• Home
  • »
  • News
  • »
  • state
  • »
  • ಸಚಿವ ಈಶ್ವರಪ್ಪ- ಸಿಎಂ ಯಡಿಯೂರಪ್ಪ ಇಬ್ಬರು ಒಂದೇ; ಸಚಿವ ಕೋಟ ಶ್ರೀನಿವಾಸ ಪೂಜಾರಿ 

ಸಚಿವ ಈಶ್ವರಪ್ಪ- ಸಿಎಂ ಯಡಿಯೂರಪ್ಪ ಇಬ್ಬರು ಒಂದೇ; ಸಚಿವ ಕೋಟ ಶ್ರೀನಿವಾಸ ಪೂಜಾರಿ 

ಕೋಟಾ ಶ್ರೀನಿವಾಸ ಪೂಜಾರಿ

ಕೋಟಾ ಶ್ರೀನಿವಾಸ ಪೂಜಾರಿ

ಯಾವುದೇ ಸರ್ಕಾರಗಳಿದ್ದಾಗ ಗೊಂದಲ, ಸಣ್ಣ ಪುಟ್ಟ ವ್ಯತ್ಯಾಸಗಳಿರುತ್ತವೆ. ಆಗಾಗ ಕೆಲವೊಮ್ಮೆ ಗುಡುಗು ಸಿಡಿಲು ಬಂದು ಹೋಗುತ್ತವೆ. ಆದರೆ ಅದೆಲ್ಲವೂ ತಣ್ಣಗಾಗಿ ಸರಿಯಾಗಿ, ಆಡಳಿತ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತದೆ. ನಮ್ಮ ಮುಖ್ಯಮಂತ್ರಿಗಳು ಸಮರ್ಥರಿದ್ದು ಉತ್ತಮ ಮತ್ತು ಬಡವರ ಪರವಾದ ಹಾಗೂ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

ಮುಂದೆ ಓದಿ ...
  • Share this:

ಕೊಡಗು(ಏ.06): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಸಚಿವ ಕೆಎಸ್​ ಈಶ್ವರಪ್ಪ ಅವರು ಬೇರೆ ಅಂತ ನೀವು ತಿಳಿದುಕೊಂಡಿರಬಹುದು. ಆದರೆ ಅವರಿಬ್ಬರೂ ಒಂದೇ ಎಂದು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಹೇಳಿದ್ದಾರೆ. ಆ ಮೂಲಕ ಸಚಿವ ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವಿನ ಮುಸುಕಿನ ಗುದ್ದಾಟವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬಾಗಮಂಡಲ ಸಮೀಪದ ಕೋರಂಗಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.


ಈಶ್ವರಪ್ಪ ಅವರು ತಡೆಹಿಡಿದಿದ್ದ ಅನುದಾನವನ್ನು ಸಿಎಂ ಯಡಿಯೂರಪ್ಪ ಅವರು ತುಂಡು ಗುತ್ತಿಗೆ ರೀತಿ ನೇರವಾಗಿ ಬಿಡುಗಡೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ, ಈಶ್ವರಪ್ಪ ಅವರು ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು. ಇಲಾಖೆಗಳ ನಡುವಿನ ಗೊಂದಲಗಳು ಸರಿಯಾಗುತ್ತವೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರಿಬ್ಬರು ಚೆನ್ನಾಗಿಯೇ ಇದ್ದಾರೆ ಎಂದರು.


ಗದಗ ಎಪಿಎಂಸಿಗೆ ಭೂಮಿ ಕೊಟ್ಟ ರೈತನಿಗೆ ಸಿಗದ ಪರಿಹಾರ...! ಕೋರ್ಟ್ ಆದೇಶ ಮೇರೆಗೆ ಎಪಿಎಂಸಿ ಕಚೇರಿ ಜಪ್ತಿ..!


ಇನ್ನು ಬಿಜಿಪಿ ಸರ್ಕಾರದಲ್ಲಿ ಸಾಕಷ್ಟು ಒಳಜಗಳ ಗೊಂದಲಗಳಿದ್ದು, ಅವುಗಳನ್ನು ಪಂಚ ರಾಜ್ಯಗಳ ಚುನಾವಣೆ ಬಳಿಕ ರಾಜ್ಯ ಉಸ್ತುವಾರಿ ಸರಿಪಡಿಸಲಿದ್ದಾರೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಯಾವುದೇ ಸರ್ಕಾರಗಳಿದ್ದಾಗ ಗೊಂದಲ, ಸಣ್ಣ ಪುಟ್ಟ ವ್ಯತ್ಯಾಸಗಳಿರುತ್ತವೆ. ಆಗಾಗ ಕೆಲವೊಮ್ಮೆ ಗುಡುಗು ಸಿಡಿಲು ಬಂದು ಹೋಗುತ್ತವೆ. ಆದರೆ ಅದೆಲ್ಲವೂ ತಣ್ಣಗಾಗಿ ಸರಿಯಾಗಿ, ಆಡಳಿತ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತದೆ. ನಮ್ಮ ಮುಖ್ಯಮಂತ್ರಿಗಳು ಸಮರ್ಥರಿದ್ದು ಉತ್ತಮ ಮತ್ತು ಬಡವರ ಪರವಾದ ಹಾಗೂ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.


ಇನ್ನು ಕೊಡಗಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರವಾಸಿ ತಾಣಗಳು ಮತ್ತು ಅದರ ಜೊತೆಗೆ ಕೊಡಗಿನ ಪ್ರಮುಖ ದೇವಾಲಯಗಳನ್ನು ಬಂದ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿರುವುದರಿಂದ ಅದನ್ನು ನಿಯಂತ್ರಿಸಲು ಇಂತಹ ನಿರ್ಧಾರಗಳು ಅನಿವಾರ್ಯ. ಆದರೆ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ನಡೆಯಬೇಕಾಗಿರುವ ಪೂಜೆ ವಿಧಿ ವಿಧಾನಗಳು ಎಂದಿನಂತೆ ನಿತ್ಯ ಪೂಜೆ ನಡೆಯುತ್ತದೆ ಎಂದರು.


ಇನ್ನು ಚಾಮರಾಜನಗರ ಜಿಲ್ಲಾಧಿಕಾರಿ ಅವರು ಕೋವಿ ಶೀಲ್ಡ್ ವ್ಯಾಕ್ಸಿನ್ ಎರಡು ಡೋಸ್ ಗಳನ್ನು ಪಡೆದಿದ್ದರೂ ಅವರಿಗೆ ಕೋವಿಡ್ ಅಟ್ಯಾಕ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ, ವ್ಯಾಕ್ಸಿನ್ ಪಡೆದರು, ಕೋವಿಡ್ ಅಟ್ಯಾಕ್ ಆದ ಕೂಡಲೇ ವ್ಯಾಕ್ಸಿನ್ ನ ಗುಣಮಟ್ಟದ ಬಗ್ಗೆ ಪ್ರಶ್ನಿಸಲು ಸಾಧ್ಯವಿಲ್ಲ. ಯಾಕೆಂದರೆ ಕೋವಿಶೀಲ್ಡ್ ಆಗಿರಬಹುದು, ಸ್ಫುಟ್ನಿಕ್ ಆಗಿರಬಹುದು, ಇಲ್ಲವೆ ಜಾನ್ಸನ್ ಅಂಡ್ ಜಾನ್ಸನ್ ವ್ಯಾಕ್ಸಿನ್ ಆಗಿರಬಹುದು. ಯಾವುದು ನೂರಕ್ಕೆ ನೂರರಷ್ಟು ಪರಿಣಾಮಕಾರಿ ಎಂದು ಯಾರೂ ಹೇಳಿಕೊಂಡಿಲ್ಲ. ಒಂದು 75% ಪರಿಣಾಮಕಾರಿ ಆದರೆ, ಮತ್ತೊಂದು 80% ರಷ್ಟು ಪರಿಣಾಮಕಾರಿ ಎಂದು ಹೇಳಿಕೊಂಡಿವೆ. ಆದರೆ ವ್ಯಾಕ್ಸಿನ್ ಪಡೆದುಕೊಂಡರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನೋದು ಸತ್ಯ. ಆದರೆ ಚಾಮರಾಜನಗರ ಡಿಸಿಯವರಿಗೆ ಇಮ್ಯುನಿಟಿ ಪವರ್ ಕಡಿಮೆ ಇರಬಹುದು ಅಷ್ಟೇ. ಹೀಗಾಗಿಯೇ ವ್ಯಾಕ್ಸಿನ್ ಪಡೆದರು ಕೊರೊನಾ ಬಂದಿರಬಹುದು. ಹೀಗಾಗಿ ನಾನು ಕೂಡ ವ್ಯಾಕ್ಸಿನ್ ಪಡೆದುಕೊಳ್ಳಲಿದ್ದೇನೆ. ದೇಶದ ಪ್ರಧಾನಿಯೂ ವ್ಯಾಕ್ಸಿನ್ ಪಡೆದಿದ್ದಾರೆ ಎಂದರು.

Published by:Latha CG
First published: