ಕರ್ನಾಟಕ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪರ ನ.23ರಿಂದ ಸಿಎಂ ಬಿಎಸ್​​ವೈ ಮತ್ತು ಕಟೀಲ್​​ ಪ್ರಚಾರ

ಸಿಎಂ ಬಿ.ಎಸ್​​ ಯಡಿಯೂರಪ್ಪ ಗೆಲ್ಲುತ್ತಾರೆ ಎಂಬ ನಂಬಿಕೆ ಮೇಲೆ ಅನರ್ಹ ಶಾಸಕರಿಗೆ ಬಂಡಾಯದ ನಡುವೆಯೂ ಬಿಜೆಪಿ ಟಿಕೆಟ್ ನೀಡಿದ್ಧಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಅನರ್ಹ ಶಾಸಕರು ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದಾರೆ. ಈ ಅನರ್ಹ ಶಾಸಕರ ಗೆಲುವಿನ ಮೇಲೆ ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿಂತಿದೆ.

news18-kannada
Updated:November 21, 2019, 11:57 AM IST
ಕರ್ನಾಟಕ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪರ ನ.23ರಿಂದ ಸಿಎಂ ಬಿಎಸ್​​ವೈ ಮತ್ತು ಕಟೀಲ್​​ ಪ್ರಚಾರ
ಬಿಎಸ್​ ಯಡಿಯೂರಪ್ಪ- ನಳಿನ್​ ಕುಮಾರ್​ ಕಟೀಲ್​
  • Share this:
ಬೆಂಗಳೂರು(ನ.21): ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ರಾಜ್ಯದ 15 ಕ್ಷೇತ್ರಗಳಲ್ಲಿ ಕಣದಲ್ಲಿರುವ ಕಾಂಗ್ರೆಸ್​​-ಬಿಜೆಪಿ ಮತ್ತು ಜೆಡಿಎಸ್​​ ಅಭ್ಯರ್ಥಿಗಳು ಮತಬೇಟೆ ಪ್ರಾರಂಭಿಸಿದ್ದಾರೆ. ಇತ್ತ ಸಿದ್ದರಾಮಯ್ಯ ಕಾಂಗ್ರೆಸ್​​ ಅಭ್ಯರ್ಥಿಗಳ ಪರ ಮತಯಾಚಿಸಿದರೆ, ಅತ್ತ ಎಚ್​​.ಡಿ ಕುಮಾರಸ್ವಾಮಿ ಜೆಡಿಎಸ್​​ ಅಭ್ಯರ್ಥಿಗಳ ಮತಬೇಟೆಗೆ ಮುಂದಾಗಿದ್ದಾರೆ. ಈ ಮಧ್ಯೆ 15 ಕ್ಷೇತ್ರಗಳನ್ನು ಗೆದ್ದು ತಮ್ಮ ಅಧಿಕಾರ ಉಳಿಸಿಕೊಳ್ಳಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​​ ಕಟೀಲ್​​​​ ನ.23ರಿಂದಲೇ ಪ್ರಚಾರ ಆರಂಭಿಸಲಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ಭಾರತೀಯ ಜನತಾ ಪಕ್ಷವೂ ಕರ್ನಾಟಕ ವಿಧಾನಸಭಾ ಉಪಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಪರಗಣಿಸಿದೆ. ಹಾಗಾಗಿಯೇ 15 ಕ್ಷೇತ್ರಗಳಲ್ಲೂ ಹೇಗೆ ಗೆಲ್ಲಬೇಕೆಂದು ಸಿಎಂ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆಯಷ್ಟೇ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಚುನಾವಣಾ ಸಿದ್ಧತೆ ಕುರಿತು ಚರ್ಚೆ ನಡೆಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​​ ಕಟೀಲ್​​​ ನವೆಂಬರ್​​ 23ಕ್ಕೆ ಪ್ರಚಾರ ಕಾರ್ಯಕ್ಕಿಳಿಯಲಿದ್ಧಾರೆ. ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯೂ ನಮಗೆ ಅಳಿವು-ಉಳಿವಿನ ಪ್ರಶ್ನೆ. ಹೀಗಾಗಿ 15 ವಿಧಾನಸಭಾ ಕ್ಷೇತ್ರಗಳಲ್ಲೂ ನಾವೇ ಪ್ರಚಾರ ಮಾಡಬೇಕೆಂದು ಬಿ.ಎಸ್​ ಯಡಿಯೂರಪ್ಪ ಬಿಜೆಪಿ ಹರಿಯ ನಾಯಕರಿಗೆ ತಿಳಿಸಿದ್ಧಾರೆ.

ಇದನ್ನೂ ಓದಿ: ಡಿವೈಎಸ್​​ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಕೆ.ಜೆ ಜಾರ್ಜ್​​ಗೆ ಕ್ಲೀನ್​​ಚಿಟ್​​

ಕೇಂದ್ರ ಚುನಾವಣೆ ಆಯೋಗವು ಉಪಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಮುಂಬರುವ ಡಿ.​5ರಂದು ನಡೆಯಲಿರುವ ಈ ಉಪಚುನಾವಣೆ ಗೆಲ್ಲಲು ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್​​-ಜೆಡಿಎಸ್ ಕೂಡ ಭಾರೀ ಸರ್ಕಸ್​​ ನಡೆಸುತ್ತಿವೆ. ಇತ್ತ ಕಾಂಗ್ರೆಸ್​​ ಜೆಡಿಎಸ್​​ ಜೊತೆಗಿನ ಮೈತ್ರಿ ತೊರೆದು ಏಕಾಂಗಿ ಹೋರಾಟಕ್ಕೆ ಸಜ್ಜಾಗಿದೆ. ಅತ್ತ ಜೆಡಿಎಸ್​​ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿದೆ. ಈ ನಡುವೆ ಹೇಗಾದರೂ ಸರಿ ಉಪಚುನಾವಣೆ ಗೆದ್ದು ರಾಜ್ಯಾಧಿಕಾರ ಉಳಿಸಿಕೊಳ್ಳಬೇಕೆಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಜಿದ್ದಿಗೆ ಬಿದ್ದಿದೆ.

ಸಿಎಂ ಬಿ.ಎಸ್​​ ಯಡಿಯೂರಪ್ಪ ಅನರ್ಹ ಶಾಸಕರು ಗೆಲ್ಲುತ್ತಾರೆ ಎಂಬ ನಂಬಿಕೆ ಮೇಲೆ ಬಂಡಾಯದ ನಡುವೆಯೂ ಬಿಜೆಪಿ ಟಿಕೆಟ್ ನೀಡಿದ್ಧಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಅನರ್ಹ ಶಾಸಕರು ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದಾರೆ. ಈ ಅನರ್ಹ ಶಾಸಕರ ಗೆಲುವಿನ ಮೇಲೆ ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿಂತಿದೆ.

ಇದನ್ನೂ ಓದಿ: ‘ಎಂಟಿಬಿ ನಾಗರಾಜ್​​​​ ಚುನಾವಣೆ ಗೆಲ್ಲಲು ಹಣದ ಹೊಳೆಯನ್ನೇ ಹರಿಸಲು ಮುಂದಾಗಿದ್ದಾರೆ‘: ಶರತ್​​ ಬಚ್ಚೇಗೌಡ-------------
First published: November 21, 2019, 11:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading