ಉಮೇಶ ಕತ್ತಿಗೆ ಸಚಿವ ಸ್ಥಾನ ಕೊಡದಿದ್ದರೆ ಅವರು ನನ್ನ ಬಿಡಬೇಕಲ್ಲ; ಸಿಎಂ ಯಡಿಯೂರಪ್ಪ

ಎಲ್ಲರಿಗೂ ಬಿಎಸ್​ವೈ ಸಿಎಂ ಆಗಿ ಮುಂದುವರೆಯಬೇಕು ಅಂತಿದೆ. ಯಾರ ಹೋರಾಟ ಯಾರ ವಿರುದ್ಧ ಎಂದು ಡಿ.9 ರಂದು ಗೊತ್ತಾಗಲಿದೆ. ವಿರೋಧ ಪಕ್ಷದವರು 15 ಕ್ಷೇತ್ರಗಳಲ್ಲಿ ದಯನೀಯ ಸೊಲು ಕಾಣುತ್ತಾರೆ ಎಂದು ಭವಿಷ್ಯ ನುಡಿದರು.

Latha CG | news18-kannada
Updated:November 24, 2019, 11:16 AM IST
ಉಮೇಶ ಕತ್ತಿಗೆ ಸಚಿವ ಸ್ಥಾನ ಕೊಡದಿದ್ದರೆ ಅವರು ನನ್ನ ಬಿಡಬೇಕಲ್ಲ; ಸಿಎಂ ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಳಗಾವಿ(ನ.24): ಸಿಎಂ ಬಿ.ಎಸ್​.ಯಡಿಯೂರಪ್ಪ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.   ಉಪಚುನಾವಣೆಯಲ್ಲಿ 15 ಕ್ಷೇತ್ರ ಗೆಲ್ಲುವ ಸಂಕಲ್ಪ ಇದೆ ಎಂದು ಬಿಎಸ್​​ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಉಪಚುನಾವಣೆಯಲ್ಲಿ 15 ಕ್ಷೇತ್ರಗಳನ್ನು ಗೆಲ್ಲುವ ಸಂಕಲ್ಪ ಇದೆ. ಡಿಸೆಂಬರ್ 9ರಂದು ನೀವೇ ನೋಡುತ್ತೀರಿ. ಕಾಂಗ್ರೆಸ್ ಜೆಡಿಎಸ್ ಏನು ಮಾತನಾಡಿದರೂ ಸರಿ.  ನಾವು 15 ಕ್ಷೇತ್ರಗಳಲ್ಲಿ ಗೆದ್ದು ಒಂದು ಹೊಸ ದಾಖಲೆ ಮಾಡುತ್ತೇವೆ. ಎಲ್ಲರ ಕಲ್ಯಾಣಕ್ಕೆ ಬಜೆಟ್ ರೂಪಿಸುತ್ತೇವೆ ಎಂದು ಹೇಳಿದರು.

ಬಹುಮತ ಸಾಬೀತು ಕೋರಿ ಸೇನಾ-ಕಾಂಗ್ರೆಸ್-ಎನ್​​ಸಿಪಿ ಸುಪ್ರೀಂಕೋರ್ಟ್​​​ನಲ್ಲಿ ಅರ್ಜಿ; ಇಂದು ವಿಚಾರಣೆ

ನಮ್ಮ‌ ಪ್ರಕಾರ ಯಾವ ‌ಬಂಡಾಯವೂ ಸಮಸ್ಯೆ ಆಗಲ್ಲ. ಹಿಂದೆ ಹೇಳಿದಂತೆ ರಾಜ್ಯದಲ್ಲಿ 25 ಸಂಸದರು ಗೆದ್ದಿದ್ದಾರೆ. ನಾನು ಮತ್ತೊಮ್ಮೆ ಬೆಳಗಾವಿಗೆ ಪ್ರಚಾರಕ್ಕೆ ಬರಲಿದ್ದೇನೆ. ವೀರಶೈವ ಸಮಾಜದವರು ಯಾವತ್ತೂ ನಮ್ಮ‌ ಕೈಬಿಡಲ್ಲ. ಸಣ್ಣ ಪುಟ್ಟ ಗೊಂದಲ‌ ಮರೆತು ಕೈ ಜೊಡಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದರು.

ಎಲ್ಲರಿಗೂ ಬಿಎಸ್​ವೈ ಸಿಎಂ ಆಗಿ ಮುಂದುವರೆಯಬೇಕು ಅಂತಿದೆ. ಯಾರ ಹೋರಾಟ ಯಾರ ವಿರುದ್ಧ ಎಂದು ಡಿ.9 ರಂದು ಗೊತ್ತಾಗಲಿದೆ. ವಿರೋಧ ಪಕ್ಷದವರು 15 ಕ್ಷೇತ್ರಗಳಲ್ಲಿ ದಯನೀಯ ಸೊಲು ಕಾಣುತ್ತಾರೆ ಎಂದು ಭವಿಷ್ಯ ನುಡಿದರು.

ಹೆಣ್ಣಾಗಿ ನಾನೇ 1,200 ಕೋಟಿ ರೂ. ಅನುದಾನ ತಂದಿದ್ದೇನೆ; ಗಂಡಸ್ಸಾಗಿ ನೀವೆಷ್ಟು ತರಬಹುದಿತ್ತು; ಮಹೇಶ್​​ ಕುಮಟಳ್ಳಿಗೆ ಹೆಬ್ಬಾಳ್ಕರ್​​ ಪ್ರಶ್ನೆ

ನಾನು ಡಿಸಿಎಂ ಆಗಲ್ಲ, ಮುಖ್ಯಮಂತ್ರಿ ಆಗುತ್ತೇನೆ. ಇಲ್ಲವಾದರೆ ಮಂತ್ರಿಯಾಗಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಮೊನ್ನೆ ಹೇಳಿದ್ದರು.  ಈ ವಿಚಾರವಾಗಿ, "ಉಮೇಶ್​ ಕತ್ತಿಗೆ ಸಚಿವ ಸ್ಥಾನ ಕೊಡದಿದ್ದರೆ  ಅವರು ನನ್ನ ಬಿಡಬೇಕಲ್ಲ," ಎಂದು ಬಿಎಸ್​ವೈ ಹೇಳಿದರು.
First published: November 24, 2019, 11:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading