ವಾರದೊಳಗೆ ಸಚಿವ ಸಂಪುಟ ರಚನೆಯಾಗಬಹುದು; ಸಿಎಂ ಬಸವರಾಜ ಬೊಮ್ಮಾಯಿ

ವಾರದೊಳಗೆ ಸಂಪುಟ ರಚನೆ ಮಾಡಬಹುದು. ಅದಕ್ಕೋಸ್ಕರ ಮತ್ತೆ ದೆಹಲಿಗೆ ಬರಬೇಕಾಗಬಹುದು, ಬರದೆಯೂ ಸಂಪುಟಕ್ಕೆ ಒಪ್ಪಿಗೆ ಸಿಗಬಹುದು.

ವಾರದೊಳಗೆ ಸಂಪುಟ ರಚನೆ ಮಾಡಬಹುದು. ಅದಕ್ಕೋಸ್ಕರ ಮತ್ತೆ ದೆಹಲಿಗೆ ಬರಬೇಕಾಗಬಹುದು, ಬರದೆಯೂ ಸಂಪುಟಕ್ಕೆ ಒಪ್ಪಿಗೆ ಸಿಗಬಹುದು.

ವಾರದೊಳಗೆ ಸಂಪುಟ ರಚನೆ ಮಾಡಬಹುದು. ಅದಕ್ಕೋಸ್ಕರ ಮತ್ತೆ ದೆಹಲಿಗೆ ಬರಬೇಕಾಗಬಹುದು, ಬರದೆಯೂ ಸಂಪುಟಕ್ಕೆ ಒಪ್ಪಿಗೆ ಸಿಗಬಹುದು.

 • Share this:
  ನವದೆಹಲಿ (ಜು. 30):  ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿ ಪ್ರಯಾಣ ನಡೆಸಿರುವ ಬಸವರಾಜ ಬೊಮ್ಮಾಯಿ ಇಂದು ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಿದ್ದಾರೆ. ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಧನ್ಯವಾದ ತಿಳಿಸಿದರು. ಇದಕ್ಕೂ ಮುನ್ನ ಅವರು, ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮುನ್ನ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೈ ಕಮಾಂಡ್​ಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ದೆಹಲಿಗೆ ಬಂದಿದ್ದು, ಅವರ ಆಶೀರ್ವಾದ ಪಡೆಯುವೆ, ಈ ಭೇಟಿ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವಿದಿಲ್ಲ ಎಂದು ಸ್ಪಷ್ಟಪಡಿಸಿದರು.

  ಪ್ರಧಾನಿ ಮೋದಿ ಭೇಟಿಯಾದ ಬಳಿಕ ಮಾತನಾಡಿದ ಸಿಎಂ, ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಮನವಿ ಮಾಡಲಾಗಿದೆ. ಕಳಸಾ ಬಂಡೂರಿ ಎಂಓಫ್ ಕ್ಲಿಯರೆನ್ಸ್ ಆಗಬೇಕು. ಅದನ್ನು ಬೇಗ ಮಾಡಿ ಎಂದು ಕೇಳಿದ್ದೇನೆ. ಮುಂದಿನ ಭೇಟಿ ವೇಳೆ ಯೋಜನೆ ಆಧರಿಸಿ ಮನವಿ ಮಾಡುತ್ತೇನೆ. ಕೇಂದ್ರದ ಯೋಜನೆಗಳನ್ನು ಪಡೆದುಕೊಳ್ಳಲು ತಂಡ ರೂಪಿಸುತ್ತೇನೆ ಎಂದರು.

  ಸಂಪುಟ ರಚನೆ ಕುರಿತು ಜೆಪಿ ನಡ್ಡಾ ಅವರ ಜೊತೆ ಚರ್ಚಿಸಿದ್ದೇನೆ. ಮತ್ತೆ ಬರಬೇಕೋ ಬೇಡವೋ ಎಂಬುದನ್ನು ತಿಳಿಸುತ್ತಾರೆ. ಕೆಲವೆ ದಿನಗಳಲ್ಲಿ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡಲಾಗುವುದು. ವಾರದೊಳಗೆ ಸಂಪುಟ ರಚನೆ ಮಾಡಬಹುದು. ಅದಕ್ಕೋಸ್ಕರ ಮತ್ತೆ ದೆಹಲಿಗೆ ಬರಬೇಕಾಗಬಹುದು, ಬರದೆಯೂ ಸಂಪುಟಕ್ಕೆ ಒಪ್ಪಿಗೆ ಸಿಗಬಹುದು.

  ಜನ ಆಡಳಿತದಲ್ಲಿ ಚುರುಕನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಆರ್ಥಿಕತೆಯೂ ಸೇರಿದಂತೆ ಹಲವು ಸಮಸ್ಯೆಗಳಿಗೆ ಅವುಗಳನ್ನು ಸಮರ್ಥವಾಗಿ ಎದುರಿಸುತ್ತೇವೆ. ಸದ್ಯಕ್ಕೆ ಕೋವಿಡ್ ಮತ್ತು ಪ್ರವಾಹದ ಬಗ್ಗೆ ಗಮನಹರಿಸುತ್ತೇವೆ. ನಂತರ ರೈತರು, ಮಹಿಳೆಯರ ಆದಾಯ ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ. ಉತ್ತಮ ಆಡಳಿತ ನೀಡಿದರೆ ಭ್ರಷ್ಟಾಚಾರ ಕಡಿಮೆ ಆಗುತ್ತದೆ. ಕೆಲಸವನ್ನು ನಿಧಾನ ಮಾಡಿದರೆ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಸದ್ಯದ ಕ್ಲಿಷ್ಟ ಪರಿಸ್ಥಿತಿಯಲ್ಲೂ ಉತ್ತಮ ಸಂಪುಟ ರಚಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವರ ಬಳಿ ಸಂಪುಟ ರಚನೆ ಬಗ್ಗೆ ಮಾರ್ಗದರ್ಶನ ಪಡೆಯಲಾಗುವುದು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವ ಹಿನ್ನಲೆ ಹೈ ಕಮಾಂಡ್​ನೊಂದಿಗೆ ಈ ಸಂಬಂಧ ಚರ್ಚೆ ನಡೆಸಲೇ ಬೇಕಾಗುತ್ತದೆ. ಈ ಬಗ್ಗೆ ನಡ್ಡಾ ಅವರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.  ಇನ್ನು ಇಂದು ಬೆಳಗ್ಗೆ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರನ್ನು ಭೇಟಿಯಾದ ಸಿಎಂ ಹಲವು ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿ ಬಸವರಾಜ ಬೊಮ್ಮಾಯಿ ಕಾರ್ಯ ನಿರ್ವಹಿಸಿರುವ ಹಿನ್ನಲೆ ಈ ಬಗ್ಗೆ ಹೆಚ್ಚಿನ ಅರಿವನ್ನು ಅವರು ಹೊಂದಿದ್ದಾರೆ. ಇದೇ ಸಂಬಂಧ ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ಯೋಜನೆಗಳ ಕುರಿತು ಅವರು ಚರ್ಚೆ ನಡೆಸಿದರು. ಈ ವೇಳೆ ಸಂಸದ ಶಿವಕುಮಾರ್​ ಉದಾಸಿ, ಉಮೇಶ್​ ಜಾಧವ್​, ಮಾಜಿ ಸಚಿವರಾದ ಆರ್​ ಅಶೋಕ್​, ಉಮೇಶ್​ ಕತ್ತಿ ಕೂಡ ಸಿಎಂ ಜೊತೆ ಹಾಜರಿದ್ದರು.  ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಸಿಎಂ ರಾಜ್ಯದ ಹಲವು ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಸಚಿವರು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರಕಾರದಿಂದ ಎಲ್ಲ ರೀತಿಯ ಸಹಕಾರದ ನೀಡುವುದಾಗಿ ತಿಳಿಸಿದ್ದಾರೆ ಎಂದರು.

  ಸಂಜೆ ರಾಜ್ಯ ಸಂಸದರೊಂದಿಗೆ ಸಿಎಂ ಸಭೆ
  ಸಂಸತ್​ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ದೆಹಲಿಗೆ ತೆರಳಿರುವ ಸಿಎಂ ಬೊಮ್ಮಾಯಿ ಇದೇ ವೇಳೆ ಸಂಸದರಿಗೆ ವಿಶೇಷ ಔತಣಕೂಟ ಆಯೋಜಿಸಿದ್ದಾರೆ. ಸಂಜೆ 7ಗಂಟೆಗೆ ಖಾಸಗಿ ಹೋಟೆಲ್​ನಲ್ಲಿ ನಡೆಯಲಿರುವ ಔತಣಕೂಟದಲ್ಲಿ ರಾಜ್ಯದ ಉತ್ತಮ ಆಡಳಿತಕ್ಕೆ ಸಂಸದರ ಸಹಕಾರವನ್ನು ಕೂಡ ಸಿಎಂ ಕೋರಲಿದ್ದಾರೆ.  ಈ ವೇಳೆ ರಾಜ್ಯದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಕೇಂದ್ರಕ್ಕೆ ತಲುಪಿಸುವ ಪ್ರಯತ್ನವನ್ನು ನಡೆಸುವಂತೆ ಸಂಸದರಿಗೆ ಮನವಿ ಮಾಡಲಿದ್ದಾರೆ
  Published by:Seema R
  First published: