Kalyana Karnataka Utsav: ದೇವಾಲಯಗಳು ನಮ್ಮ ಅಸ್ಮಿತೆ, ದೇವಸ್ಥಾನಗಳ ರಕ್ಷಣೆ ಮಾಡುತ್ತೇವೆ; ಸಿಎಂ ಬಸವರಾಜ ಬೊಮ್ಮಾಯಿ

ಕಲಬುರಗಿ ಮಹಾನಗರಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಯಾರು ನಂಬರ್ ಮಾಡಿಕೊಳ್ಳುತ್ತಾರೋ ಅವರು ಅಧಿಕಾರಕ್ಕೆ ಬರುತ್ತಾರೆ. ನಮ್ಮ ಪಕ್ಷ ಈ ಪ್ರಯತ್ನದಲ್ಲಿದೆ

ಕಲಬುರಗಿ ತಾಲೂಕಿನ ಕಾಳಗನೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಕಾಳಲಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡವನ್ನು ಇಂದು ಮುಖ್ಯಮಂತ್ರಿಗಳು ಉದ್ಘಾಟಿಸಿದರು (ಫೋಟೋ- ಸಿಎಂ ಟ್ವೀಟರ್​ ಖಾತೆ)

ಕಲಬುರಗಿ ತಾಲೂಕಿನ ಕಾಳಗನೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಕಾಳಲಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡವನ್ನು ಇಂದು ಮುಖ್ಯಮಂತ್ರಿಗಳು ಉದ್ಘಾಟಿಸಿದರು (ಫೋಟೋ- ಸಿಎಂ ಟ್ವೀಟರ್​ ಖಾತೆ)

 • Share this:
  ಕಲಬುರಗಿ (ಸೆ. 17): ದೇವಾಲಯ ತೆರವು ವಿಚಾರದಲ್ಲಿ (Temple Demolition) ರಾಜ್ಯದಾದ್ಯಂತ ಹಿಂದೂಪರ ಸಂಘಟನೆ ಕಾರ್ಯಕರ್ತರು (hindu activist) ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರ ಕುರಿತು ಇಂದು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja bommai), ದೇವಾಲಯಗಳು ನಮ್ಮ ಅಸ್ಮಿತೆ , ನಮ್ಮ ಧರ್ಮದ ದೇವಾಲಯ ರಕ್ಷಣೆ ಮಾಡಿಕೊಳ್ಳುತ್ತೇವೆ. ಅನಧಿಕೃತ ದೇವಸ್ಥಾನ ತೆರವಿನ ವಿಚಾರ ಚರ್ಚೆ ಮಾಡುತ್ತಿದ್ದೇವೆ. ಈ ವಿಚಾರದ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದೇನೆ. ಈ ಬಗ್ಗೆ ಕೂಡಲೇ ಪರಿಹಾರ ಕಂಡು ಕೊಳ್ಳುತ್ತೇವೆ. ಯಾರೂ ಕೂಡ ಅವಸರದಲ್ಲಿ ದೇವಾಲಯ ತೆಗೆಯಬಾರದು ಮತ್ತು ಧಕ್ಕೆ ಮಾಡಬಾರದು ಎಂದು ಸೂಚಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳುಗೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದೇನೆ. ಅಲ್ಲದೇ, ಸಾಕಷ್ಟು ಚರ್ಚೆಗೆ ಗುರಿಯಾಗಿರುವ ನಂಜನಗೂಡು ದೇವಾಲಯ ತೆರವಿನ ವಿಚಾರದಲ್ಲಿ ಮೈಸೂರು ಡಿಸಿ ಮತ್ತು ತಹಸಿಲ್ದಾರಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದರು.

  ಕಲಬುರಗಿಯಲ್ಲಿ ಮೊದಲ ಬಾರಿ ಬಿಜೆಪಿ ಮೇಯರ್​​

  ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಅವರು, ಅತಂತ್ರವಾಗಿರುವ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಲಬುರಗಿ ಮಹಾನಗರಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಯಾರು ನಂಬರ್ ಮಾಡಿಕೊಳ್ಳುತ್ತಾರೋ ಅವರು ಅಧಿಕಾರಕ್ಕೆ ಬರುತ್ತಾರೆ. ನಮ್ಮ ಪಕ್ಷ ಈ ಪ್ರಯತ್ನದಲ್ಲಿದೆ. ನಾವು ಜೆಡಿಎಸ್ ನಾಯಕರ ಜೊತೆ ಮಾತನಾಡಿದ್ದೇವೆ. ನಮ್ಮ ನಾಯಕರು ಇತರ ಜನಪ್ರತಿನಿಧಿಗಳ ಜೊತೆಗೂ ಮಾತನಾಡಿದ್ದಾರೆ. ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಬಿಜೆಪಿಯವರು ಮೇಯರ್ ಆಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

  ಯೋಜನೆಗಳ ಸಮರ್ಪಕ ಅನುಷ್ಠಾನ

  ಈ ದಿನವನ್ನು ಕಲ್ಯಾಣ ಕರ್ನಾಟಕ ಸ್ಥಾಪನಾ ದಿನ ಕರೆದ್ರೂ ತಪ್ಪಿಲ್ಲ. ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಈ ಭಾಗದ ಕಲ್ಯಾಣ ಆಗಬೇಕು. ಈಗಾಗಲೇ ಅನುಷ್ಠಾನಗೊಳ್ಳುತ್ತಿರುವ ಯೋಜನೆ ಪೂರ್ಣಗೊಳಿಸುವುದು ನನ್ನ ಆದ್ಯತೆ. ನೆನೆಗುದಿಗೆ ಬಿದ್ದ ಯೋಜನೆಗಳ ಪೂರ್ಣಗೊಳಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಕಲಬುರಗಿ ಮತ್ತೆ ಭಾರತದ ಪ್ರಮುಖ ನಗರ ವಾಗಿ ಬೆಳೆಯುತ್ತಿದೆ. ಕೈಗಾರಿಕಾ ಹಬ್ ಆಗಿ ಬದಲಾಯಿಸಬೇಕಾಗಿದೆ. ಟೆಕ್ಸ್​​ಟೈಲ್, ಫಾರ್ಮಸಿ ಸ್ಥಾಪನೆಯಾಗಲಿದೆ ಎಂದರು.

  ಇದನ್ನು ಓದಿ: ಬಾಲ್ಯದ ಗೆಳೆಯನ ಅಗಲಿಕೆಗೆ ಬಿಕ್ಕಿಬಿಕ್ಕಿ ಅತ್ತ ಸಿಎಂ; ಅಧಿವೇಶನ ಬಿಟ್ಟು ಹುಬ್ಬಳ್ಳಿಗೆ ಬೊಮ್ಮಾಯಿ ದೌಡು

  ದೂರಗಾಮಿ ಪರಿಣಾಮಗಳ ಬಗ್ಗೆ ಚರ್ಚೆ

  ಇನ್ನು ಇದೇ ವೇಳೆ ಪೆಟ್ರೋಲ್​, ಡಿಸೇಲ್​ ಮತ್ತು ಅಡುಗೆ ಸಿಲಿಂಡರ್​ ಮೇಲಿನ ಸೆಸ್​ ಕಡಿತ ಮಾಡಬೇಕು ಎಂಬ ವಿಪಕ್ಷಗಳ ಒತ್ತಾಯ ಕುರಿತು ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್, ಡೀಸಲ್ ಜಿಎಸ್ಟಿ ವ್ಯಾಪ್ತಿಗೆ ತರುವ ಬಗ್ಗೆ ಇಂದು ವಿತ್ತ ಸಚಿವರ ನೇತೃತ್ವದಲ್ಲಿ ಚರ್ಚೆ ಆಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರದ ಬಹಳಷ್ಟು ವಿಚಾರ ಇದರಲ್ಲಿರಲಿವೆ. ಇದರಿಂದ ದೂರಗಾಮಿ ಪರಿಣಾಮಗಳೆನಾಗುತ್ತವೆ ಎನ್ನುವುದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

  ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು

  ಇದಕ್ಕೂ ಮುನ್ನ ನಗರದ ಪೊಲೀಸ್​ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮುಂದಿನ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲೆಗೂ ಸಮರ್ಪಕ ಅನುದಾನ ನೀಡಲಾಗುವುದು ಈ ಮೂಲಕ ಈ ಭಾಗದ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಉತ್ತೇಜನ ನೀಡಾಗುವುದು. ಸದ್ಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮಂಡಳಿಗೆ 8000 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಇನ್ನು 2000 ಕೋಟಿ ಹಾಗೇ ಉಳಿದಿದೆ. ಈ ಹಿನ್ನಲೆ ಇದರನ್ನ ಸಮರ್ಥವಾಗಿ ಅಭಿವೃದ್ದಿ ಕಾರ್ಯಗಳಿಗೆ ಬಳಸಬೇಕು. ಈ ಹಣ ಬಳಕೆಯಾದ ಬಳಿಕ ಉಳಿದ 3000 ಕೋಟಿ ಹಣ ಬಿಡುಗಡೆ ಮಾಡಲಾಗುವುದು ಎಂದರು.
  Published by:Seema R
  First published: