Karnataka Budget 2022: ಸರ್ಕಾರದ ಕ್ರಮಗಳಿಂದ ಆರ್ಥಿಕ ಚೇತರಿಕೆ; ಬಜೆಟ್ ಬಳಿಕ CM Bommai ಮಾತು

ಇನ್ನೂ ಮೂರು ವರ್ಷ ಜಿಎಸ್ಟಿ ತೆರಿಗೆ ಪರಿಹಾರ ಮುಂದುವರೆಸಲು ಮನವಿ ಮಾಡಿದ್ದೇವೆ. ಕೇಂದ್ರದ ತೆರಿಗೆ ಪಾಲು 29,783 ಕೋಟಿ ರೂ ಆಗಿದೆ. ಕೇಂದ್ರದಿಂದ ಸಹಾಯಧನವೂ 17,281 ಕೋಟಿ ರೂ ಬರಲಿದೆ

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
    ಬೆಂಗಳೂರು (ಮಾ. 4):  ಕಳೆದ 2 ವರ್ಷದಲ್ಲಿ ಆರ್ಥಿಕತೆ ಬಹಳಷ್ಟು ಪೆಟ್ಟು ಬಿದ್ದಿತ್ತು. ಕೊವೀಡ್ ಕಡಿಮೆ ನಂತರ ಆರ್ಥಿಕತೆ ಚೇತರಿಕೆ ಕಂಡಿದೆ. ಸರ್ಕಾರದ ಕ್ರಮಗಳಿಂದಾಗಿ ಆರ್ಥಿಕತೆ ಚೇತರಿಕೆ ಕಂಡಿದೆ. ನಾವು ಆರ್ಥಿಕ ಶಿಸ್ತು ಕಾಪಾಡಿದ್ದೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraja Bommai) ತಿಳಿಸಿದ್ದಾರೆ. ತಮ್ಮ ಮೊದಲ ಬಜೆಟ್ (Karnataka Budget) ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಈ ವರ್ಷ 2 ಲಕ್ಷ 65 ಸಾವಿರ ಬಜೆಟ್ ಗಾತ್ರ ಇದೆ. ಬಜೆಟ್​ ಗಾತ್ರ 19513 ಕೋಟಿ ಈ ವರ್ಷ ಜಾಸ್ತಿ ಯಾಗಿದೆ. ಕೇಂದ್ರ ಸಾಲ ಮಾಡಲು ಅವಕಾಶ ನೀಡಿತ್ತು. 67,100ಕೋಟಿ ಸಾಲ ಪಡೆಯಲು ಅವಕಾಶ ಇತ್ತು. ಆದರೆ, ನಾವು ಆರ್ಥಿಕ ಸಂಪನ್ಮೂಲ ಹೆಚ್ಚಿಸಿ, ಅನಾವಶ್ಯಕ ಖರ್ಚು ಕಡಿಮೆ ಮಾಡಿದ್ದೇವೆ. 63,100ಕೋಟಿ ಮಾತ್ರ ಸಾಲ ಮಾಡಿದ್ದೇವೆ. 3. 5ವರೆಗೂ ಸಾಲ ಮಾಡಬಹುದಿತ್ತು, ಆದ್ರೆ 2.6 ಗೆ ಸೀಮಿತ ಮಾಡಿದ್ದೇವೆ. ಇದು ಆರ್ಥಿಕ ಪ್ರತಿಬಿಂಬ ತೋರಿಸುತ್ತದೆ ಎಂದರು.

    ನಮ್ಮ ಮುಂದಿರುವ ಗುರಿ
    ಕಳೆದ ವರ್ಷಗಳಲ್ಲಿ ಹೆಚ್ಚಿನ ಸಾಲ ಪಡೆದಿದ್ದಾರೆ. ಜಿಎಸ್ಟಿಪಿ 27.9 ಇದೆ, ಬರುವ ವರ್ಷಗಳಲ್ಲಿ 25ಕ್ಕೆ ಇಳಿಸಬೇಕಿದೆ. ಇದಕ್ಕೆ ಮುಂದಿನ ಎರಡು ವರ್ಷ ಅವಧಿ ಬೇಕಾಗಲಿದೆ. ರಾಜ್ಯಸ್ವ ಸ್ವೀಕೃತಿ 1, 89, 000ಕೋಟಿ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ರೆವಿನ್ಯೂ 17,616 ಕೋಟಿ ಹೆಚ್ಚಳ ಆಗಿದೆ. ಆರ್ಥಿಕ ಶಿಸ್ತು ಪಾಲನೆ, ಸಂಪನ್ಮೂಲಗಳ ಕ್ರೋಢೀಕರಣ, ಅನಗತ್ಯ ವೆಚ್ಚ ಕಡಿತ ನಮ್ಮ ಮುಂದಿನ ಗುರಿ ಆಗಿದೆ ಎಂದು ತಿಳಿಸಿದರು

    ಜಿಎಸ್ಟಿ ಪರಿಹಾರ ಈ ಬಜೆಟ್ ನಲ್ಲಿ ಲೆಕ್ಕ ಹಾಕಿಕೊಂಡಿಲ್ಲ. ಜಿಎಸ್ಟಿ ಪರಿಹಾರ 11-13 ಸಾವಿರ ಕೋಟಿ ರೂ ವಾರ್ಷಿಕ ಸಿಗುತ್ತಿತ್ತು. ಈ ವರ್ಷ ಜಿಎಸ್ಟಿ ಪರಿಹಾರ ಬರುವುದು ನಿಲ್ಲಲಿದೆ. ಇನ್ನೂ ಮೂರು ವರ್ಷ ಜಿಎಸ್ಟಿ ತೆರಿಗೆ ಪರಿಹಾರ ಮುಂದುವರೆಸಲು ಮನವಿ ಮಾಡಿದ್ದೇವೆ. ಕೇಂದ್ರದ ತೆರಿಗೆ ಪಾಲು 29,783 ಕೋಟಿ ರೂ ಆಗಿದೆ. ಕೇಂದ್ರದಿಂದ ಸಹಾಯಧನವೂ 17,281 ಕೋಟಿ ರೂ ಬರಲಿದೆ ಎಂದು ಮಾಹಿತಿ ನೀಡಿದರು

    ಇದನ್ನು ಓದಿ: Mekedatu Projectಗೆ 1000 ಕೋಟಿ ಮೀಸಲು; ನಮ್ಮ ಹೋರಾಟಕ್ಕೆ ಸಂದ ಜಯ; BK Hariprasad

    ಎಲ್ಲಾ ವಲಯಕ್ಕೂ ಆದ್ಯತೆ

    ನಮ್ಮ ಬಜೆಟ್​​ನಲ್ಲಿ ಕೃಷಿ, ಕೈಗಾರಿಕೆ, ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಿದ್ದೇವೆ. ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ. ತೆರಿಗೆಯೇತರ ಆದಾಯ ಹೆಚ್ಚಾದಷ್ಟೂ ಆರ್ಥಿಕ ಶಿಸ್ತು ಹೆಚ್ಚಲಿದೆ. ಗಣನೀಯ ಪ್ರಮಾಣದಲ್ಲಿ ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಈ ಬಾರಿ 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಸಹಾಯಕರು, ಪೌರ ಕಾರ್ಮಿಕರು, ಗ್ರಾಮಸಹಾಯಕರಿಗೆ ಮಾಸಾಶನ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು

    ಇದನ್ನು ಓದಿ: ನಿರ್ಮಲಾ ಸೀತಾರಾಮನ್​ ಅನುಸರಿಸಿದ ಬೊಮ್ಮಾಯಿ; ಗಮನ ಸೆಳೆದ ಬಜೆಟ್​ ಬ್ಯಾಗ್

    ವೈದ್ಯಕೀಯ ಸೇವೆಗಳಿಗೆ ಒತ್ತು

    ಇದೊಂದು ಸೂಕ್ಷ್ಮ ಬಜೆಟ್ ಆಗಿದೆ. ಯಾಕೆಂದ್ರೆ ಗಿಡ, ಮರ, ಪರಿಸರ ಗಮನಿಸಿ ಪ್ರತೀ ವರ್ಷದ ಪರಿಸರ ನಾಶ ಪ್ರಮಾಣ ಅಳೆದು ನಷ್ಟ ತುಂಬುವ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನ ಹಿಂದಿನ ಸರ್ಕಾರಗಳು ಮಾಡಿಲ್ಲ. ಆಸಿಡ್ ದಾಳಿಗೊಳಗಾದವರಿಗೆ ಮಾಸಿಕ 3 ರಿಂದ 10 ಸಾವಿರಕ್ಕೆ ಏರಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿಗೆ ಕಷ್ಟ ಇತ್ತು. ರಾಜ್ಯದಲ್ಲಿ 10 ಕಿಮೋ ಥೆರಪಿ ಕೇಂದ್ರ ಗಳ ಸ್ಥಾಪನೆ ಮಾಡಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ಚೆಕಿಂಗ್, ಕನ್ನಡಕ, ಸೇರಿದಂತೆ ಉಚಿತ ಸರ್ಜರಿಗೆ ಒತ್ತು ನೀಡಲಾಗಿದೆ. ಹುಟ್ಟು ಕಿವುಡರಿಗೆ ಹೊಸ ಸಾಧನ ಇಂಪ್ಲಾಂಟ್ ಗೆ ಕ್ರಮ ಕೈಗೊಳ್ಳಲಾಗಿದೆ. ಇದು ದುಬಾರಿ ಸಾಧನ ಆಗಿದ್ದು, ಇದನ್ನು ಪಡೆಯಲು ಬಡ ವರ್ಗದ ಜನರು ಸಾಕಷ್ಟು ತೊಂದರೆ ಪಡುತ್ತಾರೆ. ಈ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದರು
    Published by:Seema R
    First published: