ದಾವೋಸ್ ಪ್ರವಾಸ ಫಲಪ್ರದ, ರಾಜ್ಯಕ್ಕೆ ಸಾವಿರಾರು ಕೋಟಿ ಹರಿದು ಬರುವ ನಿರೀಕ್ಷೆ; ಬಿಎಸ್​ವೈ ವಿಶ್ವಾಸ

ದಾವೋಸ್​ ಪ್ರವಾಸ ಫಲಪ್ರದವಾಗಿದೆ. ಹತ್ತಾರು ಅಂತಾರಾಷ್ಟ್ರೀಯ ಕಂಪೆನಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿವೆ. ರಾಜ್ಯಕ್ಕೆ ಸಾವಿರಾರು ಕೋಟಿ ಹಣ ಹರಿದುಬರಲಿದೆ. ಅಲ್ಲದೆ, ಈ ಎಲ್ಲಾ ಹೂಡಿಕೆಗಳೂ ರೈತರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದ್ದು, ಇದು ಸಾಧ್ಯವಾದರೆ ರೈತರು ಈ ಯೋಜನೆಗಳಿಂದ ಅತಿಹೆಚ್ಚು ಲಾಭ ಪಡೆಯಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ದಾವೋಸ್​ನಲ್ಲಿ ಆರ್ಥಿಕ ಶೃಂಗಸಭೆಯಲ್ಲಿ ಬಿ.ಎಸ್​. ಯಡಿಯೂರಪ್ಪ.

ದಾವೋಸ್​ನಲ್ಲಿ ಆರ್ಥಿಕ ಶೃಂಗಸಭೆಯಲ್ಲಿ ಬಿ.ಎಸ್​. ಯಡಿಯೂರಪ್ಪ.

  • Share this:
ಬೆಂಗಳೂರು (ಜನವರಿ 25); ದಾವೋಸ್​ ಪ್ರವಾಸ ಫಲಪ್ರದವಾಗಿದ್ದು, ವಿಶ್ವದ ಪ್ರತಿಷ್ಟಿತ ಸಂಸ್ಥೆಗಳು ರಾಜ್ಯದಲ್ಲಿ ಕೈಗಾರಿಕೆಗಳನ್ನು ನಿರ್ಮಿಸಲಿವೆ, ಈ ಮೂಲಕ ರಾಜ್ಯಕ್ಕೆ ಸಾವಿರಾರು ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆ ಇದ್ದು, ನಿರುದ್ಯೋಗ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಬಿ.ಎಸ್.​ ಯಡಿಯೂರಪ್ಪ ಸ್ವಿಜರ್​​ಲೆಂಡ್​ ದೇಶದ ದಾವೋಸ್​ನಲ್ಲಿ ನಡೆದ ಅಂತಾರಾಷ್ಟ್ರೀಯ ವಾರ್ಷಿಕ  ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿ ಇಂದು ರಾಜ್ಯಕ್ಕೆ ಮರಳಿದ್ದಾರೆ. ಈ ಶೃಂಗಸಭೆಯಲ್ಲಿ ರಾಜ್ಯಕ್ಕೆ ಬಂಡವಾಳ ಹೂಡುವಂತೆ ಹಲವಾರು ಅಂತಾರಾಷ್ಟ್ರೀಯ ಕಂಪೆನಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಈ ಕುರಿತು ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಯಡಿಯೂರಪ್ಪ,

"ದಾವೋಸ್​ ಪ್ರವಾಸ ಫಲಪ್ರದವಾಗಿದೆ. ಹತ್ತಾರು ಅಂತಾರಾಷ್ಟ್ರೀಯ ಕಂಪೆನಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿವೆ. ರಾಜ್ಯಕ್ಕೆ ಸಾವಿರಾರು ಕೋಟಿ ಹಣ ಹರಿದುಬರಲಿದೆ. ಅಲ್ಲದೆ, ಈ ಎಲ್ಲಾ ಹೂಡಿಕೆಗಳೂ ರೈತರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದ್ದು, ಇದು ಸಾಧ್ಯವಾದರೆ ರೈತರು ಈ ಯೋಜನೆಗಳಿಂದ ಅತಿಹೆಚ್ಚು ಲಾಭ ಪಡೆಯಲಿದ್ದಾರೆ" ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

"ಕರ್ನಾಟಕ ಇದೇ ಮೊದಲ ಬಾರಿಗೆ ದಾವೋಸ್​ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿದೆ. ಈ ಸಭೆಯಲ್ಲಿ ಸೈಬರ್​ ಸೆಕ್ಯೂರಿಟಿ ಸೇರಿದಂತೆ ಅನೇಕ ಒಪ್ಪಂದಗಳಿಗೆ ಸಹಿಹಾಕಲಾಗಿದೆ. ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭಕ್ಕೆ ವರ್ಲ್ಡ್ ಎಕನಾಮಿಕ್ ಫೋರಂ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 40 ಉದ್ಯಮಗಳ ಮುಖ್ಯಸ್ಥರ ಜೊತೆ ಭೇಟಿ ಮಾಡಿದ್ದೇನೆ. ಜಗತ್ತಿನ ಶ್ರೇಷ್ಠ ಉದ್ಯಮಗಳ ಮುಖ್ಯಸ್ಥರ ಜೊತೆ ಬಂಡವಾಳ ಹೂಡಿಕೆ ಕುರಿತಾಗಿ ಮಾತುಕತೆ ನಡೆಸಿದ್ದೇನೆ. ಕರ್ನಾಟಕದಲ್ಲೇ ಕೈಗಾರಿಕೆ ಸ್ಥಾಪಿಸುವ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ" ಎಂದು ತಿಳಿಸಿದ್ದಾರೆ.

"ಇದೇ ಸಂದರ್ಭದಲ್ಲಿ ಉದ್ಯಮಗಳ ಅಹವಾಲುಗಳನ್ನು ಕೇಳಿದ್ದೇನೆ. ಬಹಳ ಉದ್ಯಮಿಗಳು ಭೂಮಿಗೆ ಪಡೆಯುವುದಕ್ಕೆ ಇರುವ ಅಡಚಣೆ ಹೇಳಿದ್ದಾರೆ. ಹೀಗಾಗಿ ಭೂಮಿ ಕೊಡುವುದಕ್ಕೆ ಕೆಲ ಕಾನೂನುಗಳು ಸರಿಪಡಿಸಿ ನೂತನ ಕಾನೂನನ್ನು ಶೀಘ್ರದಲ್ಲಿ ಜಾರಿ ಮಾಡಲಾಗುವುದು. ಹೊಸ ಕಾನೂನು ಜಾರಿ ಮಾಡಿ ಭೂಮಿ ಕೊಡುವ ಬಗ್ಗೆ ಇರುವ ಅಡಚಣೆಯನ್ನು ಹೋಗಲಾಡಿಸುತ್ತೇವೆ ಎಂದು ಹೇಳಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಏರಸ್ಲೆಲ್ಲೋರ್ ಮಿತ್ತಲ್, ಡೊಮ್ಯಾಕ್, ದಾಲ್ಮಿಯಾ , ಸೆಸ್ಟ್ಲೆ ಯಂತ , ದೊಡ್ಡ ದೊಡ್ಡ ಕಂಪನಿಗಳು ಬಂಡವಾಳ ಹೂಡಲು ಒಪ್ಪಿವೆ. ಇದು ಸಾಧ್ಯವಾದರೆ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ" ಎಂದು ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ವಿದೇಶದಿಂದ ಮರಳಿದ ಸಿಎಂ ಬಿಎಸ್​ ಯಡಿಯೂರಪ್ಪ; ಕಮಲ ನಾಯಕರಿಂದ ಅದ್ಧೂರಿ ಸ್ವಾಗತ
First published: