Sindagi-Hangal By Election Results: ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗಲೂ ಹೀಗೆ ಆಗಿತ್ತು; ಸಿಎಂ ಸಮರ್ಥನೆ

ಹಾನಗಲ್ ಕ್ಷೇತ್ರದ ಸೋಲು ಮುಖ್ಯಮಂತ್ರಿಗೆ ಹಿನ್ನಡೆಯಲ್ಲ, ಅವರ ಕ್ಷೇತ್ರ ಅಂತಾನೂ ಇಲ್ಲ. ಅಲ್ಲಿನ ಮತದಾರರು ಆಮಿಷಕ್ಕೆ ಒಳಗಾಗಿದ್ದಾರೆ, ಈ ಹಿನ್ನೆಲೆಯಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ನಳಿನ್​ ಕುಮಾರ್​​ ಕಟೀಲ್​​ ಹೇಳಿದರು.

ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ

  • Share this:
ಮಂಡ್ಯ: ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ (Byelection Results) ಹೊರಬಿದ್ದಿದ್ದು, ಸಿಂದಗಿಯಲ್ಲಿ(Sindagi) ಬಿಜೆಪಿ ಹಾಗೂ ಹಾನಗಲ್​ನಲ್ಲಿ (Hangal) ಕಾಂಗ್ರೆಸ್​​ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬೈ ಎಲೆಕ್ಷನ್​ನಲ್ಲಿ ಜನರು ಅರ್ಧ ಚಂದ್ರ ಕೊಟ್ಟಿರುವ ಬಗ್ಗೆ  KRSನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM Basavaraj bommai) ಪ್ರತಿಕ್ರಿಯಿಸಿದರು. ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಹಾನಗಲ್ ನಲ್ಲಿ ನಾವು ನಿರೀಕ್ಷಿಸಿದಷ್ಟು ಮತ ಬಂದಿಲ್ಲ. ನಾವು ಹೋರಾಟ ಮಾಡಿದ್ದೇವೆ, ಉದಾಸಿ ಅವರಿಗೆ ಸಲ್ಲಬೇಕಿದ್ದ ಮತಗಳ ಬೆಂಬಲ ಪಡೆದುಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 2-3ವರ್ಷದಲ್ಲಿ ಮಾಡಿರುವ ಕೆಲಸವನ್ನ ಜನ ಕೈ ಹಿಡಿದಿದ್ದಾರೆ, ಹೀಗಾಗಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಫಲಿತಾಂಶವನ್ನು ವಿಶ್ಲೇಷಿಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿ ಆಗಿತ್ತು

ನಾನು ಸೋಲನ್ನ ಒಪ್ಪಿಕೊಳ್ತೇನೆ, ನಮ್ಮ ಪಕ್ಷದ ಹಿರಿಯರು-ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ರು. ಅವರಿಗೂ ನಾನು ಧನ್ಯವಾದ ಹೇಳುತ್ತೇನೆ. ಎಲೆಕ್ಷನ್ ನಲ್ಲಿ ಒಂದರಲ್ಲಿ ಗೆದ್ದು, ಒಂದರಲ್ಲಿ ಸೋತಿದ್ದೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿ ಆಗಿತ್ತು. ಈ ಫಲಿತಾಂಶವನ್ನ ಗಂಭೀರವಾಗಿ ತೆಗೆದುಕೊಳ್ತೇವೆ, ಮುಂದೆ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಗೆಲುವಿಗೆ ತಯಾರಾಗುತ್ತೇವೆ

ಸಿಂದಗಿ ಫಲಿತಾಂಶದಲ್ಲಿ ಹಣದ ಅಬ್ಬರ ಎಂಬ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು. ಚುನಾವಣೆಯಲ್ಲಿ ಸೋತವರ ಸ್ಟ್ಯಾಂಡರ್ಡ್ ಫಾರ್ಮೆಟ್ ಇದು. ಇದು ಹಣ, ತೋಳ್ಬಲದಿಂದ ಗೆಲುವಾಗಿದೆ ಅಂತಾರೆ. ಜನ ಬೆಂಬಲ ಇಲ್ಲದೆ ಯಾವುದೇ ಚುನಾವಣೆ ಗೆಲ್ಲೋಕೆ ಆಗಲ್ಲ. ಮುಂದಿನ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ತೇವೆ. ಗೆಲುವಿನ ರೀತಿ ಸೋಲನ್ನೂ ಗಂಭೀರವಾಗಿ ತೆಗೆದುಕೊಳ್ತೇವೆ. ಮುಂದಿನ ಸಾರ್ವತ್ರಿಕ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಕ್ರಮವಹಿಸ್ತೇವೆ. ಸೋಲನ್ನೂ ಗೆಲುವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಸಾರ್ವತ್ರಿಕ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ತೇವೆ. ಮುಂದೆ ಗೆಲ್ಲುವ ನಿಟ್ಟಿನಲ್ಲಿ ಆಡಳಿತಾತ್ಮಕವಾಗಿ, ರಾಜಕೀಯವಾಗಿ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಚುನಾವಣೆಯಲ್ಲಿ ಬೆಂಬಲ ಕೇಳಿದ ಎಲ್ಲರೂ ಬೆಂಬಲ ನೀಡಿದ್ದಾರೆ ಎಂದರು.

ಹಾನಗಲ್​ ಮತದಾರರು ಆಮಿಷಕ್ಕೆ ಒಳಗಾಗಿದ್ದಾರೆ

ಸಿಂದಗಿ-ಹಾನಗಲ್ ಉಪಚುನಾವಣೆ ಫಲಿತಾಂಶದ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಂದಗಿಯಲ್ಲಿ ಬಿಜೆಪಿ ಗೆ ಅಭೂತಪೂರ್ವ ಗೆಲುವಾಗಿದೆ. ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಸಂಘಟಿತ ಪ್ರಯತ್ನದ ಫಲ ಎಂದರು. ಹಾನಗಲ್ ನಲ್ಲಿ ಸಣ್ಣಮಟ್ಟದ ಸೋಲಾಗಿದೆ, ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇವೆ. ಮುಂದಿನ ಚುನಾವಣೆಗೆ ಇನ್ನಷ್ಟು ಹೋರಾಟ ಮಾಡುತ್ತೇವೆ. ಮತದಾರ ಕೊಟ್ಟ ತೀರ್ಪಿಗೆ ತಲೆಬಾಗುತ್ತೇವೆ. ಹಾನಗಲ್ ಕ್ಷೇತ್ರದ ಸೋಲು ಮುಖ್ಯಮಂತ್ರಿಗೆ ಹಿನ್ನಡೆಯಲ್ಲ, ಅವರ ಕ್ಷೇತ್ರ ಅಂತಾನೂ ಇಲ್ಲ. ಅಲ್ಲಿನ ಮತದಾರರು ಆಮಿಷಕ್ಕೆ ಒಳಗಾಗಿದ್ದಾರೆ, ಈ ಹಿನ್ನೆಲೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಈ ಬಗ್ಗೆ ಕೂತು ಚರ್ಚೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: Sindagi-Hangal Byelection Results: JDS ಠೇವಣಿ ಕಳೆದುಕೊಳ್ಳುತ್ತೆ ಅಂತ ನಾನು ಮೊದಲೇ ಹೇಳಿದ್ದೆ; ಸಿದ್ದರಾಮಯ್ಯ ವ್ಯಂಗ್ಯ

ಅವರ ಸೂಟ್​​ಕೇಸ್​ ಕೆಲಸ ಮಾಡಿದ್ಯಾ?

ಹಾನಗಲ್ ನಲ್ಲಿ ಸೂಟ್ ಕೇಸ್ ಕೆಲಸ ಮಾಡಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಆರೋಪ ವಿಚಾರ ತಿರುಗೇಟು ನೀಡಿದರು. ಹಾಗಾದರೆ ಕನಕಪುರದಲ್ಲಿ ಡಿಕೆಶಿ ಗೆಲುವಿಗೆ ಸೂಟ್ ಕೇಸ್ ಕೆಲಸ ಮಾಡಿದ್ಯಾ ಎಂದು ಪ್ರಶ್ನಿಸಿದರು. ಇನ್ನು ಸಿಂದಗಿಯಲ್ಲಿ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಬಿಜೆಪಿಯಿಂದ ರಮೇಶ್ ಭುಸನೂರು ಮತ್ತು ಜೆಡಿಎಸ್ ನಿಂದ ನಾಜೀಯಾ ಅಂಗಡಿ ಸ್ಪರ್ಧಿಸಿದ್ದರು . ಇತ್ತ ಹಾನಗಲ್ ನಲ್ಲಿ ಕಾಂಗ್ರೆಸ್ ನಿಂದ  ಶ್ರೀನಿವಾಸ್ ವಿ ಮಾನೆ, ಬಿಜೆಪಿಯಿಂದ ಶಿವರಾಜ್ ಸಜ್ಜನ್  ಮತ್ತು ಜೆಡಿಎಸ್ ನಿಂದ ನಿಯಾಜ್ ಶೇಕ್ ಸ್ಪಂರ್ಧಿಸಿದ್ದರು.
Published by:Kavya V
First published: