ಕೊನೆಗೂ ಈಡೇರಿದ ರಮೇಶ್​​ ಜಾರಕಿಹೊಳಿ ಪಟ್ಟು; ಜಲ ಸಂಪನ್ಮೂಲ ಖಾತೆ ಪಡೆಯುವಲ್ಲಿ ಯಶಸ್ವಿ

ಇದರ ಜೊತೆಗೆ ನೂತನ ಸಚಿವ ರಮೇಶ್​ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿದೆ.  ಈ ಮೂಲಕ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಗೋಕಾಕ್​ ಶಾಸಕರ ಶಕ್ತಿಯನ್ನು ಸಿಎಂ ಹೆಚ್ಚಿಸಿದ್ದಾರೆ ಎನ್ನಲಾಗಿದೆ.

ಶಾಸಕ ರಮೇಶ್ ಜಾರಕಿಹೊಳಿ

ಶಾಸಕ ರಮೇಶ್ ಜಾರಕಿಹೊಳಿ

  • Share this:
ಬೆಂಗಳೂರು (ಫೆ.10): ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಸಿಎಂ ಪಟ್ಟಿ ಸಿದ್ದಪಡಿಸಿದ್ದು, ಅವರ ಬೇಡಿಕೆಯಂತೆಯೇ ಮುಖ್ಯಮಂತ್ರಿಗಳು ಅವರಿಗೆ ಖಾತೆಯನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.

ರಮೇಶ್​ ಜಾರಕಿಹೊಳಿ ಬೇಡಿಕೆಯಂತೆಯೇ ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ, ಜಲಸಂಪನ್ಮೂಲ ಖಾತೆ ನೀಡಿದ್ದು, ಶಿವರಾಮ್​ ಹೆಬ್ಬಾರ್​ಗೆ  ಪೌರಾಡಳಿತ, ಬಿ.ಸಿ.ಪಾಟೀಲ್​ - ಇಂಧನ, ನಾರಾಯಣಗೌಡ- ಆಹಾರ ಮತ್ತು ನಾಗರಿಕ ಸರಬರಾಜು, ಶ್ರೀಮಂತ ಪಾಟೀಲ್​- ಸಕ್ಕರೆ ಹಾಗೂ ಕೆ.ಸುಧಾಕರ್- ವೈದ್ಯಕೀಯ ಖಾತೆ ಹಂಚಿಕೆ ಮಾಡಿದ್ದಾರೆ.

ಚುನಾವಣೆಯಲ್ಲಿ ಗೆದ್ದಗಿನಿಂದಲೂ ರಮೇಶ್​ ಜಾರಕಿಹೊಳಿ ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿದ್ದರು. ತಮಗೆ ಡಿಸಿಎಂ ಸ್ಥಾನ ನೀಡದಿದ್ದರೂ ತಮಗೆ ಜಲಸಂಪನ್ಮೂಲ ಖಾತೆಯೇ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು.  ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲು ಒಲವು ತೋರಿದ್ದರು. ಆದರೆ, ಇದಕ್ಕೆ ಕೆಲ ಮೂಲ ಬಿಜೆಪಿ ನಾಯಕರು ಅಸಮಾಧಾನ ತೋರಿದ್ದರು.

 

ಇದರ ಜೊತೆಗೆ ನೂತನ ಸಚಿವ ರಮೇಶ್​ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿದೆ.  ಈ ಮೂಲಕ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಗೋಕಾಕ್​ ಶಾಸಕರ ಶಕ್ತಿಯನ್ನು ಸಿಎಂ ಹೆಚ್ಚಿಸಿದ್ದಾರೆ ಎನ್ನಲಾಗಿದೆ.

ನೂತನ ಸಚಿವರಿಗೆ ಹಂಚಿಕೆಯಾದ ಖಾತೆ ಪಟ್ಟಿ

ರಮೇಶ್ ಜಾರಕಿಹೊಳಿ - ನೀರಾವರಿ

ಬಿ.ಸಿ.ಪಾಟೀಲ್ - ಇಂಧನ ಖಾತೆ

ಡಾ.ಸುಧಾಕರ್ - ವೈದ್ಯಕೀಯ ಶಿಕ್ಷಣ

ನಾರಾಯಣಗೌಡ - ಆಹಾರ & ನಾಗರಿಕ

ಶಿವರಾಂ ಹೆಬ್ಬಾರ್ - ಪೌರಾಡಳಿತ

ಎಸ್.ಟಿ. ಸೋಮಶೇಖರ್ - ಸಹಕಾರ

ಭೈರತಿ ಬಸವರಾಜು - ನಗರಾಭಿವೃದ್ಧಿ

ಗೋಪಾಲಯ್ಯ - ಕಾರ್ಮಿಕ ಖಾತೆ

ಶ್ರೀಮಂತ ಪಾಟೀಲ್ - ಸಕ್ಕರೆ

ಆನಂದ್ ಸಿಂಗ್ - ಗಣಿ ಮತ್ತು ಭೂ ವಿಜ್ಞಾನ

ಯುವಜನ ಸೇವೆ ಮತ್ತು ಕ್ರೀಡೆ
First published: