Basavaraja Bommai: ಸಿಎಂ ದೆಹಲಿ ಭೇಟಿ: ಹುಬ್ಬಳ್ಳಿ- ಅಂಕೋಲ ರೈಲ್ವೆ ಯೋಜನೆಗೆ ಮನವಿ

ಕಲಬುರಗಿಯಲ್ಲಿ ರೈಲ್ವೆ ಡಿವಿಜನ್ ಸ್ಥಾಪನೆ, ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ ಹಾಗೂ ಬೆಂಗಳೂರು ಸರ್ಬನ್ ಯೋಜನೆಗೆ ವೇಗ ನೀಡಲು ಮನವಿ ಮಾಡಲಾಗಿದೆ

ಕೇಂದ್ರ ರೈಲ್ವೆ ಸಚಿವರೊಂದಿಗೆ ಸಿಎಂ

ಕೇಂದ್ರ ರೈಲ್ವೆ ಸಚಿವರೊಂದಿಗೆ ಸಿಎಂ

  • Share this:
    ನವದೆಹಲಿ (ಸೆ. 7):  ಮಹಾನಗರ ಪಾಲಿಕೆಯಲ್ಲಿ ವಿಜಯ ಸಾಧಿಸಿದ ಮರು ದಿನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja bommai) ದೆಹಲಿ ಪ್ರವಾಸ ನಡೆಸಿದ್ದಾರೆ. ಖಾಲಿ ಇರುವ ಸಚಿವ ಸ್ಥಾನದ ಕುರಿತು ಹೈಕಮಾಂಡ್ (BJP High command) ಜೊತೆಗಿನ ಚರ್ಚೆ ಜೊತೆಯಲ್ಲಿಯೇ ರಾಜ್ಯದ ವಿವಿಧ ಯೋಜನೆಗಳ ಅನುಮೋದನೆ, ಹಾಗೂ ಮೇಕೆದಾಟಿ, ಮಹಾದಾಯಿ ವಿಚಾರಗಳ ಕುರಿತು ಚರ್ಚೆಗೆ ಅವರು ಮುಂದಾಗಿದ್ದಾರೆ. ಇಂದು ಬೆಳಗ್ಗೆ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್​, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಸೇರಿದಂತೆ ಹಲವು ನಾಯಕರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇನ್ನು ನಾಳೆ ಹೈ ಕಮಾಂಡ್ ಭೇಟಿಯಾಗಲಿರುವ ಅವರು ಸಚಿವ ಸ್ಥಾನ ಭರ್ತಿ ಕುರಿತುದಂತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಇಂದು ಮಧ್ಯಾಹ್ನ ದೆಹಲಿ ತಲುಪಿದ ಮುಖ್ಯಮಂತ್ರಿಗಳು ಮೊದಲಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Niramala sitharaman)​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜ್ಯದಲ್ಲಿ ಜಾರಿಯಲ್ಲಿರುವ ರೈಲ್ವೆ ಯೋಜನೆಗಳು ಹಾಗೂ ರೈಲ್ವೆ ಮೂಲಸೌಕರ್ಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಸತಿ ಸಚಿವ ವಿ ಸೋಮಣ್ಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.



    ಈ ವೇಳೆ ಮಾತನಾಡಿರುವ ಅವರು, ರಾಜ್ಯದ ರೈಲ್ವೆ ಅಭಿವೃದ್ಧಿ ಯೋಜನೆ ಬಗ್ಗೆ ಕೇಂದ್ರ ರೈಲ್ವೆ ಸಚಿವರ ಜೊತೆ ಚರ್ಚೆ ನಡೆಸಲಾಗಿದೆ. ಕಲಬುರಗಿಯಲ್ಲಿ ರೈಲ್ವೆ ಡಿವಿಜನ್ ಸ್ಥಾಪನೆಗೆ ಮನವಿ ಮಾಡಲಾಗಿದೆ. ಇದೇ ವೇಳೆ ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ ಹಾಗೂ ಬೆಂಗಳೂರು ಸರ್ಬನ್ ಯೋಜನೆಗೆ ವೇಗ ನೀಡಲು ಮನವಿ ಮಾಡಲಾಗಿದೆ. ಭಾರತ್ ನೆಟ್ ಮೂಲಕ ನೆಟ್ ವರ್ಕಿಂಗ್ ಆರಂಭಿಸಲು ಮನವಿ ಮಾಡಿದೆ. ಇದಕ್ಕೆ ಕೇಂದ್ರ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ.



    ಸಿಎಂ ಕಾರ್ಯಕ್ಕೆ ಹೈ ಕಮಾಂಡ್ ಮೆಚ್ಚುಗೆ
    ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕೆ ಎದುರಾದ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶಗಳು ಬಸವರಾಜ ಬೊಮ್ಮಾಯಿಗೆ ಸಂತಸ ತಂದಿದೆ. ಹುನ್ನಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಕಲಬುರಗಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೂ ಬಿಜೆಪಿ ಒಳ್ಳೆಯ ಸಾಧನೆ ಮಾಡಿದೆ. ಈ ಹಿನ್ನಲೆ ಹೈ ಕಮಾಂಡ್ ಕೂಡ ಬಸವರಾಜ ಬೊಮ್ಮಾಯಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನು ಓದಿ: ರಾಜ್ಯದಲ್ಲೂ ನಿಫಾ ಆತಂಕ : ಸರ್ಕಾರದಿಂದ ಸೋಂಕಿನ ಗುಣ ಲಕ್ಷಣಗಳ ಪಟ್ಟಿ ಬಿಡುಗಡೆ

    ಈ ಸಂಬಂಧ ಟ್ವೀಟ್​ ಮೂಲಕ ಸಂತಸ ವ್ಯಕ್ತಪಡಿಸಿರುವ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ನಾಯಕತ್ವದಲ್ಲಿ ಮೊದಲ ಬಾರಿಗೆ ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿರುವ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಇನ್ನು ಮುಂದೆಯೂ ಅನೇಕ ಇಂತಹ ಸಾಧನೆಗಳಿಗೆ ಬೊಮ್ಮಾಯಿ ಅವರು ಸಾಕ್ಷಿಯಾಗಲಿದ್ದಾರೆ.

    ನಾಳೆ ಹೈ ಕಮಾಂಡ್​ ಭೇಟಿ

    ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯನ್ನು ಈಗಾಗಲೇ ಬಸವರಾಜ ಬೊಮ್ಮಾಯಿ ಹೆಗಲಿಗೆ ಹೈ ಕಮಾಂಡ್​ ಹಾಕಿದೆ. ಈ ಹಿನ್ನಲೆ ಪಕ್ಷ ಸಂಘಟನೆ ಜೊತೆಗೆ ಶಾಸಕರಿಗೆ ಸಚಿವ ಸ್ಥಾನ ನೀಡುವ ಓಲೈಕೆ ಕಾರ್ಯ ಕೂಡ ನಡೆಯಬೇಕಿದೆ. ಇನ್ನೂ ಒಂದೂ ಕಾಲ ವರ್ಷ ಆಡಳಿತ ಮಾತ್ರ ಇರುವ ಹಿನ್ನಲೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಕಾರ್ಯ ನಡೆಯಬೇಕಿದೆ. ಇದೇ ಉದ್ದೇಶದಿಂದ ಸಂಪುಟ ವಿಸ್ತರಣೆಗೆ ಆದಷ್ಟು ಹಸಿರು ನಿಶಾನೆ ನೀಡುವಂತೆ ಹೈ ಕಮಾಂಡ್​ಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
    Published by:Seema R
    First published: