ಸಿಎಂ ಯಡಿಯೂರಪ್ಪ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನು ಸಚಿವರಿಗೆ ಹಂಚಿಕೆ

ಸಂಪುಟದ ಸಚಿವರು

ಸಂಪುಟದ ಸಚಿವರು

ಕಂದಾಯ ಸಚಿವ ಆರ್ ​ಅಶೋಕ್  ಹಾಗೂ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ಮಧ್ಯೆ ಗೊಂದಲ ಉಂಟಾಗಬಾರದು ಎಂದು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಸಿಎಂ ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

  • Share this:

ಬೆಂಗಳೂರು(ಸೆ.27) : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬಳಿಯೇ ಬಾಕಿ ಉಳಿದಿದ್ದ ಖಾತೆಗಳನ್ನು ಹಾಲಿ ಸಚಿವರಿಗೆ ವರ್ಗಾಯಿಸುವ ಮೂಲಕ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿದ್ದಾರೆ.

ಕಂದಾಯ ಸಚಿವ ಆರ್ ​ಅಶೋಕ್ ಹಾಗೂ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ಮಧ್ಯೆ ಗೊಂದಲ ಉಂಟಾಗಬಾರದು ಎಂದು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಸಿಎಂ ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ರಾಜ್ಯಪತ್ರ ಹೊರಡಿಸಲಾಗಿದೆ

ORDER
ಕರ್ನಾಟಕ ರಾಜ್ಯ ಪತ್ರ


ಡಿಸಿಎಂ ಡಾ ಅಶ್ವಥ್ ನಾರಾಯಣ- ವೈದ್ಯಕೀಯ ಶಿಕ್ಷಣ.

ಡಿಸಿಎಂ ಲಕ್ಷ್ಮಣ ಸವದಿ - ಕೃಷಿ.

ಕೆ ಎಸ್ ಈಶ್ವರಪ್ಪ - ಯುವಜನ ಸೇವೆ-ಕ್ರೀಡೆ.

ಆರ್. ಅಶೋಕ್ - ಪುರಸಭೆ, ಪಾಲಿಕೆ, ಸ್ಥಳೀಯ ಸಂಸ್ಥೆಗಳು (ಬೆಂಗಳೂರು ಹೊರತು ಪಡಿಸಿ)

ಜಗದೀಶ್ ಶೆಟ್ಟರ್- ಸಾರ್ವಜನಿಕ ಉದ್ಯಮ

ಶ್ರೀರಾಮುಲು- ಹಿಂದುಳಿದ ವರ್ಗ ಇಲಾಖೆ.

ಸುರೇಶ್ ಕುಮಾರ್ - ಕಾರ್ಮಿಕ ಇಲಾಖೆ.

ಸಿಟಿ ರವಿ -ಸಕ್ಕರೆ.

ಬಸವರಾಜ ಬೊಮ್ಮಾಯಿ - ಸಹಕಾರ.

ಸೋಮಣ್ಣ- ತೋಟಗಾರಿಕೆ ಮತ್ತು ರೇಷ್ಮೆ.

ಸಿ ಸಿ ಪಾಟೀಲ್ - ಅರಣ್ಯ ಭೂವಿಜ್ಞಾನ ಮತ್ತು ಪರಿಸರ.

ನಾಗೇಶ್ - ಕೌಶಲ್ಯಾಭಿವೃದ್ಧಿ

ಪ್ರಭು ಚೌಹಾಣ್ - ಅಲ್ಪಸಂಖ್ಯಾತ ಅಭಿವೃದ್ಧಿ ಮತ್ತು ಹಜ್-ವಕ್ಫ್

ಶಶಿಕಲಾ ಜೊಲ್ಲೆ- ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ.

ಇದನ್ನೂ ಓದಿ : ಕಡೆಗೂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ಕಾವೇರಿ ನಿವಾಸ ಖಾಲಿ ಮಾಡಿಸಿ, ಅಲ್ಲಿಗೆ ಹೋಗಲು ಸಜ್ಜಾದ ಸಿಎಂ ಬಿಎಸ್​ವೈ



 

First published: