ನಾಳೆಯಿಂದ ಇಲ್ಲ Weekend Curfew; ಸಿಎಂ ಸಭೆಯಲ್ಲಿ ತೀರ್ಮಾನ

ಸಭೆಯಲ್ಲಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಕೋವಿಡ್ ಸ್ಥಿತಿಗತಿ ಹಾಗೂ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ಕೂಡ ಸಮಗ್ರ ಅಂಕಿ‌ಅಂಶಗಳನ್ನು ಪಡೆದರು.

ಸಿಎಂ ಕೋವಿಡ್​ ಸಭೆ

ಸಿಎಂ ಕೋವಿಡ್​ ಸಭೆ

 • Share this:
  ಬೆಂಗಳೂರು (ಜ. 21):  ರಾಜ್ಯದಲ್ಲಿ ಕೋವಿಡ್​ ಸೋಂಕು ಹೆಚ್ಚಾಗುತ್ತಿದ್ದ ಹಿನ್ನೆಲೆ ಕಳೆದ ಎರಡು ವಾರಗಳ ಹಿಂದೆ ಘೋಷಣೆ ಮಾಡಲಾಗಿದ್ದ ವಾರಾಂತ್ಯ ಕರ್ಫ್ಯೂ (Weekend Curfew) ಅನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. ಕೋವಿಡ್ ನಿಯಮಾವಳಿ ಸಂಬಂಧ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಇಂದು ಸಭೆ ನಡೆಸಿದರು, ಈ ವೇಳೆ ತಜ್ಞರು ಮತ್ತು ಅಧಿಕಾರಿಗಳ ಮಾಹಿತಿ ಪಡೆದ ಅವರು, ರಾಜ್ಯದಲ್ಲಿ ಹೇರಿರುವ ವಾರಾಂತ್ಯ ಕರ್ಫ್ಯೂ ಹಿಂಡಪೆಯುವ ಕುರಿತು ತಿಳಿಸಿದ್ದಾರೆ. ಸಭೆ ಬಳಿಕ ಈ ಕುರಿತು ಪ್ರಕಟಿಸಿದ ಸಚಿವ ಆರ್​ ಅಶೋಕ್ ವಿಕೇಂಡ್​ ಕರ್ಫ್ಯೂ ರದ್ದು ಮಾಡಲಾಗಿದ್ದು, ರಾತ್ರಿ ಕರ್ಫ್ಯೂ ಅನ್ನು ವಿಸ್ತರಣೆ ಮಾಡಾಗಿದೆ. ಮುಂದಿನ 7 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್​ ಕರ್ಫ್ಯೂ ಇರಲಿದೆ ಎಂದರು. 

  ಇನ್ನು ಸಭೆಯಲ್ಲಿ ಕೋವಿಡ್ ಸ್ಥಿತಿಗತಿ ವಿದೇಶ, ದೇಶ, ರಾಜ್ಯ ಮತ್ತು ಜಿಲ್ಲೆಗಳಲ್ಲಿ ಯಾವ ರೀತಿ ಇದೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯ ಮತ್ತು ಜಿಲ್ಲೆಗಳಲ್ಲಿ ಕೋವಿಡ್ ಸ್ಥಿತಿಗತಿ ಹಾಗೂ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ಕೂಡ ಸಮಗ್ರ ಅಂಕಿ‌ಅಂಶಗಳನ್ನು ಪಡೆದರು.

  ವಿಕೇಂಡ್​ ಕರ್ಫ್ಯೂ ತೆರವಿಗೆ ಮನವಿ

  ಈ ವೇಳೆ ತಜ್ಞರು, ಅಧಿಕಾರಿಗಳು ನೈಟ್ ಕರ್ಪ್ಯೂ ಮುಂದುವರೆಸುವ ಬಗ್ಗೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದು, ವೀಕೆಂಡ್ ಕರ್ಫ್ಯೂ ತೆಗೆಯುವುದರ ಬಗ್ಗೆ ಒಮ್ಮತ ವ್ಯಕ್ತಪಡಿಸಿದರು. ಕೊವಿಡ್ ಕಡಿಮೆ ಇರುವ ಜಿಲ್ಲೆಗಳಲ್ಲಿ 50: 50 ನಿಯಮ ರೂಪಿಸಿ. ಯೂರೋಪ್ ರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಕೋವಿಡ್ ಮೂರನೇ ಅಲೆಯ ವ್ಯಾಪಕವಾಗಿ ಹರಡಿದರೂ ತೀವ್ರತೆ ಕಡಿಮೆ ಇದೆ. ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳೋಣ. ಒಂದು ವೇಳೆ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದರೆ, ಮತ್ತೆ ಬಿಗಿಕ್ರಮ ಮುಂದುವರಿಸೋಣ. ಸದ್ಯ ವೀಕೆಂಡ್ ಕರ್ಫ್ಯೂ ತೆರವು ಮಾಡೋಣ ಎಂಬ ಕೆಲ ಸಚಿವರ ಸಲಹೆಗೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದರು.

  ಇದನ್ನು ಓದಿ: ರೀ ಹೇಳಿದ್ದೆ ಜನ ಸೇರಿಸ್ಬೇಡಿ ಅಂತ, ಬುದ್ದಿಗಿದ್ದಿ ಇದ್ಯಾ ನಿಮ್ಗೆ? ಪೊಲೀಸರಿಗೆ CM Basavaraj Bommai ಫುಲ್ ಕ್ಲಾಸ್!

  ಶಾಲೆ ತೆರೆಯಲು ಅನುಮತಿಗೆ ಪ್ರಸ್ತಾಪ

  ಇನ್ನು ಸಭೆಯಲ್ಲಿ ಶಾಲೆಗಳ ಪ್ರಾರಂಭಕ್ಕೆ ಅನುಮತಿ ಕೊಡುವಂತೆ ಶಿಕ್ಷಣ ಸಚಿವರು ಮನವಿ ಮಾಡಿದರು. ಕೋವಿಡ್​ ಪ್ರಕರಣ ಹೆಚ್ಚಾದ ಹಿನ್ನಲೆ ಬೆಂಗಳೂರು ಸೇರಿದಂತೆ ಕೆಲ ಮಹಾನಗರಗಳಲ್ಲಿ 1ರಿಂದ 9 ನೇ ತರಗತಿಗಳು ಮುಚ್ಚಲಾಗಿದೆ. ಕೊರೊನಾ ಸೋಂಕು ಮಕ್ಕಳಲ್ಲಿ ಹೆಚ್ಚು ಬಾಧಿಸುತ್ತಿಲ್ಲ. ಜನವರಿ ಪ್ರಾರಂಭದಿಂದ ಇಲ್ಲಿವರೆಗೆ 7 ಸಾವಿರ ಮಕ್ಕಳಿಗೆ ಮಾತ್ರ ಸೋಂಕು ಬಂದಿದೆ. ಆದರೆ, ಸೋಂಕು ಬಂದವರಲ್ಲಿ ಯಾವುದೇ ದೊಡ್ಡ ಮಟ್ಟದ ಸಮಸ್ಯೆ ಆಗಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಶಾಲೆ ಪ್ರಾರಂಭಕ್ಕೆ ಅವಕಾಶ ಕೊಡುವಂತೆ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿಷಯ ಪ್ರಸ್ತಾಪಿಸಿದರು.

  ಇದನ್ನು ಓದಿ: 125ನೇ ಜನ್ಮದಿನ ಅಂಗವಾಗಿ ಇಂಡಿಯಾ ಗೇಟ್​ನಲ್ಲಿ ನೇತಾಜಿ ಪ್ರತಿಮೆ ಅನಾವರಣ

  ಒಂದು ವೇಳೆ 1ರಿಂದ 9ನೇ ತರಗತಿ ಅಲ್ಲದೆ ಹೋದರೂ 5ರಿಂದ 9 ನೇ ತರಗತಿಗಳಿಗೆ ಅವಕಾಶ ಕೊಡಿ ಎಂದು ಇದೇ ವೇಳೆ ತಿಳಿಸಿದರು.

  ಸೋಂಕು ನಿಯಂತ್ರಣಕ್ಕೆ ತಜ್ಞರು ನೀಡಿದ ಇತರೆ ಸಲಹೆಗಳು
  - ಮದುವೆ, ಅಂತ್ಯ ಸಂಸ್ಕಾರ, ಸಭೆ, ಸಮಾರಂಭಗಳಿಗೆ ಸಡಿಲಿಕೆ ಬೇಡ.

  - ಧರಣಿ, ಪ್ರತಿಭಟನೆ, ಸಮಾವೇಶ ನಿಷೇಧ ಮುಂದುವರೆಯಲಿ

  - ಎಲ್ಲ ಕಡೆ ಶಾಲೆಗಳ ಬಂದ್ ಮಾಡುವುದು ಬೇಡ

  - ಗಡಿ ಭಾಗಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ಅಗತ್ಯ

  - 50% ರೂಲ್ಸ್ ಎಲ್ಲ ಕಡೆಯೂ ಬೇಡ. ಜಿಲ್ಲಾವಾರು ಕೋವಿಡ್ ಸ್ಥಿತಿ ಆಧರಿಸಿ ಕೈಗೊಳ್ಳಿ

  - ಜನಜಂಗುಳಿ ಸೇರದಂತೆ ಕಟ್ಟೆಚ್ಚರ ವಹಿಸಿ

  - ಫೆಬ್ರವರಿ ಮೊದಲ ವಾರದವರೆಗೆ ಸಂಪೂರ್ಣ ರಿಲ್ಯಾಕ್ಸೇಷನ್ ಬೇಡವೇ ಬೇಡ

  - ಆಸ್ಪತ್ರೆ‌ ದಾಖಲಾತಿ ಜಾಸ್ತಿಯಾದ ಸಂದರ್ಭದಲ್ಲಿ ಕಠಿಣ ನಿರ್ಬಂಧ ಅನಿವಾರ್ಯ
  Published by:Seema R
  First published: