ನಡ್ಡ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಿಗನನ್ನೇ ಮುಖ್ಯಮಂತ್ರಿ ಮಾಡಿರುವ ಕಾರಣ, ಅವರ ಬೆಂಬಲಿಗರನ್ನೇ ಮತ್ತೆ ಸಚಿವರನ್ನಾಗಿ ಮಾಡುವುದು ಅನುಮಾನ ಎಂದು ಬಿಜೆಪಿ ಮೂಲಗಳು ಹೇಳಿವೆ. ಆದರೆ ಬಿಎಸ್​ವೈ ಪಟ್ಟು ಹಿಡಿದರೆ ಅದಕ್ಕೆ ಹೈಕಮಾಂಡ್​ ತಲೆ ಬಾಗುವುದೇ? ಯಕ್ಷ ಪ್ರಶ್ನೆಯಾಗಿ ಉಳಿದಿದೆ.

  • Share this:
ದೆಹಲಿ:  ಭಾನುವಾರ ರಾತ್ರಿ ದಿಢೀರ್ ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಭಾನುವಾರ ರಾತ್ರಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನ ಭೇಟಿ ಮಾಡಲು ಪ್ರಯತ್ನ ಮಾಡಿದ್ದರು ಆದರೆ ಭೇಟಿ ಸಾಧ್ಯವಾಗಿರಲಿಲ್ಲ, ಸೋಮವಾರವೂ ಸಹ ನಡ್ಡಾ ಅವರನ್ನ ಭೇಟಿಯಾಗಲು ಸಂಜೆ ತನಕ ಕಾದಿದ್ದ ಬೊಮ್ಮಾಯಿ ಅವರಿಗೆ ರಾತ್ರಿ ಕರೆ ಬಂದಿದ್ದು ಮೋತಿ ಲಾಲ್‌ ನೆಹರು ರಸ್ತೆಯಲ್ಲಿರುವ ನಡ್ಡಾ ಅವರ ನಿವಾಸದಲ್ಲಿ ಭೇಟಿಮಾಡಿದ್ದಾರೆ.

ಸಚಿವ ಸಂಪುಟ ಪುನರ್​ರಚನೆ ಸಂಬಂಧ ಸಂಪುಟ ಹೈಕಮಾಂಡ್ ಸೋಮವಾರ ರಾತ್ರಿಯೇ ಒಪ್ಪಿಗೆ ನೀಡುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ಸಿಎಂ ಬೊಮ್ಮಾಯಿ ತೆಗೆದುಕೊಂಡು ಹೋಗಿರುವ ಸಚಿವರ ಪಟ್ಟಿಯನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಒಂದಷ್ಟು ಜನರಿಗೆ ಕೋಕ್​ ಕೊಟ್ಟು ಒಪ್ಪಿಗೆ ನೀಡಬಹುದು ಎಂದು ಹೇಳಲಾಗುತ್ತಿದೆ.

ಸಂಪುಟ ವಿಸ್ತರಣೆಗೆ ಎಲ್ಲಾ ಕಡೆಯಿಂದಲೂ ಒತ್ತಡ ಅನುಭವಿಸುತ್ತಿರುವ ಬೊಮ್ಮಾಯಿ, ಮುಂದಿನ ಚುನಾವಣೆ ಸೇರಿದಂತೆ, ಪಕ್ಷದೊಳಗೆ ಭಿನ್ನಮತ ಬರದ ರೀತಿಯಲ್ಲಿ ತಂತ್ರ ಹೂಡಬೇಕಿದೆ. ದೆಹಲಿಗೆ ತೆಗೆದುಕೊಂಡು ಹೋಗಿರುವ ಪಟ್ಟಿಯಲ್ಲಿ ಯಾವ ಸಮುದಾಯದವರಿಗೆ ಎಷ್ಟು ಖಾತೆ ಸೇರಿದಂತೆ ಪ್ರಾದೇಶಿಕವಾಗಿ ಎಷ್ಟು ಪ್ರಾತಿನಿಧ್ಯ ನೀಡಲಾಗುತ್ತದೆ ಎನ್ನುವ ಕುರಿತೂ ಸಹ ಚರ್ಚೆಗಳು ಆರಂಭವಾಗಿದೆ. ಸಚಿವ ಸಂಪುಟ ವಿಸ್ತರಣೆಯನ್ನು ಬೊಮ್ಮಾಯಿ ಜಯಿಸಿದರೆ ಮುಂದಿನ ಅನೇಕ ಕೆಲಸಗಳು ಸುಸೂತ್ರ ಎಂದೇ ಹೆಳಬಹುದು.

ಕಳೆದ ವಾರ ದೆಹಲಿಗೆ ಸಂಭಾವ್ಯ ಸಚಿವರ ಪಟ್ಟಿ ತೆಗೆದುಕೊಂಡು ಹೋಗಿದ್ದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಯಾವುದೇ ಶುಭ ಸೂಚನೆ ದೊರೆಯದೆ ಬರಿಗೈಯಲ್ಲಿ ವಾಪಸ್ಸಾಗಿದ್ದರು. ಭಾನುವಾರ ದಿಡೀರ್​ ಎಂದು ದೆಹಲಿಗೆ ಓಡಿದ್ದ ಅವರು ಮತ್ತೊಂದು ಪಟ್ಟಿಯೊಂದಿಗೆ ಹೈಕಮಾಂಡ್​ ಮುಂದೆ ಪ್ರತ್ಯಕ್ಷರಾಗಿದ್ದಾರೆ.

ನಡ್ಡಾ ಅವರು ಸಂಪುಟ ಪಟ್ಟಿಯನ್ನ ಅಂತಿಮಗೊಳಿಸುತ್ತಿದ್ದಂತೆಯೇ ಅದನ್ನು ರಾಜ್ಯಪಾಲರಿಗೆ ರವಾನಿಸಿ, ಒಪ್ಪಿಗೆ ಪಡೆದು ಮಂಗಳವಾರದಂದೇ ಎಲ್ಲಾ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಎಷ್ಟು ಕೈಗೂಡಲಿದೆ ಎಂಬುದನ್ನು ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಿಗ್ಗೆ ಗೊತ್ತಾಗಲಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಿಗನನ್ನೇ ಮುಖ್ಯಮಂತ್ರಿ ಮಾಡಿರುವ ಕಾರಣ, ಅವರ ಬೆಂಬಲಿಗರನ್ನೇ ಮತ್ತೆ ಸಚಿವರನ್ನಾಗಿ ಮಾಡುವುದು ಅನುಮಾನ ಎಂದು ಬಿಜೆಪಿ ಮೂಲಗಳು ಹೇಳಿವೆ. ಆದರೆ ಬಿಎಸ್​ವೈ ಪಟ್ಟು ಹಿಡಿದರೆ ಅದಕ್ಕೆ ಹೈಕಮಾಂಡ್​ ತಲೆ ಬಾಗುವುದೇ? ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಇದನ್ನೂ ಓದಿ: ನಾನು ಸಂಸದನಾಗಿರುತ್ತೇನೆ ಆದರೆ ರಾಜಕೀಯದಲ್ಲಿ ಇರುವುದಿಲ್ಲ; ಯೂಟರ್ನ್​ ಹೊಡೆದ ಬಿಜೆಪಿ ಎಂಪಿ ಸುಪ್ರಿಯೋ

ಬೊಮ್ಮಾಯಿ ಕಳೆದ ವಾರ ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾದಾಗ ಸಂಪುಟ ವಿಸ್ತರಣೆಯ ಅಜೆಂಡಾವೇ ಪ್ರಮುಖವಾಗಿತ್ತು. ಆದರೆ, ಬೊಮ್ಮಾಯಿ ತೆಗೆದುಕೊಂಡು ಹೋಗಿದ್ದ ಪಟ್ಟಿಗೆ ಕೂಡಲೇ ಅನುಮತಿಸಲು ಹೈಕಮಾಂಡ್ ಹಿಂದೇಟು ಹಾಕಿತ್ತು.  ಬೊಮ್ಮಾಯಿ ಈಗ ಹೊಸ ಪಟ್ಟಿ ತೆಗೆದುಕೊಂಡು ನಡ್ಡಾ ಮುಂದೆ ಕುಳಿತಿದ್ದಾರೆ. ಇಂದು ಸಿಎಂ ಬೊಮ್ಮಾಯಿ ಅವರಿಗೆ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಬಹುದು ಎಂದು ಹೇಳಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: