ರಮೇಶ್​​​ ಜಾರಕಿಹೊಳಿ ಇಲ್ಲದಿದ್ರೆ ನಾನು ಸಿಎಂ ಆಗುತ್ತಿರಲಿಲ್ಲ; ಹಾಗಾಗಿ ವೋಟ್​ ಹಾಕಿ ಗೆಲ್ಲಿಸಿ; ಬಿಎಸ್​ವೈ

ಕಾಂಗ್ರೆಸ್​-ಜೆಡಿಎಸ್​​ನವ್ರು​ ಪರಸ್ಪರ ಕಚ್ಚಾಡಿಕೊಂಡರು. ಈ ಹದಿನೈದು ಜನ ಶಾಸಕರು ಬೇಸತ್ತು ಹೊರಗೆ ಬರದಿದ್ದರೆ, ನಾನು ಸಿಎಂ ಆಗುತ್ತಿರಲಿಲ್ಲ. ಇನ್ನುಳಿದ ಮೂರುವರೆ ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತೇನೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡುತ್ತೇವೆ ಎಂದು ಸಿಎಂ ತಿಳಿಸಿದರು.

news18-kannada
Updated:December 1, 2019, 5:09 PM IST
ರಮೇಶ್​​​ ಜಾರಕಿಹೊಳಿ ಇಲ್ಲದಿದ್ರೆ ನಾನು ಸಿಎಂ ಆಗುತ್ತಿರಲಿಲ್ಲ; ಹಾಗಾಗಿ ವೋಟ್​ ಹಾಕಿ ಗೆಲ್ಲಿಸಿ; ಬಿಎಸ್​ವೈ
ರಮೇಶ್​ ಜಾರಕಿಹೊಳಿ- ಬಿಎಸ್​ ಯಡಿಯೂರಪ್ಪ
  • Share this:
ಬೆಳಗಾವಿ(ಡಿ.01): ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಇಲ್ಲದಿದ್ದರೆ, ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಹೇಳಿದ್ದಾರೆ. ಇಂದು ಗೋಕಾಕ್ ​ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಲಖನ್ ಜಾರಕಿಹೊಳಿ ಎದರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಮೇಶ್​​​ ಜಾರಕಿಹೊಳಿ ಪರ ಸಿಎಂ ಬಿ.ಎಸ್​​ ಯಡಿಯೂರಪ್ಪ ಪ್ರಚಾರ ಮಾಡಿದರು. ಈ ವೇಳೆ ನೀವು ಬಿಜೆಪಿ ಮತ ನೀಡಿ ರಮೇಶ್​​ ಜಾರಕಿಹೊಳಿ ಗೆಲ್ಲಿಸಿ ಎಂದು ಕರೆ ನೀಡಿದರು.

ಗೋಕಾಕ್​​ನ ಅಂಕಲಗಿಯಲ್ಲಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಪ್ರಚಾರ ಮಾಡಿದರು. ಇಲ್ಲಿನ ಪ್ರಚಾರದಲ್ಲಿ ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಸಿಎಂ, ರಮೇಶ್​​ ಜಾರಕಿಹೊಳಿಗೆ ಭಾವಿ ಸಚಿವ ಎನ್ನುವುದರ ಮೂಲಕ ಭಾಷಣ ಆರಂಭ ಮಾಡಿದರು. ರಮೇಶ್​​ 16 ಶಾಸಕರನ್ನು ಕಟ್ಟಿಕೊಂಡು ಗಟ್ಟಿಯಾಗಿ ನಿಲ್ಲದೇ ಹೋಗಿದ್ದರೆ, ನಾವು ಅಧಿಕಾರಕ್ಕೆ ಬರುತ್ತಿರಲಿಲ್ಲ. ನಾನಂತೂ ಸಿಎಂ ಆಗುತ್ತಿರಲಿಲ್ಲ ಎಂದರು.

ರಮೇಶ್​​ ಜಾರಕಿಹೊಳಿ ಪ್ರಯತ್ನದಿಂದ ರಾಜ್ಯದಲ್ಲಿ ಉತ್ತರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ನೀಡುವ ಪ್ರತಿಯೊಂದು ಮತವೂ ನನಗೆ ನೀಡುವ ಮತದಂತೆ. ಗೋಕಾಕ್​​ ಸೇರಿದಂತೆ ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸ ಹೊಂದಿದೆ. ಕೆಲವರು ನಾನೇ ಮುಂದಿನ ಸಿಎಂ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಏಕಾಂಗಿ, ಯಾವುದೇ ಕಾಂಗ್ರೆಸ್​​ ನಾಯಕರು ಬೆನ್ನಿಗೆ ನಿಂತಿಲ್ಲ. ಅವರ ಮುಖ ನೋಡಲು ಯಾವ ಕಾಂಗ್ರೆಸ್​ ನಾಯಕರು ಸಿದ್ದರಿಲ್ಲ ಎಂದು ಕುಟಕಿದರು.

ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಜರಾಸಂಧರಂತೆ; ಮತದಾರರೇ ಕೃಷ್ಣರಾಗಿ ರುಂಡ ಮುಂಡ ಬೇರ್ಪಡಿಸಬೇಕು: ವಿ. ಶ್ರೀನಿವಾಸ ಪ್ರಸಾದ್

ಕಾಂಗ್ರೆಸ್​-ಜೆಡಿಎಸ್​​ನವ್ರು​ ಪರಸ್ಪರ ಕಚ್ಚಾಡಿಕೊಂಡರು. ಈ ಹದಿನೈದು ಜನ ಶಾಸಕರು ಬೇಸತ್ತು ಹೊರಗೆ ಬರದಿದ್ದರೆ, ನಾನು ಸಿಎಂ ಆಗುತ್ತಿರಲಿಲ್ಲ. ಇನ್ನುಳಿದ ಮೂರುವರೆ ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತೇನೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡುತ್ತೇವೆ ಎಂದು ತಿಳಿಸಿದರು.

ಯಾರು ಮರೆಯದೆ ಮತಕೇಂದ್ರಕ್ಕೆ ಹೋಗಿ ಬಿಜೆಪಿಗೆ ಮತ ನೀಡಿ. ಆರ್​​. ಶಂಕರ್​​ ಕೂಡ ನನ್ನ ಸಂಪುಟದಲ್ಲಿ ಸಚಿವರೇ. ಹಾಗಯೇ ರಮೇಶ್​​ ಜಾರಕಿಹೊಳಿ ಕೂಡ ನನ್ನ ಸಂಪುಟದಲ್ಲಿ ಮುಂದಿನ ಸಚಿವರು. ಇಂತಹ ಪ್ರಬಲ ನಾಯಕ ಚುನಾವಣೆಯಲ್ಲಿ ಗೆಲ್ಲಬೇಕು. ರಾಜ್ಯದಲ್ಲೇ ಅತ್ಯಂತ ಬಹುಮತದಿಂದ ರಮೇಶ್​​ ಜಾರಕಿಹೊಳಿ ಗೆಲ್ಲಬೇಕು ಎಂದು ಪುನರುಚ್ಚರಿಸಿದರು.

ಇದನ್ನೂ ಓದಿ: ಡಿ. 9ರ ನಂತರ ಕಾಂಗ್ರೆಸ್-ಜೆಡಿಎಸ್ ಸರ್ಕಾರ: ಸುಳಿವು ಬಿಚ್ಚಿಟ್ಟ ಜಿ. ಪರಮೇಶ್ವರ್ಬೆಳಗಾವಿಯ ಗೋಕಾಕ್​​ನಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್​​ ಜಾರಕಿಹೊಳಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಕಾಂಗ್ರೆಸ್​ನಿಂದ ಲಖನ್​​ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಬೀಳಿಸಲು ಕಾರಣವಾದ ಅನರ್ಹ ಶಾಸಕರಲ್ಲಿ ಬಹುತೇಕರು ಉಪಚುನಾವಣಾ ಕಣದಲ್ಲಿದ್ದಾರೆ. ಅನರ್ಹರನ್ನು ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ. ಶಾಸಕರು ರೆಬೆಲ್​ ಆಗಲು ಮೂಲ ಕಾರಣ ಎಂದು ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದಾರೆ.
First published: December 1, 2019, 4:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading