ಬಿಬಿಎಂಪಿ ವಿಭಜನೆಗೆ ಮುಂದಾದ ಮುಖ್ಯಮಂತ್ರಿ ಯಡಿಯೂರಪ್ಪ: ನಾಲ್ವರು ವಿಶೇಷ ಆಯುಕ್ತರ ನೇಮಕ

ಸದ್ಯದಲ್ಲೇ ಸರ್ಕಾರ ನಾಲ್ವರು ಐಎಎಸ್ ಅಧಿಕಾರಿಗಳನ್ನು ಬಿಬಿಎಂಪಿಯ ವಿಶೇಷ ಆಯುಕ್ತರಾಗಿ ನೇಮಕ ಮಾಡಲಿದೆ. ಬಿಬಿಎಂಪಿಯಲ್ಲಿ 8 ವಲಯಗಳಿವೆ. 2 ವಲಯಕ್ಕೆ ಒಬ್ಬರು ವಿಶೇಷ ಆಯುಕ್ತರನ್ನು ನೇಮಿಸಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. 

news18
Updated:September 9, 2019, 12:37 PM IST
ಬಿಬಿಎಂಪಿ ವಿಭಜನೆಗೆ ಮುಂದಾದ ಮುಖ್ಯಮಂತ್ರಿ ಯಡಿಯೂರಪ್ಪ: ನಾಲ್ವರು ವಿಶೇಷ ಆಯುಕ್ತರ ನೇಮಕ
ಬಿ.ಎಸ್.ಯಡಿಯೂರಪ್ಪ
  • News18
  • Last Updated: September 9, 2019, 12:37 PM IST
  • Share this:
ಬೆಂಗಳೂರು(ಸೆ.09): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆಗೆ ಬಿಜೆಪಿ ಸರ್ಕಾರ ಮುಂದಾಗಿದೆ. ಈಗಾಗಲೇ ಸಿಎಂ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಇದಕ್ಕಾಗಿ ನಾಲ್ವರು ವಿಶೇಷ ಆಯುಕ್ತರ ನೇಮಕ ಮಾಡಲು ನಿರ್ಧರಿಸಲಾಗಿದೆ. ಬಿಬಿಎಂಪಿಯ 8 ವಲಯಗಳ ಪೈಕಿ 2 ವಲಯಕ್ಕೆ ಒಬ್ಬರು ವಿಶೇಷ ಆಯುಕ್ತರ ನೇಮಕವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದೆಯೇ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರವೂ ಬಿಬಿಎಂಪಿಯ 198 ವಾರ್ಡ್‌ಗಳ ವಿಭಜನೆ ಬಗ್ಗೆ ಚಿಂತಿಸಿತ್ತು. ಆಗಲೇ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ. ಎಸ್​ ಪಾಟೀಲ್ ನೇತೃತ್ವದ ಸಮಿತಿ ಪಾಲಿಕೆ ವಿಭಜನೆ ಕುರಿತು ವರದಿಯೂ ತಯಾರಿಸಿತ್ತು. ಅಂದಿನ ಸಿದ್ದರಾಮಯ್ಯನವರೇ ಯಾಕೋ ಬಿಬಿಎಂಪಿ ವಿಭಜನೆ ಬಗ್ಗೆ ನಿರ್ಣಯ ತೆಗೆದುಕೊಂಡಿರಲ್ಲಿ. ಬಳಿಕ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರವೂ ಈ ವಿಚಾರಕ್ಕೆ ಕೈ ಹಾಕಲಿಲ್ಲ.

ಸದ್ಯ ಸಿಎಂ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಿಬಿಎಂಪಿ ವಿಭನೆಗೆ ಮುಂದಾಗಿದೆ. ಹಿಂದಿನ ಸರ್ಕಾರಗಳು ಕೈಗೊಳ್ಳದ ನಿರ್ಣಯ ಈಗ ಬಿಎಸ್​ವೈ ಕೈಗೊಂಡಿದ್ದಾರೆ. ಅಲ್ಲದೇ 198 ವಾರ್ಡ್‌ಗಳ ಬಿಬಿಎಂಪಿ ವಿಭಜಿಸಿ ಸುಗಮ ಆಡಳಿತ ನಡೆಸಬೇಕೆಂದು ಸರ್ಕಾರದ ಚಿಂತನೆಯಾಗಿದೆ.

ಇದನ್ನೂ ಓದಿ: ತೆಲಂಗಾಣ ಸರ್ಕಾರದ ಸಂಪುಟ ವಿಸ್ತರಣೆ; ಸಿಎಂ ಕೆಸಿಆರ್​​ ಪುತ್ರ ಕೆಟಿಆರ್​​​, ಸೋದರಳಿಯ ಹರೀಶ್​​ ರಾವ್​​ಗೆ ಮಂತ್ರಿ ಸ್ಥಾನ

ಸದ್ಯದಲ್ಲೇ ಸರ್ಕಾರ ನಾಲ್ವರು ಐಎಎಸ್ ಅಧಿಕಾರಿಗಳನ್ನು ಬಿಬಿಎಂಪಿಯ ವಿಶೇಷ ಆಯುಕ್ತರಾಗಿ ನೇಮಕ ಮಾಡಲಿದೆ. ಬಿಬಿಎಂಪಿಯಲ್ಲಿ 8 ವಲಯಗಳಿವೆ. 2 ವಲಯಕ್ಕೆ ಒಬ್ಬರು ವಿಶೇಷ ಆಯುಕ್ತರನ್ನು ನೇಮಿಸಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಹಾಗೆಯೇ ಜನರ ಸಮಸ್ಯೆ ನಿವಾರಿಸಲು ಸಹಾಯವಾಣಿ ಆರಂಭಿಸಲಾಗುವುದು. ಬೆಂಗಳೂರಿನ ಸ್ವಚ್ಛತೆ ಕಾಪಾಡಲು ಮತ್ತಷ್ಟು ಪೌರ ಕಾರ್ಮಿಕರನ್ನು ನೇಮಿಸಲಿದ್ದೇವೆ. ರಸ್ತೆಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡುತ್ತೇನೆ ಎಂದು ಬಿ.ಎಸ್​​ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ-----------------
First published: September 9, 2019, 8:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading