ಹುಟ್ಟೂರಿಗೆ ಹೂವಾಗುವೆ, ಮುಳ್ಳಲ್ಲ.. CM Bommai ಭಾವುಕರಾಗಿದ್ದು ಏಕೆ?

ಹುಟ್ಟೂರು ಧಾರವಾಡ ಜಿಲ್ಲೆಗೂ ಹೂವುನ್ನೇ ತರುವೆ ಹೊರತು ಮುಳ್ಳನಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಮಾತನಾಡಿದರು.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಧಾರವಾಡ : ನನ್ನ ಮೇಲೆ ಬಹುದೊಡ್ಡ ಜವಾಬ್ದಾರಿ(Responsibility) ಇದೆ. ಅದರ ಅರಿವು ನನಗಿದೆ. ಕರ್ನಾಟಕದ (Karnataka) ಆಮೂಲಾಗ್ರ ಬದಲಾವಣೆಗೆ ಆದ್ಯತೆ ನೀಡಿದ್ದೇನೆ. ಹುಟ್ಟೂರು ಧಾರವಾಡ (Dharwad) ಜಿಲ್ಲೆಗೂ ಹೂವುನ್ನೇ ತರುವೆ ಹೊರತು ಮುಳ್ಳನಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai ) ಭಾವುಕರಾಗಿ ಮಾತನಾಡಿದರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಪು ಭವನದಲ್ಲಿ ಭಾನುವಾರ ನಡೆದ ಚೆನ್ನವೀರಗೌಡ ಅಣ್ಣಾ ಶಿದ್ರಾಮಗೌಡ ಪಾಟೀಲ ಸಂಸ್ಮರಣೆ ದತ್ತಿ, ಗ್ರಂಥ ಬಿಡುಗಡೆ ಹಾಗೂ ಟ್ರಸ್ಟ್ ಉದ್ಘಾಟಿಸಿದ ಅವರು, ಪ್ರಸ್ತುತ ತಮ್ಮ ಸರ್ಕಾರ ಕೋವಿಡ್ ಸವಾಲು ಗೆಲ್ಲುವತ್ತ ಗಮನ ಹರಿಸುತ್ತಿದೆ ಎಂದರು. 

ರಾಜಕೀಯ ಲಾಭಕ್ಕೆ ಕಾಂಗ್ರೆಸ್​​ನಿಂದ ಪಾದಯಾತ್ರೆ

ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಪಾದಯಾತ್ರೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ನಾಯಕರ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನಶೀಲರು. ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಂದ ಬಿಜೆಪಿ ಸರ್ಕಾರ ಪಾಠ ಕಲಿಯುವುದು ಏನು ಇಲ್ಲ ಎಂದು ಕುಟುಕಿದರು. ಮೇಕೆದಾಟು ಯೋಜನೆ ವಿಷಯದಲ್ಲಿ ಅಣ್ಣಾಮಲೈ ಅವರನ್ನು ಬಿಜೆಪಿ ಎತ್ತುಕಟ್ಟುತ್ತಿದೆ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ತಾವೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಇದನ್ನೂ ಓದಿ: ಮೇಕೆದಾಟು ವಿಷಯದಲ್ಲಿ ಸಿಟಿ ರವಿನೇ ಅಣ್ಣಾಮಲೈನ ಎತ್ತಿಕಟ್ಟುತ್ತಿದ್ದಾನೆ: Siddaramaiah ಗಂಭೀರ ಆರೋಪ

ಪ್ರಧಾನಿ ಮೋದಿಯೇ ಆದರ್ಶ

ಇತ್ತೀಚೆಗೆ ಇತಿಹಾಸ ತಿರುಚವ ಕೆಲಸ ನಡೆದಿದ್ದು, ಇದು ಒಳ್ಳೆಯದಲ್ಲ. ಸತ್ಯದ ಮೂಲಕ ಜನರಿಗೆ ಉಪಕಾರ ಮಾಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆದರ್ಶವಾಗಿಟ್ಟುಕೊಂಡು ರಾಜ್ಯದ ಅಭುದ್ಯೇಯದ ದೃಷ್ಟಿಯಿಂದ ನಿತ್ಯ ೧೫ ಗಂಟೆಗಳ ಕಾಲ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ಶುದ್ಧ ಕನ್ನಡದ ಧಾರವಾಡ ಜಿಲ್ಲೆಯಿಂದ ತಾವು ಬಂದಿದ್ದು, ಈ ಭಾಗವನ್ನು ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಅಭಿವೃದ್ಧಿಪಡಿಸಲು ವಿಶೇಷ ಗಮನ ಹರಿಸಿದೆ. ಮುದ್ರಾಸ್ ಹಾಗೂ ಮುಂಬೈ ಮಧ್ಯೆ ಬರುವ ಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಗರದಲ್ಲಿ ಕೈಗಾರಿಕೆಗೆ ಉತ್ತೇಜನ ನೀಡಿದೆ ಎಂದು ಹೇಳಿದರು.

ರೈಲು ಯೋಜನೆಗೆ ಚಾಲನೆ

ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಆಗಿದೆ. ಅವಳಿನಗರದ ಮತ್ತಷ್ಟು ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನದ ಜತೆಗೆ ಯೋಜನೆ ಘೋಷಣೆ ಮಾಡಲಿದೆ. ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಧ್ಯೆ ರೂ.೮೯೦ ಕೋಟಿ ರೈಲು ಯೋಜನೆಗೆ ಚಾಲನೆ ನೀಡಿದೆ. ಶೀಘ್ರವೇ ಕೆಲಸ ಆರಂಭ ಆಗಲಿದೆ ಎಂದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ನಾಡಿನ ಐತಿಹಾಸಿಕ ಸ್ಥಳಗಳ ಬಗ್ಗೆ ವಿಶೇಷ ಪುಸ್ತಕ ರಚನೆ ಬಗ್ಗೆ ಚಿಂತಿಸಿದೆ. ಇದಕ್ಕೆ ಬರುವ ಬಜೆಟ್‌ನಲ್ಲಿ ಅನುದಾನವೂ ಮೀಸಲಿಟ್ಟು, ಪುಸ್ತಕ ಬರೆಸುವ ಜವಾಬ್ದಾರಿ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ವಹಿಸಲಿದೆ.  ದೇವರಹುಬ್ಬಳ್ಳಿ ಸಿದ್ಧಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಶಶಿಕಾಂತ ನಾಯಕ, ಮಾಜಿ ಶಾಸಕರಾದ ಎ.ಬಿ.ದೇಸಾಯಿ, ಚಂದ್ರಕಾಂತ ಬೆಲ್ಲದ, ಮಲ್ಲಿಕಾರ್ಜುನ ಪಾಟೀಲ, ಸಿ.ಎಸ್.ಪಾಟೀಲ ಇದ್ದರು.

ಸಿದ್ದರಾಮಯ್ಯ ಆರೋಪ 

ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್​​  ಜಿಲ್ಲೆಯಲ್ಲಿ ನಡೆಸಿದ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಬ್ಬರದ ಭಾಷಣ ಮಾಡಿದರು. ಮೇಕೆದಾಟು ಯೋಜನೆಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ, ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಗಬೇಕು ಅಷ್ಟೇ. 200 tmc ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ. ಅಣ್ಣಾಮಲೈ ಮೇಕೆದಾಟು ಯೋಜನೆ ಆಗಬಾರದು ಎಂದು ಧರಣಿ ಮಾಡ್ತಾನೆ. ಅಣ್ಣಾಮಲೈ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಕ್ಲಿಯರೆನ್ಸ್ ಕೊಡ್ತಾ ಇಲ್ಲ, ಅಣ್ಣಾಮಲೈ ಅಲ್ಲಿನ ಬಿಜೆಪಿ ಅಧ್ಯಕ್ಷನಾಗಿದ್ದಾನೆ.  ತಮಿಳುನಾಡಿನ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಸಿಟಿ ರವಿನೇ ಅಣ್ಣಾಮಲೈನನ್ನು ಎತ್ತಿಕಟ್ತಾ ಇದ್ದಾನೆ ಎಂದು ಗಂಭೀರ ಆರೋಪ ಮಾಡಿದರು.
Published by:Kavya V
First published: