ಶುಕ್ರವಾರ ಸಂಪುಟ ರಚನೆ ಮಾಡಲಿರುವ ಸಿಎಂ ಯಡಿಯೂರಪ್ಪ?; ಬಿಎಸ್​ವೈ ಸಂಪುಟ ಸಂಭಾವ್ಯ ಸಚಿವರು ಇವರು?

BJP Trust Vote: ಮೊದಲ ಹಂತದಲ್ಲಿ ಶ್ರೀರಾಮುಲು, ಮಾಧುಸ್ವಾಮಿ, ಉಮೇಶ್ ಕತ್ತಿ, ಈಶ್ವರಪ್ಪ, ಗೋವಿಂದ ಕಾರಜೋಳ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಅಶ್ವಥನಾರಾಯಣ, ಯತ್ನಾಳ್​, ಪಕ್ಷೇತರ ಶಾಸಕ ನಾಗೇಶ್ ಸಚಿವ ಸ್ಥಾನ ಪಡೆಯುವ ಸಾಧ್ಯತೆ ಇದೆ.

Seema.R | news18
Updated:July 29, 2019, 3:32 PM IST
ಶುಕ್ರವಾರ ಸಂಪುಟ ರಚನೆ ಮಾಡಲಿರುವ ಸಿಎಂ ಯಡಿಯೂರಪ್ಪ?; ಬಿಎಸ್​ವೈ ಸಂಪುಟ ಸಂಭಾವ್ಯ ಸಚಿವರು ಇವರು?
ಬಿ.ಎಸ್​. ಯಡಿಯೂರಪ್ಪ
  • News18
  • Last Updated: July 29, 2019, 3:32 PM IST
  • Share this:
ಬೆಂಗಳೂರು (ಜು.29): ಇಂದು ಸದನದಲ್ಲಿ ಧ್ವನಿಮತದ ಮೂಲಕ ವಿಶ್ವಾಸಮತ ಗೆದ್ದ ಸಿಎಂ ಬಿಎಸ್​ ಯಡಿಯೂರಪ್ಪ, ಶುಕ್ರವಾರ  ಸಂಪುಟ ರಚನೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಸಚಿವ ಸ್ಥಾನ ಪಡೆಯಲು ಬಿಜೆಪಿ ಶಾಸಕರಲ್ಲಿ ಪೈಪೋಟಿಯುಂಟಾಗಿದ್ದು, ಮೊದಲ ಹಂತದಲ್ಲಿ 10 ಜನ ಶಾಸಕರು ಸಂಪುಟ ಸೇರುವುದು ನಿಶ್ಚಿತ ಎಂಬ ಮಾತು ಕೇಳಿಬರುತ್ತಿದೆ.

106 ಶಾಸಕರ ಬೆಂಬಲದೊಂದಿಗೆ ಸದನದಲ್ಲಿ ಬಹುಮತ ಸಾಬೀತು ಮಾಡಿದ ಬಿಎಸ್​ ಯಡಿಯೂರಪ್ಪ, ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬ ಕುರಿತು ಚರ್ಚೆ ನಡೆಸಲು ನಾಳೆ ದೆಹಲಿಗೆ ತೆರಳಲಿದ್ದಾರೆ. ಈಗಾಗಲೇ ಮೊದಲ ಹಂತದ ಪಟ್ಟಿ ಸಿದ್ಧವಾಗಿದ್ದು, ಈ ಕುರಿತು ಹೈ ಕಮಾಂಡ್​ಗೆ ಪಟ್ಟಿ ಸಲ್ಲಿಸಲಿದ್ದಾರೆ.

ಮೊದಲ ಹಂತದಲ್ಲಿ ಶ್ರೀರಾಮುಲು, ಮಾಧುಸ್ವಾಮಿ, ಉಮೇಶ್ ಕತ್ತಿ, ಈಶ್ವರಪ್ಪ, ಗೋವಿಂದ ಕಾರಜೋಳ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಅಶ್ವತ್ಥನಾರಾಯಣ, ಯತ್ನಾಳ್​, ಪಕ್ಷೇತರ ಶಾಸಕ ನಾಗೇಶ್ ಸಚಿವ ಸ್ಥಾನ ಪಡೆಯುವ ಸಾಧ್ಯತೆ ಇದೆ.

ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮಲುಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಅವರ ಅಭಿಮಾನಿಗಳು, ಕಾರ್ಯಕರ್ತರಿಂದ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆಯೂ ಹೈ ಕಮಾಂಡ್​ ಮುಂದೆ ಪ್ರಸ್ತಾಪ ಸಲ್ಲಿಸಲಾಗುವುದು. ಈ ಪ್ರಸ್ತಾವವನ್ನು ಹೈ ಕಮಾಂಡ್​ ನಿರಾಕರಿಸಿದರೆ ಡಿಸಿಎಂ ಬದಲು ಪ್ರಮುಖ ಸ್ಥಾನ ನೀಡುವ ಕುರಿತು ಚಿಂತನೆ ನಡೆದಿದೆ ಎನ್ನಲಾಗಿದೆ.

ಇದನ್ನು ಓದಿ: BJP Trust Vote: ವಿಶ್ವಾಸ ಮತ ಗೆದ್ದ ಸಿಎಂ ಬಿಎಸ್​ ಯಡಿಯೂರಪ್ಪ, ಸುಭದ್ರ ಆಡಳಿತ ನೀಡುವ ಭರವಸೆ

ಪಕ್ಷದಲ್ಲಿ ಮೂರು-ನಾಲ್ಕು ಬಾರಿ ಗೆದ್ದ ಅನೇಕ ಶಾಸಕರು ಕೂಡ ಈಗಾಗಲೇ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದು, ಈ ಬಗ್ಗೆ ಬಿಎಸ್​ ಯಡಿಯೂರಪ್ಪ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ. ಈ ಪಟ್ಟಿಯನ್ನು ನಂತರದ ದಿನಗಳಲ್ಲಿ ಹಿರಿತನದ ಆಧಾರದ ಮೇಲೆ ಅವಲೋಕಿಸಿ ನಿರ್ಧಾರಕ್ಕೆ ಬರಲಾಗುವುದು ಎಂಬ ಭರವಸೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ನೀಡಿದ್ದಾರೆ ಎನ್ನಲಾಗಿದೆ.

First published:July 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ