• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bajrang Dal: ಬಜರಂಗದಳ ನಿಷೇಧಿಸ್ತೇವೆ ಎಂದ ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಆಕ್ರೋಶ, ತಾಕತ್ತಿದ್ದರೆ ಬ್ಯಾನ್ ಮಾಡುವಂತೆ ಸಚಿವೆ ಶೋಭಾ ಸವಾಲು

Bajrang Dal: ಬಜರಂಗದಳ ನಿಷೇಧಿಸ್ತೇವೆ ಎಂದ ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಆಕ್ರೋಶ, ತಾಕತ್ತಿದ್ದರೆ ಬ್ಯಾನ್ ಮಾಡುವಂತೆ ಸಚಿವೆ ಶೋಭಾ ಸವಾಲು

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಬಜರಂಗ ದಳ ನಿಷೇಧಿಸುತ್ತೇವೆ ಅಂತಾ ಹೇಳಿದೆ. ಪಿಎಫ್‌ಐ ಜೊತೆಗೆ ಆಂಜನೇಯನ ಭಕ್ತರಾದ ಬಜರಂಗದಳವನ್ನು ಸೇರಿಸಿರುವುದು ತಪ್ಪು, ಅಲ್ಲದೆ ಇಂತಹ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Dharwad, India
  • Share this:

ಧಾರವಾಡ : ವಿಧಾನಸಭಾ ಚುನಾವಣೆಗೂ (Assembly Election) ಮುನ್ನ ಮಂಗಳವಾರ ಕಾಂಗ್ರೆಸ್ ಪ್ರಣಾಳಿಕೆ (Congress manifesto) ಬಿಡುಗಡೆ ಮಾಡಿದ್ದು, ಬಜರಂಗದಳ (Bajarang Dal) ಸೇರಿದಂತೆ ಭಯೋತ್ವಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ತಿಳಿಸಿದೆ. ಈ ಬಗ್ಗೆ ಬಿಜೆಪಿ ನಾಯಕರು (BJP Leader) ಕಾಂಗ್ರೆಸ್​ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಎಫ್​ಐನಂತಹ ಸಂಘಟನೆ ಜೊತೆಗೆ ಬಜರಂಗದಳ ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್​ ಹೇಳಿದೆ, ಬಜರಂಗ ದಳ ನಮ್ಮ ಸಂಸ್ಕೃತಿ, ಧರ್ಮ ರಕ್ಷಣೆ ಮಾಡುವ ಸಂಘಟನೆ. ಅಂತಹ ಸಂಘಟನೆಯನ್ನು ನಿಷೇಧಿಸುತ್ತೇವೆ ಅಂತಾ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ವಿರುದ್ಧ​ ಅಸಮಾಧಾನ ವ್ಯಕ್ತಪಡಿಸಿದರು.


ಧಾರವಾಡ ಜಿಲ್ಲೆ ನವಲಗುಂದದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, " ಕಾಂಗ್ರೆಸ್ ಬಜರಂಗ ದಳ ನಿಷೇಧಿಸುತ್ತೇವೆ ಅಂತಾ ಹೇಳಿದೆ. ಪಿಎಫ್‌ಐ ಜೊತೆಗೆ ಬಜರಂಗ ದಳವನ್ನು ಸೇರಿಸಿದ್ದಾರೆ. ಈಗಾಗಲೇ ಪಿಎಫ್‌ಐ ಸಂಘಟನೆಯನ್ನು ನಮ್ಮ ಸರ್ಕಾರ ನಿಷೇಧಿಸಿದೆ. ಆದರೆ ಬಜರಂಗದಳ ನಮ್ಮ ಸಂಸ್ಕೃತಿ , ಧರ್ಮ ರಕ್ಷಣೆ ಮಾಡುವವರು, ಹನುಮನ ಭಕ್ತರನ್ನು ಬಜರಂಗಿಗಳು ಎನ್ನಲಾಗುತ್ತದೆ. ಜೊತೆಗೆ ಈ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿಲ್ಲ, ಅದು ಕೇಂದ್ರ ಸರ್ಕಾರದಿಂದ ಮಾತ್ರ " ಎಂದು ನವಲಗುಂದ ಬಹಿರಂಗ ಸಭೆಯಲ್ಲಿ ಬೊಮ್ಮಾಯಿ ಹೇಳಿದ್ದಾರೆ.


ಇದನ್ನೂ ಓದಿ: PM Modi Campaign: ಭಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆಗೆ ಮೋದಿ ಗುಡುಗು


ತಾಕತ್ತಿದ್ದರೆ ಬಜರಂಗದಳ ನಿಷೇಧಿಸಲಿ


ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ರದ್ದು ಮಾಡ್ತೀವಿ , ಬಜರಂಗದಳ ನಿಷೇಧಿಸುತ್ತೇವೆ ಎಂದು ಹೇಳಿದೆ. ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ದರೆ ಮೀಸಲಾತಿ ಹಾಗೂ ಬಜರಂಗದಳವನ್ನು ಮುಟ್ಟಿ ನೋಡಲಿ. ನಮಗೆ ತಾಕತ್ತು ಇದ್ದಿದ್ದಕ್ಕೆ ಪಿಎಫ್‌ಐ ಬ್ಯಾನ್ ಮಾಡಿದ್ದೇವೆ. ನಮಗೆ ತಾಕತ್ತು ಇರೋದಿಕ್ಕೆ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ನಮಗೆ ತಾಕತ್ತು ಇದ್ದಿದ್ದರಿಂದಲೇ ತ್ರಿಬಲ್ ತಲಾಕ್ ಬ್ಯಾನ್ ಮಾಡಿದ್ದೇವೆ. ಆರ್ಟಿಕಲ್ 370ರದ್ದು ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ದರೆ ಮೀಸಲಾತಿ, ಬಜರಂಗ ದಳ ಮುಟ್ಟಿ ನೋಡಲಿ ಎಂದು ಸಂಸದ ಮುನಿಸ್ವಾಮಿ ಕೋಲಾರದಲ್ಲಿ ಗುಡುಗಿದ್ದಾರೆ.




ವಿನಾಶಕಾಲೇ ವಿಪರೀತ ಬುದ್ದಿ ಎಂದ ಕರಂದ್ಲಾಜೆ


ಇನ್ನು ಇದೇ ವಿಚಾರದ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. " ಬಜರಂಗ ದಳ ದೇಶಸೇವೆ ಮಾಡುವ ಒಂದು ದಳ ಆರ್‌ಎಸ್ಎಸ್​​​ನ ಒಂದು ಭಾಗ ಬಿಜೆಪಿ, ಆರ್‌ಎಸ್ಎಸ್​ ಯುವಕರ ದಳ ಬಜರಂಗದಳ. ಆದರೆ ಬಜರಂಗದಳ ಮತ್ತು ಪಿಎಫ್ಐ ಸಂಘಟನೆಯನ್ನ ಒಂದೇ ತಕ್ಕಡಿಯಲ್ಲಿಟ್ಟು ಕಾಂಗ್ರೆಸ್ ದೇಶದ್ರೋಹ ಕೆಲಸ ಮಾಡಿದೆ. ಪಿಎಫ್ಐ ಜತೆ ದೇಶಪ್ರೇಮಿ ಬಜರಂಗದಳ ಶೋಭಾ ಕರಂದ್ಲಾಜೆ ಕಾಂಗ್ರೆಸ್​ಗೆ​ ಸವಾಲು ಹಾಕಿದ್ದಾರೆ.

First published: