2 ದಿನಗಳ ಸರಳ ಹಂಪಿ ಉತ್ಸವಕ್ಕೆ ಸಿಎಂ ಬಿಎಸ್​ವೈ ಸೂಚನೆ ; ಸಚಿವ ಶ್ರೀರಾಮುಲು

ಉಪಮುಖ್ಯಮಂತ್ರಿ ವಿಚಾರದಲ್ಲಿ ನನಗೆ ಸ್ಪಷ್ಟತೆ ಇಲ್ಲ.  ಸರ್ಕಾರದಲ್ಲಿ ನನಗೆ ಕೊಟ್ಟಿರುವ ಕೆಲಸ ಮಾಡುತ್ತಿರುವೆ. ಶಾಸಕರು ಈ ರೀತಿ ಮಾತನಾಡಬಾರದು. ಯಾರೂ ಸಹ ಈ ರೀತಿ ಹೇಳಿಕೆ ನೀಡಿ ಪಕ್ಷ  ಮುಜುಗರಕ್ಕೀಡಾಗುವಂತೆ ಮಾಡಬಾರದು- ಶ್ರೀರಾಮುಲು

Latha CG | news18-kannada
Updated:October 16, 2019, 12:32 PM IST
2 ದಿನಗಳ ಸರಳ ಹಂಪಿ ಉತ್ಸವಕ್ಕೆ ಸಿಎಂ ಬಿಎಸ್​ವೈ ಸೂಚನೆ ; ಸಚಿವ ಶ್ರೀರಾಮುಲು
ಶ್ರೀರಾಮುಲು
  • Share this:
ಬಳ್ಳಾರಿ(ಅ.16): ಸಚಿವ ಸಂಪುಟದಲ್ಲಿ ಹಂಪಿ ಉತ್ಸವ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ.  ರಾಜ್ಯದಲ್ಲಿ ಅತಿವೃಷ್ಠಿ ಇರುವ ಕಾರಣ ಸರಳವಾಗಿ ಆಚರಿಸಲು ಸಿಎಂ ಸೂಚಿಸಿದ್ದಾರೆ. ಎರಡು ದಿನ ಹಂಪಿ ಉತ್ಸವ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹಂಪಿ ಉತ್ಸವ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಇದೇ ವೇಳೆ ರೈತರ ಸಾಲಮನ್ನಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು." ನೇಕಾರರು ಹಾಗೂ ರೈತರ ಸಾಲಮನ್ನಾ ವಿಚಾರದಲ್ಲಿ ಸಾಕಷ್ಟು ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪನವರ ಬಳಿ ಚರ್ಚೆ ಮಾಡಿ, ಈ ವಿಚಾರವನ್ನು ಅವರ ಗಮನಕ್ಕೆ ತರಲಾಗುವುದು. ಸಾಲಮನ್ನಾ ವಿಚಾರದಲ್ಲಿ ನಮಗೂ ಗೊಂದಲ ಇದೆ. ಈ ಹಿಂದೆ ಸಿಎಂ ಆಗಿದ್ದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರಿಗೂ ರೈತರ ಸಾಲಮನ್ನಾದ ಬಗ್ಗೆ ಸ್ಪಷ್ಟತೆ ಇರಲಿಲ್ಲ," ಎಂದರು.

ಇಡಿ ವಿಚಾರಣೆಗೆ ಹಾಜರಾಗಿರುವ ಕೆ.ಎನ್.ರಾಜಣ್ಣ; ತಪ್ಪಿದ್ದರೆ ಕ್ರಮ ಕೈಗೊಳ್ಳಲಿ ಎಂದ ಮಾಜಿ ಕಾಂಗ್ರೆಸ್​ ಶಾಸಕ

ವಿಜಯನಗರ ಕ್ಷೇತ್ರದಲ್ಲಿ ಗವಿಯಪ್ಪ ಬಂಡಾಯವೆದ್ದರೆ, ಅವರ ಮನವೊಲಿಸುವುದಾಗಿ ಶ್ರೀರಾಮುಲು ಹೇಳಿದರು. "ಗವಿಯಪ್ಪ ನಮ್ಮ ಮುಖಂಡ. ನಾನು ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ನಮ್ಮ ಸರ್ಕಾರ ಇರುವುದು ಮುಖ್ಯ. ಗವಿಯಪ್ಪ ಅವರು ನನ್ನ ಆತ್ಮೀಯ ಸ್ನೇಹಿತರಿದ್ದಾರೆ. ಅವರಿಗೆ ಕೊಟ್ಟ ಸ್ಥಾನಮಾನ ಸ್ವೀಕಾರ ಮಾಡಬೇಕು.  ವಿಜಯನಗರ ಕ್ಷೇತ್ರದಲ್ಲಿ ನಮಗೆ ಗೆಲುವು ಮುಖ್ಯ," ಎಂದು ಹೇಳಿದರು.

ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡಬೇಕೆಂದು ಶಾಸಕ ಸೋಮಶೇಖರ್ ರೆಡ್ಡಿ ಒತ್ತಾಯಿಸಿದ್ದರು. ಈಗ ಉಪಮುಖ್ಯಮಂತ್ರಿ ಮಾಡದಿರುವುದಕ್ಕೆ ಮನಸ್ಸಿಗೆ ನೋವಾಗಿದೆ.  ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಾದ ಶ್ರೀರಾಮುಲು ಅವರನ್ನು ಡಿಸಿಎಂ ಮಾಡಿ ಬಳ್ಳಾರಿ ಜಿಲ್ಲೆ ಉಸ್ತುವಾರಿ ಮಾಡಬೇಕೆಂದು ಸೋಮಶೇಖರ್ ರೆಡ್ಡಿ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, "ಉಪಮುಖ್ಯಮಂತ್ರಿ ವಿಚಾರದಲ್ಲಿ ನನಗೆ ಸ್ಪಷ್ಟತೆ ಇಲ್ಲ.  ಸರ್ಕಾರದಲ್ಲಿ ನನಗೆ ಕೊಟ್ಟಿರುವ ಕೆಲಸ ಮಾಡುತ್ತಿರುವೆ. ಶಾಸಕರು ಈ ರೀತಿ ಮಾತನಾಡಬಾರದು. ಯಾರೂ ಸಹ ಈ ರೀತಿ ಹೇಳಿಕೆ ನೀಡಿ ಪಕ್ಷ  ಮುಜುಗರಕ್ಕೀಡಾಗುವಂತೆ ಮಾಡಬಾರದು. ಸೋಮಶೇಖರ ರೆಡ್ಡಿ  ಬಳಿ ನಾನು ಮಾತನಾಡುತ್ತೇನೆ. ಆ ರೀತಿ ಹೇಳಿಕೆ ಯಾವ ಶಾಸಕರು ನೀಡುತ್ತಾರೋ ಅವರ ಬಳಿ ಮಾತನಾಡುವೆ," ಎಂದರು.

ವಿಶ್ವನಾಥ್​ ಆರೋಪಕ್ಕೆ ಬೇಸತ್ತು ಸೆ.18ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ; ಸಾ.ರಾ.ಮಹೇಶ್​ ಹೊಸ ಬಾಂಬ್

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading