Bengaluru Rain Effect: ಜೆಎನ್​ಸಿ ಸೇರಿ ಬೆಂಗಳೂರಿನ ವಿವಿಧೆಡೆ ಮಳೆ ಹಾನಿ ವೀಕ್ಷಿಸಿದ ಸಿಎಂ; ಮನೆ ಹಾನಿಗೆ 5 ಲಕ್ಷ ಪರಿಹಾರ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಧಾರಕಾರ ಮಳೆ ಸುರಿದ ಪರಿಣಾಮ ಎಲ್ಲೆಡೆ ಪ್ರವಾಹ ಸೃಷ್ಟಿಯಾಗಿದೆ. ಮಳೆಯಿಂದಾಗಿ ಬೆಂಗಳೂರು ಭಾಗಶಃ ನಲುಗಿಹೋಗಿದೆ. ತಗ್ಗು ಪ್ರದೇಶಗಳು ಸೇರಿದಂತೆ ಹಲವಾರು ಕಡೆ ನೀರು ಮನೆಗಳಿಗೆ, ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೇಂದ್ರೀಯ ವಿಹಾರ್​ನಲ್ಲಿ ಮಳೆ ಹಾನಿ ವೀಕ್ಷಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಕೇಂದ್ರೀಯ ವಿಹಾರ್​ನಲ್ಲಿ ಮಳೆ ಹಾನಿ ವೀಕ್ಷಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

 • Share this:
  ಬೆಂಗಳೂರು: ಮಳೆಯಿಂದ ತೀವ್ರ ಹಾನಿಗೆ (Heavy Rain Effect) ಒಳಗಾಗಿರುವ ಕೇಂದ್ರೀಯ ವಿಹಾರ್ (Kendriya Vihar), ಹಾಗೂ ಜವಾಹರಲಾಲ್ ನೆಹರು ಸೆಂಟರ್​ (Jawaharlal Nehar Study Center) ವೀಕ್ಷಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಆಗಿರುವ ಅವಘಡಗಳ ಪರಿಶೀಲನೆ ನಡೆಸಿದರು. ತೆರೆದ ಜೀಪ್​ ಹತ್ತಿ ಮಳೆ ಹಾನಿ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಎರಡು ಕೋಡಿಗಳು ತುಂಬಿ ಹರಿದು ನೀರು ಬಂದಿದೆ. ರಾಜಕಾಲುವೆ ಗಾತ್ರ ತುಂಬಾ ಚಿಕ್ಕದಾಗಿದೆ. ರಾಜಕಾಲುವೆ ಕೆಲವು ಕಡೆ ಒತ್ತುವರಿಯಾಗಿದೆ. ಮಳೆ ನಿಂತ ಕೂಡಲೇ ರಾಜಕಾಲುವೆ ಅಗಲಿಕರಣ ಮಾಡಲು ಸೂಚನೆ ನೀಡಲಾಗಿದೆ. ಎರಡು ರಾಜಕಾಲುವೆ ಯಾವುದೇ ರೀತಿಯ ಅಡಚಣೆಯಾಗದೆ ನೀರು ಬರಬೇಕು. ನೀರು ಹೊರ ಹಾಕಲು ಡ್ರೈನೇಜ್ ವ್ಯವಸ್ಥೆ ಮಾಡಬೇಕು. ಹೆದ್ದಾರಿ ಕೆಳಗಡೆ ಡ್ರೈನೇಜ್ ಹೋಗಲು ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುತ್ತೆ. ಎಲ್ಲೆಲ್ಲಿ ರಾಜಕಾಲುವೆ ನೀರು ಹೊರ ಬರ್ತಿದೆ ಅದೆಲ್ಲಾ ತೆರವು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

  ಮಳೆಯಿಂದ ಮನೆ ಹಾನಿಯಾಗಿದ್ದರೆ ಒಂದು ಲಕ್ಷ ಪರಿಹಾರ ನೀಡಲಾಗುವುದು. ಹಾಗೂ ಸಂಪೂರ್ಣ ಹಾನಿಯಾಗಿದ್ದರೆ 5 ಲಕ್ಷ ಪರಿಹಾರ (5 Lakh Relief For Complete House Damage) ನೀಡಲಾಗುವುದು. ಮೊದಲ ಹಂತವಾಗಿ ಒಂದು ಲಕ್ಷ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಬ್ಯಾಟರಾಯನಪುರದಲ್ಲಿ 600 ಮನೆ ಹಾಳಾಗಿವೆ. ಇಲ್ಲಿಂದ ಮುಂದೆ ನಾಲ್ಕೈದು ಕೆರೆಗಳಿಗೆ ಹೋಗುವ ಕಾಲುವೆ ದುರಸ್ತಿ ಮಾಡಲಾಗುವುದು. ಹಲವಾರು ಅಪಾರ್ಟ್ಮೆಂಟ್ ಗಳು ಬಫರ್ ಜೋನ್ ನಲ್ಲಿ ಕಟ್ಟಿರೋದ್ರಿಂದ ಈ ರೀತಿ ಅವಘಡ ಅಗುತ್ತೆ. ರಾಜಕಾಲುವೆ ಪಕ್ಕದಲ್ಲಿರುವ ಕಟ್ಟಡಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇಲ್ಲಿ ಜಾಸ್ತಿ ಮಳೆಯಾಗಿ ಹೆಚ್ಚಿನ ನೀರು ಹರಿದಿದೆ‌. ರಾಜಕಾಲುವೆ ತುಂಬ ಚಿಕ್ಕದಾಗಿದೆ. ಆದ್ದರಿಂದ ಹೆಚ್ಚಿನ ಸಮಸ್ಯೆ ಆಗಿದೆ ಎಂದು ತಿಳಿಸಿದರು.

  ಜವಾಹರಲಾಲ್ ನೆಹರು ಸಂಶೋಧನಾ ಕೇಂದ್ರ ವೀಕ್ಷಣೆ

  ಮಳೆಯಿಂದ ತೀವ್ರವಾಗಿ ಹಾನಿಗೆ ಒಳಗಾಗಿರುವ ಜವಾಹರಲಾಲ್ ನೆಹರು ಸಂಶೋಧನಾ ಕೇಂದ್ರ ವೀಕ್ಷಣೆ ಮಾಡಿದ ಸಿಎಂ ಬೊಮ್ಮಾಯಿ ಅವರು, ಕಳೆದ ಎರಡು ದಿನಗಳಿಂದ ನೀರು ನಿಂತು ಅವಾಂತರ ಆಗಿದೆ. ಕೇವಲ ಕ್ಯಾಂಪಸ್ ಮಾತ್ರ ಅಲ್ಲ ಕಟ್ಟಡದ ಒಳಗೂ ನೀರು ನುಗ್ಗಿದೆ. ಸಿಎನ್‌ಆರ್ ರಾವ್ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಇಲ್ಲಿ 138 mm ಮಳೆ ಆಗಿದೆ. ಪಕ್ಕದ ಎರಡು‌ ಕೆರೆಗಳು ತುಂಬಿರುವ ಕಾರಣ ಪ್ರವಾಹ ಆಗಿದೆ. ಕೆರೆಯ ಒಂದು ಭಾಗವೇ ಆಗಿತ್ತು ಈ ಕೇಂದ್ರ. ಕೆರೆಯ ನೀರನ್ನು ವ್ಯವಸ್ಥಿತವಾಗಿ ತೆರವು ಮಾಡುವಂತೆ BWSSB ಗೆ ಸೂಚನೆ ಕೊಡಲಾಗಿದೆ. ಕೆರೆಯ ಮಿತಿಯನ್ನು ಮೀರಿ ನೀರು ಹರಿದಿರುವುದು ಕಂಡು ಬಂದಿದೆ. ಇಲ್ಲಿನ ಡ್ತೈನೇಜ್ ವ್ಯವಸ್ಥೆ ಬಹಳ ಸಣ್ಣದಿದೆ. 8-10 ಫೀಟ್ ಅಷ್ಟೇ ಇದೆ. ಕಾಲುವೆ ಡೈವರ್ಷನ್ ಮಾಡುವ ಅಗತ್ಯವಿದೆ. ಲಾಬ್ ಗಳಿಗೆ ನೀರು ನುಗ್ಗಿ ದೊಡ್ಡ ಪ್ರಮಾಣದ ನಷ್ಟ ಆಗಿದೆ. ಅದರ ಲೆಕ್ಕವನ್ನು ಮಾಡುವ ಅಗತ್ಯವಿದೆ. ಸಂಸ್ಥೆ ಜೊತೆ ಪಾಲಿಕೆ ಕೂಡ ಇಲ್ಲಿ ಇರುತ್ತೆ. ಮುಂದಿನ ದಿನಗಳಲ್ಲಿ ಪ್ರವಾಹ ಆಗದಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಲಿದ್ದೇವೆ. ರಾಜಕಾಲುವೆ ಮೇಲೆ ನಿರ್ಮಾಣ ಮಾಡಿರುವ ಕಟ್ಟಡಗಳು ತೆರವಿಗೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.

  ಇದನ್ನು ಓದಿ: Bengaluru: ಕಾರ್ ಮೇಲೆ ನಾಯಿ ಮೂತ್ರ ಮಾಡಿದ್ದ ವಿಚಾರಕ್ಕೆ ಗಲಾಟೆ: ವೃದ್ಧನ ಮೇಲೆ ಕಲ್ಲಿನಿಂದ ಹಲ್ಲೆ

  ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಧಾರಕಾರ ಮಳೆ ಸುರಿದ ಪರಿಣಾಮ ಎಲ್ಲೆಡೆ ಪ್ರವಾಹ ಸೃಷ್ಟಿಯಾಗಿದೆ. ಮಳೆಯಿಂದಾಗಿ ಬೆಂಗಳೂರು ಭಾಗಶಃ ನಲುಗಿಹೋಗಿದೆ. ತಗ್ಗು ಪ್ರದೇಶಗಳು ಸೇರಿದಂತೆ ಹಲವಾರು ಕಡೆ ನೀರು ಮನೆಗಳಿಗೆ, ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
  Published by:HR Ramesh
  First published: