ನಟಿ ಶೃತಿಗೆ ಶಾಕ್​ ನೀಡಿದ ಸಿಎಂ; ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಸ್ಥಾನವನ್ನು ಆಪ್ತನಿಗೆ ನೀಡಿದ ಬಿಎಸ್ವೈ

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮನದ ಅಧ್ಯಕ್ಷ ಪಟ್ಟವನ್ನು ಕಿತ್ತುಕೊಂಡು ತಮ್ಮ ಆಪ್ತನಿಗೆ ನೀಡಿ, ಆದೇಶ ಹೊರಡಿಸಿದ್ದಾರೆ

 • Share this:
  ನಟಿ, ಬಿಜೆಪಿ ನಾಯಕಿ ಶೃತಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಬಿಗ್​ ಶಾಕ್​ ನೀಡಿದ್ದಾರೆ. ಅವರಿಗೆ ನೀಡಲಾಗಿದ್ದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮನದ ಅಧ್ಯಕ್ಷ ಪಟ್ಟವನ್ನು ಕಿತ್ತುಕೊಂಡು ತಮ್ಮ ಆಪ್ತನಿಗೆ ನೀಡಿ, ಆದೇಶ ಹೊರಡಿಸಿದ್ದಾರೆ. ಈ ಬದಲಾವಣೆ ನಡೆದು ಎರಡು ದಿನ ಆಗಿದ್ದರೂ ಈ ಬಗ್ಗೆ ನಟಿಗೆ ಮಾಹಿತಿ ಇಲ್ಲ ಎನ್ನಲಾಗಿದೆ, ಶನಿವಾರ ಬೆಳವಣಿಗೆ ಈ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಈ ಅಧ್ಯಕ್ಷ ಸ್ಥಾನಕ್ಕೆ ಕಾಪು ಸಿದ್ದಲಿಂಗ ಸ್ವಾಮಿ ಅವರನ್ನು ನೇಮಿಸಿ ಬಿಎಸ್​ ಯಡಿಯೂರಪ್ಪ ಸರ್ಕಾರ ಆದೇಶ ಹೊರಡಿಸಿದ್ದಾರೆ.

  ಕಾಪು ಸಿದ್ದಲಿಂಗಯ್ಯ ಅವರು ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದು. ಅಲ್ಲದೇ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸು ಸ್ಪರ್ಧಿಸಿದ್ದರು. ಅವರಿಗೆ ದಿಢೀರ್​ ಎಂದು ಈ ಹುದ್ದೆಯನ್ನು ಸಿಎಂ ನೀಡಿರುವುದು ಅಚ್ಚರಿ ಮೂಡಿಸಿದೆ.

  ಈ ಹಿಂದೆ ನಟಿ ಶೃತಿ ಗೆ ಈ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದ ಸಿಎಂ ಇದೀಗ ಈ ನೇಮಕಾತಿ ವಾಪಸ್ಸು ಪಡೆದು, ಆ ಜಾಗಕ್ಕೆ ತನ್ನ ಆಪ್ತನನ್ನು ನೇಮಿಸಿದ್ದಾರೆ. ಅವರನ್ನು ಯಾವ ಕಾರಣಕ್ಕೆ ಸ್ಥಾನದಿಂದ ತೆಗೆಯಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
  Published by:Seema R
  First published: