ನಾನು ರಮೇಶ್​ ಜಾರಕಿಹೊಳಿ ಋಣ ತೀರಿಸಬೇಕಿದೆ; ಸಿಎಂ ಬಿಎಸ್​ ಯಡಿಯೂರಪ್ಪ

ರಮೇಶ ಜಾರಕಿಹೊಳಿ‌ ವಿಶೇಷ ಪ್ರಯತ್ನದಿಂದ ‌ನಾನು ಸಿಎಂ ಆಗಿದ್ದೇನೆ. ಅವರು ಸಿಎಂ ಆಗಲು ಬಯಸಲಿಲ್ಲ. ರಮೇಶ್​​​ ಜಾರಕಿಹೊಳಿ‌ ಮಾಡಿರುವ ಸಹಾಯವನ್ನು ನಮ್ಮ‌ ಜೀವನದಲ್ಲಿ ಮರೆಯಲ್ಲ ಸಾಧ್ಯವಿಲ್ಲ. ಲಿಂಗಾಯತ ಸಮಾಜದ ಮತವನ್ನು ರಮೇಶ ಜಾರಕಿಹೊಳಿ‌ಗೆ ಕೊಡಬೇಕು.

Latha CG | news18-kannada
Updated:November 23, 2019, 7:23 PM IST
ನಾನು ರಮೇಶ್​ ಜಾರಕಿಹೊಳಿ ಋಣ ತೀರಿಸಬೇಕಿದೆ; ಸಿಎಂ ಬಿಎಸ್​ ಯಡಿಯೂರಪ್ಪ
ರಮೇಶ್​ ಜಾರಕಿಹೊಳಿ- ಬಿಎಸ್​ ಯಡಿಯೂರಪ್ಪ
  • Share this:
ಬೆಳಗಾವಿ(ನ.23): ಸಿಎಂ ಬಿಎಸ್​ ಯಡಿಯೂರಪ್ಪ ಗೋಕಾಕ್​ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ ಪರ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಬಿಎಸ್​ವೈ ರಮೇಶ್​​ ಜಾರಕಿಹೊಳಿ ಅವರನ್ನು ಗೋಕಾಕ್​ನ ಮುಂದಿನ ಶಾಸಕ, ಭಾವಿ ಸಚಿವ ಎಂದು ಸಂಭೋದಿಸಿದ್ದಾರೆ. 

"ಗೋಕಾಕ್​​ನ ಮುಂದಿನ ಶಾಸಕ, ಭಾವಿ ಸಚಿವ ರಮೇಶ ಜಾರಕಿಹೊಳಿ‌. ನಾನೇನು ವಿಜಯೋತ್ಸವಕ್ಕೆ ಬಂದಿದ್ದೀನಾ ಅಥವಾ ಪ್ರಚಾರಕ್ಕೆ ಬಂದಿದ್ದೀನಾ ಎಂಬ ಅನುಮಾನವಿದೆ. ರಮೇಶ ಜಾರಕಿಹೊಳಿ‌ ವಿಶೇಷ ಪ್ರಯತ್ನದಿಂದ ‌ನಾನು ಸಿಎಂ ಆಗಿದ್ದೇನೆ. ಅವರು ಸಿಎಂ ಆಗಲು ಬಯಸಲಿಲ್ಲ. ರಮೇಶ್​​​ ಜಾರಕಿಹೊಳಿ‌ ಮಾಡಿರುವ ಸಹಾಯವನ್ನು ನಮ್ಮ‌ ಜೀವನದಲ್ಲಿ ಮರೆಯಲ್ಲ ಸಾಧ್ಯವಿಲ್ಲ. ಲಿಂಗಾಯತ ಸಮಾಜದ ಮತವನ್ನು ರಮೇಶ ಜಾರಕಿಹೊಳಿ‌ಗೆ ಕೊಡಬೇಕು," ಎಂದು ಬಿಎಸ್​ವೈ ಮನವಿ ಮಾಡಿದರು.

ಮಹಾರಾಷ್ಟ್ರದಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಶುರು; ಜೈಪುರ, ಭೋಪಾಲ್​ನತ್ತ ಮುಖ ಮಾಡಿದ ಶಿವಸೇನಾ, ಕಾಂಗ್ರೆಸ್ ಶಾಸಕರು

"ಒಂದು ಲಕ್ಷ ಮತದಿಂದ ರಮೇಶ ಜಾರಕಿಹೊಳಿ‌ ಗೆದ್ದರೆ ನನಗೆ ಸಮಾಧಾನ. ಚುನಾವಣೆ ಗೆದ್ದಾಗಿದೆ ಅಂತರ ಎಷ್ಟು ಎಂಬುದು ನಿರ್ಧಾರವಾಗಬೇಕು. ನಾನು ರಮೇಶ ಜಾರಕಿಹೊಳಿ‌ ಋಣ ತೀರಿಸಬೇಕಿದೆ. ಮುಂಬೈನಲ್ಲಿ ಇದ್ದು ನಮಗಾಗಿ ಹೋರಾಟ ಮಾಡಿದ್ದಾರೆ. ರಮೇಶ ಜಾರಕಿಹೊಳಿ‌ ಹೇಗೆ ಅಭಿನಂದನೆ ಸಲ್ಲಿಸಬೇಕು‌ ಗೊತ್ತಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪಕ್ಷದಿಂದ ಹೊರಬಂದು ನನಗೆ ಬೆಂಲಿಸಿದ್ದಾರೆ," ಎಂದು ಹಾಡಿ ಹೊಗಳಿಸಿದರು.

"ಸಮಾಜದ ಬಂಧುಗಳು ಬಿಜೆಪಿಯನ್ನು ಬೆಂಬಲಿಸಬೇಕು. 15 ಕ್ಷೇತ್ರಗಳನ್ನು ಮಾದರಿ ಕ್ಷೇತ್ರಗಳನ್ನಾಗಿ ಪರಿವರ್ತಿಸಲು ಅಭಿವೃದ್ಧಿ ಕೆಲಸ ಮಾಡಬೇಕು. ಅತಿವೃಷ್ಠಿ ಸಂದರ್ಭದಲ್ಲಿ ನಾವು ಕೆಲಸ ಮಾಡಿದ್ದೇವೆ. ದೇಶದ ಇತಿಹಾಸದಲ್ಲಿ ಯಾರೂ ಮಾಡದ ಕೆಲಸ ಮಾಡಿದ್ದೇವೆ‌. ವಾಲ್ಮೀಕಿ, ಕನಕ ಜಯಂತಿ, ಹಜ್ ಭವನ ನಿರ್ಮಾಣಕ್ಕೆ ಹಣ ಕೊಟ್ಟಿದ್ದೇನೆ.  ನಾನು ಹಿಂದು-ಮುಸ್ಲಿಂ ಎಂದು ಭೇದಭಾವ ಮಾಡಿಲ್ಲ. ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇನೆ," ಎಂದರು.

ಜನ ಸಂಪೂರ್ಣ ಬದಲಾಗಿದ್ದಾರೆ, ಕೆ.ಆರ್​.ಪೇಟೆಯಲ್ಲಿ ಕಾಂಗ್ರೆಸ್​ ಗೆದ್ದೇ ಗೆಲ್ಲುತ್ತದೆ; ಮಾಜಿ ಸಚಿವ ಚೆಲುವರಾಯಸ್ವಾಮಿ

ಬಾಲಚಂದ್ರ ಜಾರಕಿಹೊಳಿ‌ ರಾತ್ರಿ ಬಂದು ಕೆಎಂಎಫ್ ಅಧ್ಯಕ್ಷನಾಗೋಕೆ ಸಹಿ ಮಾಡಿ ಅಂದರು. ಕಣ್ಣು ಮುಚ್ಚಿ ಸಹಿ ಮಾಡಿದ್ದೇನೆ. ಗೋಕಾಕ್​​ನ ಎಲ್ಲಾ ಅಭಿವೃದ್ಧಿ ಕೆಲಸ ಮಾಡಲು ನಾನು ಸಿದ್ದ. ಗೋಕಾಕ್, ಅಥಣಿ ಹಾಗೂ ಕಾಗವಾಡ ಮೂರು ಕ್ಷೇತ್ರಗಳು ನನಗೆ ಮುಖ್ಯ. ನಾನು ಯಾವುದೇ ಸಮಾಜದ ವಿರೋಧಿಯಲ್ಲ ಎಂದು ಹೇಳಿದರು.ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಫೈಸ್ಟಾರ್ ಹೋಟೆಲ್​​​ನಲ್ಲಿ ಇದ್ದು ಐಷಾರಾಮಿ ಜೀವನ ನಡೆಸಲು ನನಗೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು. 

First published: November 23, 2019, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading