗೆ ಯಡಿಯೂರಪ್ಪ ಕೇಳಿದ್ದಾರೆ.

  • Share this:

ಬೆಂಗಳೂರು(ಮೇ 29): ನಿನ್ನೆ ಶಾಸಕರ ನೇತೃತ್ವ ವಹಿಸಿ ಸಭೆ ನಡೆಸಿದ್ದ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಮೇಲೆ ಸಿಎಂ ಯಡಿಯೂರಪ್ಪ ಕೋಪಗೊಂಡಿದ್ದಾರೆ. ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ನಡೆಸಿದ ಸಭೆ ಬಗ್ಗೆ ಸಿಎಂ ಯಡಿಯೂರಪ್ಪ ಗುಪ್ತಚರ ಇಲಾಖೆ ಯಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ದೂರವಾಣಿ ಮೂಲಕ ಉಮೇಶ್ ಕತ್ತಿಗೆ ಸಿಎಂ ಬಿಎಸ್​ವೈ ತರಾಟೆ ತೆಗೆದುಕೊಂಡಿದ್ದಾರೆ.


ನಿಮ್ಮನ್ನು ಮಂತ್ರಿ ಮಾಡ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ. ನಿಮ್ಮ ತಮ್ಮನಿಗೆ ರಾಜ್ಯಸಭೆ ಟಿಕೆಟ್ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಬೇಕಿತ್ತು. ಅದು ಬಿಟ್ಟು ಶಾಸಕರ ಗುಂಪು ಕಟ್ಟಿಕೊಂಡು ಸಭೆ ಮಾಡೋದು ಎಷ್ಟು ಸರಿ..? ಸರ್ಕಾರ ಕೊರೋನಾ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ನೀವು ಈ ರೀತಿ ಪ್ರತ್ಯೇಕವಾಗಿ ಶಾಸಕರ ಜೊತೆಗೂಡಿ ಸಭೆ ಸೇರೋದು ಸರೀನಾ..!? ಅದು ಏನು ಆಗಬೇಕು ಹೇಳಿ ಮಾಡಿಕೊಡೋಣ. ಅದು ಬಿಟ್ಟು ಈ ರೀತಿ ನೀವು ಮಾಡೋದು ಸ್ವಲ್ಪನೂ ಸರಿ ಇಲ್ಲ. ಅದೇನು ಬನ್ನಿ ಮಾತನಾಡೋಣ. ಇವತ್ತು ಬಂದು ಭೇಟಿ ಮಾಡಿ ಎಂದು ಸಿಎಂ ಯಡಿಯೂರಪ್ಪ ಉಮೇಶ್ ಕತ್ತಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಭಿನ್ನಮತೀಯರ ಕಹಳೆ; ಕೊರೋನಾ ಸಂಕಷ್ಟದಲ್ಲೂ ಬಿಎಸ್‌ವೈ ಸ್ಥಾನಕ್ಕೆ ಸಂಚಕಾರ?


ಅಲ್ಲೇ ಯತ್ನಾಳ್, ನಿರಾಣಿಗೂ ಸಿಎಂ ಸೂಚನೆ ನೀಡಿದ್ದಾರೆ. ಬಂದು ತನ್ನನ್ನು ಭೇಟಿ ಮಾಡುವಂತೆ ಬುಲಾವ್ ನೀಡಿದ್ದಾರೆ. ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಕರೆದಿರುವುದರಿಂದ ಇಂದು ಈ ಶಾಸಕರು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡುವ ಸಾಧ್ಯತೆ ಇದೆ.


ವರದಿ: ಕೃಷ್ಣ ಜಿ.ವಿ.


Published by:Vijayasarthy SN
First published: