ಇನ್ಮುಂದೆ ಪ್ರತಿ ಗುರುವಾರ ಶಾಸಕರ ಅಹವಾಲು ಆಲಿಸಲಿದ್ದಾರೆ ಮುಖ್ಯಮಂತ್ರಿಗಳು; ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ

ಚುನಾವಣೆ ಎದುರಾಗುತ್ತಿರುವ ಹಿನ್ನಲೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕರನ್ನು ವಿಶ್ವಾಸಮತಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ.

ಶಾಸಕಾಂಗ ಪಕ್ಷದ ಸಭೆ

ಶಾಸಕಾಂಗ ಪಕ್ಷದ ಸಭೆ

 • Share this:
  ಬೆಂಗಳೂರು (ಸೆ. 13): ಇಂದಿನಿಂದ ವಿಧಾನ ಮಂಡಳ ಅಧಿವೇಶ ಆರಂಭವಾಗಿದ್ದು, ಸದನದಲ್ಲಿ ವಿಪಕ್ಷಗಳಿಗೆ ಹೇಗೆ ಉತ್ತರ ನೀಡುವುದು ಎಂಬುದನ್ನು ಸೇರಿದಂತೆ ಪಕ್ಷದ ಹಲವು ಬೆಳವಣಿಗೆಗಳ ಕುರಿತು ಇಂದು ಬಿಜೆಪಿ ಪಕ್ಷದ ಶಾಸಕಾಂಗ ಸಭೆ ನಡೆಸಲಾಯಿತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಮೇಲೆ ನಡೆದ ಮೊದಲ ಶಾಸಕಾಂಗ ಸಭೆ ಇದಾಗಿದ್ದು, ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಇನ್ನು ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಅಧಿವೇಶನದಲ್ಲಿ ಹೇಗೆ ನಿಭಾಯಿಸಬೇಕು ಅಂತ ಚರ್ಚೆ ಆಗಿದೆ. ಶಾಸನ ಸಭೆಯಲ್ಲಿ ಬರಬಹುದಾದ ವಿಧೇಕಗಳ ಬಗ್ಗೆ ಅನುಮಾನಗಳನ್ನು ಬಗೆಹರಿಸಿಕೊಳ್ಳಲಾಗಿದೆ. ಶಾಸನ ಸಭೆಗಳಲ್ಲಿ ಎಲ್ಲರೂ ಭಾಗವಹಿಸಲು ಸೂಚಿಸಲಾಗಿದೆ ಎಂದರು.

  ಚುನಾವಣೆ ಎದುರಾಗುತ್ತಿರುವ ಹಿನ್ನಲೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕರನ್ನು ವಿಶ್ವಾಸಮತಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಈ ಹಿಂದೆ ಕ್ಷೇತ್ರದ ಅನುದಾನ ವಿಚಾರ ಸೇರಿದಂತೆ ಮುಖ್ಯಮಂತ್ರಿಗಳ ಭೇಟಿಗೆ ಸಿಗದಿರುವ ಕುರಿತು ಶಾಸಕರು ಅಸಮಾಧಾನ ವ್ಯಕ್ತವಾಗಿತು. ಈ  ಹಿನ್ನಲೆ ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶಾಸಕರ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

  ಈ ಸಂಬಂಧ ತಿಳಿಸಿದ ಕಾನೂನು ಸಚಿವರು, ಇನ್ಮುಂದೆ ಅಧಿವೇಶನ ವೇಳೆ ಪ್ರತೀ ಮಂಗಳವಾರ ಪಕ್ಷದ ಶಾಸಕಾಂಗ ಸಭೆ ಕರೆಯಲು ನಿರ್ಧಾರ ಮಾಡಲಾಗಿದೆ. ಬೆಳಗ್ಗೆ 9.30 ರಿಂದ 11 ರೊಳಗೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುವುದು. ಮುಂದಿನ ಮಂಗಳವಾರದಿಂದ ಸಭೆ ನಡೆಯಲಿದೆ.

  ಶಾಸಕರಿಗೆ ಸಿಎಂ ಸಮಯ ನಿಗದಿ
  ಮುಖ್ಯಮಂತ್ರಿಗಳ ಭೇಟಿಗೆ ಶಾಸಕರಿಗೆ ಸಮಯದ ಸಿಗದ ಹಿನ್ನಲೆ ಇನ್ಮುಂದೆ ಪ್ರತಿ ಗುರುವಾರ ಶಾಸಕರಿಗಾಗಿ ಸಿಎಂ ಸಮಯ ನಿಗದಿ ಮಾಡಲಾಗಿದೆ. ಆ ದಿನ ಅವರು ಶಾಸಕರ ಅಹವಾಲು ಕೇಳಲಿದ್ದಾರೆ. ಶಾಸಕರು ಕೂಡ ಇನ್ಮುಂದೆ ಪ್ರತಿ ಗುರುವಾರ ಸಿಎಂ ಭೇಟಿ ಮಾಡಿ ಮನವಿ, ಅಹವಾಲು ಕೊಡಬಹುದು ಎಂದು ತಿಳಿಸಿದರು.

  ಇನ್ನು ನಿಯಮಿತವಾಗಿ ಶಾಸಕಾಂಗ ಸಭೆ ಕರೆಯಲಿ ನಿರ್ಧಾರಿಸಲಾಗಿದೆ. ಈ ಮೂಲಕ ಸಿಎಂ ಶಾಸಕರಿಗೆ ಸಿಗುತ್ತಿಲ್ಲ ಎಂಬ ಕೊರಗು ಹೋಗಲಿದೆ. ಸಿಎಂ ಮತ್ತು ಸಚಿವರು ಶಾಸಕರಿಗೆ ಸಿಗಬೇಕು ಎನ್ನುವ ಕುರಿತು ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.
  ಪಕ್ಷದಲ್ಲಿ ಆಂತರಿಕ ಸಮಸ್ಯೆ ಇದ್ದರೆ ಅದನ್ನು ಶಾಸಕಾಂಗ ಪಕ್ಷದ ಸಭೆಯಲ್ಲೇ ಚರ್ಚಿಸಲು ನಿರ್ಧಾರ ಮಾಡಲಾಗಿದ್ದು, ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಲು ಸೂಚಿಸಲಾಗಿದೆ. ಈ ವೇಳೆ ಶಾಸಕರ ಅನುದಾನ ಸಮಸ್ಯೆ ಬಗ್ಗೆ ಕೂಡ ಚರ್ಚೆ ನಡೆಸಬಹುದು. ಸಭೆಯಲ್ಲಿ ಶಾಸಕರು ಕ್ಷೇತ್ರದ ಕುರಿತ ಯಾವುದೇ ವಿಚಾರವನ್ನು ಸಿಎಂ ಅವರೊಂದಿಗೆ ಮಾತನಾಡಬಹುದಾಗಿದೆ.

  ಇದನ್ನು ಓದಿ: ಕಾಂಗ್ರೆಸ್​ ಹಿರಿಯ ನಾಯಕ ಆಸ್ಕರ್​ ಫರ್ನಾಂಡಿಸ್​ ಇನ್ನಿಲ್ಲ

  ಅನೇಕ ವಿಚಾರಗಳ ಕುರಿತು ಚರ್ಚೆ
  ಇನ್ನು ಸದನದಲ್ಲಿ ಈ ಬಾರಿ ಆನ್ ಲೈನ್ ಗ್ಯಾಂಬ್ಲಿಂಗ್ ತಡೆಗೆ ಮಸೂಚೆ ಮಂಡನೆಗೆ ಹೆಚ್ಚು ಒತ್ತು ನೀಡಲಾಗುವುದು. ಜಿ.ಪಂ, ತಾ.ಪಂ ಕಾಯ್ದೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಆಯೋಗ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದದು, ಈ ಆಯೋಗವೇ ಮೀಸಲಾತಿ ಹಂಚಿಕೆಯೂ ಮಾಡಲಿದೆ. ನಿವೃತ್ತ ಸರ್ಕಾರದ ಮುಖ್ಯ ಕಾರ್ಯದರ್ಶಿ ಒಬ್ಬರನ್ನು ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲು ಚಿಂತನೆ ನಡೆಸಲಾಗಿದೆ. ಇನ್ನು ಜೈಲುಗಳ ಸುಧಾರಣೆ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

  ಇದರ ಜೊತೆಗೆ ಒಂದೇ ಯೋಜನಾ ಸಮಿತಿ ಮಾಡಲು ಚರ್ಚೆ ಮಾಡಲಾಗಿದೆ. ಈ ಒಂದೇ ಇಲಾಖೆಯಡಿ ನಗರದ ಯೋಜನೆಗಳನ್ನು ತರುವ ಬಗ್ಗೆ ವಿಧೇಯಕ ತರುವ ಕುರಿತು ಚರ್ಚೆ ನಡೆಸಲಾಯಿತು. ಜೊತೆಗೆ ಶಿಕ್ಷಕರ ವರ್ಗಾವಣೆ ಸಂಬಂಧ ತಿದ್ದುಪಡಿ ವಿಧೇಯಕ ಬಗ್ಗೆಯೂ ಪ್ರಸ್ತಾಪ ಮಾಡಲಾಯಿತು.
  Published by:Seema R
  First published: