HOME » NEWS » State » CM BS YEDIYUARAPPA WILL BREAK EARTH FOR ESTABLISH AIRPORT AT VIJAYAPURA MVSV LG

ಫೆ. 15 ರಂದು 2ನೇ ಬಾರಿಗೆ ವಿಜಯಪುರ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಲಿರುವ ಸಿಎಂ ಯಡಿಯೂರಪ್ಪ

ಈ ಕಾಮಗಾರಿಗಾಗಿ ಬುರಣಾಪುರ ಬಳಿ 727 ಎಕರೆ ಜಮೀನನ್ನು ಈಗಾಗಲೇ ಸ್ವಾಧಿನ ಪಡಿಸಿಕೊಳ್ಳಲಾಗಿದೆ.  ವಿಜಯಪುರ ನಗರದಿಂದ 10 ಕಿ. ಮೀ. ದೂರದಲ್ಲಿ ನಿರ್ಮಾಣವಾಗಲಿರುವ ಈ ವಿಮಾನ ನಿಲ್ದಾಣ ಕಾಮಗಾರಿಗೆ ರೂ. 222 ಕೋ. ವೆಚ್ಚವಾಗಲಿದ್ದು, ಕರ್ನಾಟಕ ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ ಹಣ ನೀಡುತ್ತಿದೆ. 

news18-kannada
Updated:February 13, 2021, 11:20 AM IST
ಫೆ. 15 ರಂದು 2ನೇ ಬಾರಿಗೆ ವಿಜಯಪುರ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಲಿರುವ ಸಿಎಂ ಯಡಿಯೂರಪ್ಪ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
 ವಿಜಯಪುರ(ಫೆ. 13): ಬಸವ ನಾಡಿನ ಜನ ಕಾಣುತ್ತಿರುವ ವಾಯುಯಾನ ಕನಸು ಈಗ ನನಸಾಗುವ ದಿನ ಹತ್ತಿರ ಬಂದಿದೆ.  ಬಹು ನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಎರಡನೇ ಬಾರಿ ಮುಹೂರ್ತ ಕೂಡಿ ಬಂದಿದ್ದು, ಫೆ. 15 ರಂದು ಸಿಎಂ ಬಿ. ಎಸ್. ಯಡಿಯೂರಪ್ಪ ಎರಡನೇ ಬಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ,  ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕಾರಜೋಳ ಮುಂತಾದವರು, ಫೆ. 15 ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕಾಮಗಾರಿಗಾಗಿ ಬುರಣಾಪುರ ಬಳಿ 727 ಎಕರೆ ಜಮೀನನ್ನು ಈಗಾಗಲೇ ಸ್ವಾಧಿನ ಪಡಿಸಿಕೊಳ್ಳಲಾಗಿದೆ.  ವಿಜಯಪುರ ನಗರದಿಂದ 10 ಕಿ. ಮೀ. ದೂರದಲ್ಲಿ ನಿರ್ಮಾಣವಾಗಲಿರುವ ಈ ವಿಮಾನ ನಿಲ್ದಾಣ ಕಾಮಗಾರಿಗೆ ರೂ. 222 ಕೋ. ವೆಚ್ಚವಾಗಲಿದ್ದು, ಕರ್ನಾಟಕ ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ ಹಣ ನೀಡುತ್ತಿದೆ.  ಕೆ ಎಸ್‌ ಐ ಐ ಡಿ ಸಿ ಸಂಸ್ಥೆ ಈ ಕಾಮಗಾರಿಯ ನೋಡಲ್ ಸಂಸ್ಥೆಯಾಗಿ ನೇಮಕವಾಗಿದೆ.  ಲೋಕೋಪಯೋಗಿ ಇಲಾಖೆಯಿಂದ ಯೋಜನೆ ಅನುಷ್ಠಾನವಾಗುತ್ತಿದ್ದು, ಳೂರಿನ ಐಡೆಕ್ ಸಂಸ್ಥೆ ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರರ ಜವಾಬ್ದಾರಿ ನಿರ್ವಹಿಸಲಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ATR-72 ವಿಮಾನಗಳ ಹಾರಾಟಕ್ಕೆ ಅಗತ್ಯವಾಗಿರುವ ಕಾಮಗಾರಿ ನಡೆಸಲಾಗುತ್ತಿದ್ದು, 2ನೇ ಹಂತದಲ್ಲಿ Air Bus-320 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.  ಗುರಗಾಂವನ M/s RITES ಸಂಸ್ಥೆ ಕಾಮಗಾರಿಯ ವಿನ್ಯಾಸ ರೂಪಿಸಿಸಿದೆ.  ಒಟ್ಟು ರೂ. 220 ಕೋ. ವೆಚ್ಚದ ಕಾಮಗಾರಿ 2 ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ರೂ. 95 ಕೋ. ವೆಚ್ಚದಲ್ಲಿ ಏರ್ ಸೈಡ್ ಕಾಮಗಾರಿಗಳನ್ನು ಹಾಗೂ 2ನೇ ಹಂತದಲ್ಲಿ ಸಿಟಿಸೈಡ್ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

ಎಚ್ಚರ… ಎಚ್ಚರ..!: ಕೊರೋನಾ ಲಸಿಕೆ ಹಾಕುವ ನೆಪದಲ್ಲಿ ಮನೆ ಲೂಟಿ ಮಾಡ್ತಾರೆ ಹುಷಾರ್..!



ಈಗಾಗಲೇ ಮಂಜೂರಾಗಿರುವ ಮೊದಲ ಹಂತದ ಕಾಮಗಾರಿಗೆ 12.12.2020ರಂದು ಆಡಳಿತಾತ್ಮ ಅನುಮೋದನೆ ಮತ್ತು ಮಂಜೂರಾತಿ ನೀಡಲಾಗಿದೆ.  ವಿಜಯಪುರದ ಮೆ: ಎಸ್. ಎಸ್. ಆಲೂರ ಕನಸ್ಟ್ರಕ್ಸನ್ ಕಂಪನಿ ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು, 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಮಯ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ವಿವೇಕ ಡಬ್ಬಿ, ಬಸವರಾಜ ಬೈಚಬಾಳ, ಮಲ್ಲಿಕಾರ್ದುನ ಜೋಗೂರ, ಬಸವರಾಜ ಬಿರಾದಾರ, ವಿಜಯ ಜೋಶಿ ಉಪಸ್ಥಿತರಿದ್ದರು.

ವಿಮಾನ ನಿಲ್ದಾಣ ಹಿನ್ನೆಲೆಐತಿಹಾಸಿಕ ತಾಣವಾಗಿರುವ ಬಸವನಾಡು ತೋಟಗಾರಿಕೆ ಬೆಳೆಗಳಿಗೂ ಹೆಸರುವಾಸಿಯಾಗಿದ್ದು, ಈ ಭಾಗದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಇಲ್ಲಿನ ಜನ ಹಲವಾರು ದಶಕಗಗಳಿಂದ ಆಗ್ರಹಿಸುತ್ತಲೇ ಬಂದಿದ್ದರು.  ಅದರಂತೆ, 02.07.2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.  ಆಗ ಈ ವಿಮಾನ ನಿಲ್ದಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದ ಚೆನ್ನೈ ಮೂಲದ ಮಾರ್ಗ್ ಸಂಸ್ಥೆ 2012ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿತ್ತು.  ಇದಕ್ಕಾಗಿ ರೈತರು, ವ್ಯಾಪಾರಿಗಳು, ಇತರ ಕ್ಷೇತ್ರಗಳ ಗಣ್ಯರೊಂದಿಗೆ ಸರಣಿ ಸಭೆಗಳನ್ನೂ ನಡೆಸಿತ್ತು.  2012ಕ್ಕೂ ಮುನ್ನವೇ ನಷ್ಟದ ನೆವವೊಡ್ಡಿದ್ದ ಮಾರ್ಗ್ ಸಂಸ್ಥೆ ಕಾಮಗಾರಿ ಕೈಬಿಟ್ಟು ಪಲಾಯನ ಮಾಡಿತ್ತು.  ಅದಾದ ಬಳಿಕ ಬಸವ ನಾಡಿನ ಜನರಾಸೆಯ ಯೋಜನೆ ರಾಜಕಾರಣಿಗಳ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.

ಇದೀಗ ಯಡಿಯೂರಪ್ಪ ಮತ್ತೆ ಸಿಎಂ ಆದ ನಂತರ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರ ಮುತುವರ್ಜಿಯಲ್ಲಿ ಈಗ ಈ ಕಾಮಗಾರಿ ಟೆಕಾಫ್ ಆಗಲಿದೆ.  ಈಗಾಗಲೇ ಹಲವಾರು ಬಾರಿ ಡಿಸಿಎಂ ಗೋವಿಂದ ಕಾರಜೋಳ ಮತ್ತು ರಮೇಶ ಜಿಗಜಿಣಗಿ ಈ ಸ್ಥಳದ ಪರಿಶೀಲನೆ ನಡೆಸಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ.

ಈಗ ಈ ಕಾಮಗಾರಿಗೆ ಮತ್ತೆ ಸಿಎಂ ಆಗಿರುವ ಯಡಿಯೂರಪ್ಪ ಅವರೇ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಗಮನಾರ್ಹವಾಗಿದೆ.  ಆದರೆ, 02.07.2008ರಲ್ಲಿ ಯಡಿಯೂರಪ್ಪ ಬುರಣಾಪುರಕ್ಕೆ ಆಗಮಿಸಿ ಶಂಕುಸ್ಥಾಪನೆ ನೆರವೇರಿಸಿದ್ದರೆ, ಈಗ ದೂರದ ಬೆಂಗಳೂರಿನಲ್ಲಿ ಕುಳಿತುಕೊಂಡು ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡುತ್ತಿರುವುದು ಗಮನಾರ್ಹವಾಗಿದೆ.
Published by: Latha CG
First published: February 13, 2021, 11:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories