ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಆರೋಗ್ಯ ಸ್ಥಿರ; ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ಸಿಎಂ ಯಡಿಯೂರಪ್ಪನವರ ಆರೋಗ್ಯ ಸ್ಥಿರವಾಗಿದ್ದು, ಇಂದು ಕೂಡ ಬಿಪಿ ಶುಗರ್ ಚೆಕ್ ಮಾಡಲಾಗಿದೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ಕೂಡ ಉತ್ತಮವಾಗಿದ್ದು, ಜ್ವರವೂ ಕಡಿಮೆಯಾಗಿದೆ.

ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ

ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ

  • Share this:
ಬೆಂಗಳೂರು (ಆ. 6): ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಸಿಎಂ ಯಡಿಯೂರಪ್ಪನವರಿಗೆ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಇಂದು ಬೆಳಗ್ಗೆ ಕೂಡ ಬಿಪಿ, ಶುಗರ್ ಚೆಕ್ ಮಾಡಿರುವ ವೈದ್ಯರು ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪನವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ. ಸಿಎಂ ಆರೋಗ್ಯದ ಮೇಲೆ ವೈದ್ಯರ ತಂಡ ನಿಗಾ ವಹಿಸಿದೆ. ಕಳೆದ ಮೂರು ದಿನಗಳಿಂದ ಯಾವುದೇ ರೋಗ ಲಕ್ಷಣಗಳು ಇಲ್ಲ. ಸಿಎಂ ಯಡಿಯೂರಪ್ಪನವರಿಗೆ ಕಫ ಕೂಡ ಕಡಿಮೆ ಆಗಿದೆ. ಇಂದು ಕೂಡ ಸಿಎಂ ಯಡಿಯೂರಪ್ಪಗೆ ಬಿಪಿ ಶುಗರ್ ಚೆಕ್ ಮಾಡಲಾಗಿದೆ.

ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ಕೂಡ ಉತ್ತಮವಾಗಿದ್ದು, ಜ್ವರವೂ ಕಡಿಮೆಯಾಗಿದೆ. ಯೂರಿನ್ ಇನ್ಫೆಕ್ಷನ್ ಕೂಡ ಕಡಿಮೆಯಾಗಿದೆ. ಇವರಿಗೂ ಬಿಪಿ, ಶುಗರ್ ಚೆಕ್ ಮಾಡಿದ ವೈದ್ಯರು ಈಗಾಗಲೇ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ಪರೀಕ್ಷೆಗಳ ವರದಿಯಲ್ಲೂ ಯಾವುದೇ ಸಮಸ್ಯೆ ಇಲ್ಲ. ಸಿದ್ದರಾಮಯ್ಯ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಇಬ್ಬರ ಆರೋಗ್ಯ ಉತ್ತಮವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಕೋದಂಡರಾಮನ ವಿಗ್ರಹ ಉಡುಗೊರೆ; ಬೊಂಬೆನಗರಿ ಚನ್ನಪಟ್ಟಣದಲ್ಲಿದ್ದಾರೆ ವಿಗ್ರಹ ಕೆತ್ತಿದ ಶಿಲ್ಪಿ

ಕೊರೋನಾ ಸೋಂಕಿನಿಂದ ಸಿಎಂ ಯಡಿಯೂರಪ್ಪ ನಾಲ್ಕು ರಾತ್ರಿ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಇತ್ತ ಸಿದ್ದರಾಮಯ್ಯ ಮೂರು ರಾತ್ರಿಯನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಮಣಿಪಾಲ್ ಆಸ್ಪತ್ರೆಯ ಐದನೇ ಮಹಡಿಯಲ್ಲಿಯೇ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.  ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ 17 ದಿನಗಳ ಹಿಂದೆ ಮೂತ್ರಕೋಶದ ಸೋಂಕು ಕಾಣಿಸಿಕೊಂಡಿತ್ತು. ಸೋಮವಾರ ರಾತ್ರಿ ಮತ್ತೆ ನೋವು ಹೆಚ್ಚಾಗಿದ್ದರಿಂದ ಮಗ ಡಾ. ಯತೀಂದ್ರ ಅವರ ಸಲಹೆ ಮೇರೆಗೆ ಸಿದ್ದರಾಮಯ್ಯನವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿದ್ದರಾಮಯ್ಯನವರಿಗೆ ಹೃದಯದ ಸಮಸ್ಯೆಯೂ ಇದ್ದು, ಕಳೆದ ಡಿಸೆಂಬರ್​ನಲ್ಲಿ ಅವರಿಗೆ ಆ್ಯಂಜಿಯೋಪ್ಲಾಸ್ಟ್​ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಸಿದ್ದರಾಮಯ್ಯನವರಿಗೆ ಕೊರೋನಾ ತಪಾಸಣೆ ನಡೆಸಲಾಗಿದ್ದು, ವರದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.

ಕೊರೋನಾ ಪಾಸಿಟಿವ್ ಕಂಡುಬಂದಿದ್ದರಿಂದ ಭಾನುವಾರ ರಾತ್ರಿ ಕೊರೋನಾ ಪಾಸಿಟಿವ್​ನಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶದ ಸೋಂಕು ಹೆಚ್ಚಳವಾದ್ದರಿಂದ ಸೋಮವಾರ ಮಧ್ಯರಾತ್ರಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಹಾಲಿ ಸಿಎಂ ಮತ್ತು ಮಾಜಿ ಸಿಎಂಗಳಿಬ್ಬರೂ ಮಣಿಪಾಲ್ ಆಸ್ಪತ್ರೆಯ ಒಂದೇ ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಣಿಪಾಲ್ ಆಸ್ಪತ್ರೆಯ ಮಹಡಿಯ ಎಡಭಾಗದ ವಾರ್ಡ್​ನಲ್ಲಿ ಸಿದ್ದರಾಮಯ್ಯನವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಡಿಯ ಬಲಭಾದ ವಾರ್ಡ್​ನಲ್ಲಿ ಸಿಎಂ ಯಡಿಯೂರಪ್ಪನವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Published by:Sushma Chakre
First published: