Basavaraj Bommai: ಜನರಿಗೆ ಮತ್ತೊಮ್ಮೆ ‘ಕಾಮನ್ ಮ್ಯಾನ್’ ಆದ ‘ಸಿಎಂ’ ಬಸವರಾಜ ಬೊಮ್ಮಾಯಿ

ಧರಣಿ ನಿರತರ ದಿಡೀರ್ ಭೇಟಿಗೆ ಯಾವುದೇ ಮಂತ್ರಿಗಳೆ ಮುಂದಾಗುವುದಿಲ್ಲ. ಅಂಥದ್ದರಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಧರಣಿ ನಿರತರ ಭೇಟಿಗೆ ಮುಂದಾಗಿದ್ದರಿಂದ ಭದ್ರತಾ ಸಿಬ್ಬಂದಿ ಅಲರ್ಟ್​ ಆದರು. ಬಳಿಕ ನೇರವಾಗಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಬಳಿಗೆ ಸಿಎಂ ಬೊಮ್ಮಾಯಿ ತೆರಳಿದರು.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

 • Share this:
  ಬೆಂಗಳೂರು (ಮೇ 28): ‘ಸಿಎಂ’ ಅಂದ್ರೆ ನಾನು ‘ಕಾಮನ್ ಮ್ಯಾನ್’ ಎಂದು ತಮ್ಮನ್ನು ತಾವು ಕರೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದಂತೆಯೆ ಇಂದು ಮತ್ತೊಮ್ಮೆ ‘ಕಾಮನ್ (Common Man) ಮ್ಯಾನ್' ರಂತೆ ನಡೆದುಕೊಂಡಿದ್ದಾರೆ. ಅವರ ಈ ನಡೆಗೆ ನಾಡಿನ ಜನರ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ವೇದಿಕೆ ಒದಗಿಸಿದ್ದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ.  ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು (Kannada and Culture Department)  ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ಭಾಗವಹಿಸಲು ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದ ಬಳಿಕ ‘ಸಾಮಾನ್ಯ ಮನುಷ್ಯ’ನಂತೆ ನಡೆದುಕೊಂಡ ರೀತಿಗೆ ಸಾಮಾನ್ಯ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

  ಅಷ್ಟಕ್ಕೂ ಪ್ರತಿಭಟನೆಗಳನ್ನು ನಡೆಸಲೆಂದೆ ನಿಗದಿ ಆಗಿರುವ ಫ್ರೀಡಂ ಪಾರ್ಕ್​ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾಡಿದ್ದಾರೂ ಏನು? ಮುಂದಿದೆ ಸಂಪೂರ್ಣ ಮಾಹಿತಿ.

  ಪ್ರಸನ್ನಾನಂದ ಪುರಿ ಸ್ವಾಮೀಜಿ ದಿಢೀರ್ ಭೇಟಿ ಮಾಡಿದ ಸಿಎಂ ಬೊಮ್ಮಾಯಿ!

  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ ಫ್ರೀಡಂ ಪಾರ್ಕ್​ನಲ್ಲಿ ಧರಣಿ ನಿರತರ ದಿಢೀರ್ ಭೇಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾದರು. ಆಗ ಒಂದು ಕ್ಷಣ ಅವರ ಭದ್ರತಾ ಸಿಬ್ಬಂದಿ ಗಲಿಬಿಲಿಯಾಗಿದ್ದಂತು ನಿಜ. ಯಾಕೆಂದರೆ ಧರಣಿ ನಿರತರ ದಿಡೀರ್ ಭೇಟಿಗೆ ಯಾವುದೇ ಮಂತ್ರಿಗಳೆ ಮುಂದಾಗುವುದಿಲ್ಲ. ಅಂಥದ್ದರಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಧರಣಿ ನಿರತರ ಭೇಟಿಗೆ ಮುಂದಾಗಿದ್ದರಿಂದ ಭದ್ರತಾ ಸಿಬ್ಬಂದಿ ಅಲರ್ಟ್​ ಆದರು. ಬಳಿಕ ನೇರವಾಗಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಬಳಿಗೆ ಸಿಎಂ ಬೊಮ್ಮಾಯಿ ತೆರಳಿದರು.

  ಇದನ್ನೂ ಓದಿ: Land Slides: ಉತ್ತರ ಕನ್ನಡದಲ್ಲಿ ಮತ್ತೆ ಭೂ ಕುಸಿತದ ಭೀತಿ; ಈ ವರ್ಷ ಈ 5 ಪ್ರದೇಶಗಳಿಗೆ ಅಪಾಯವಂತೆ!

  ನಾನು ನಿಮ್ಮವನೇ ಅನ್ನೋದನ್ನು ಮಾತ್ರ ಹೇಳುತ್ತೇನೆ

  ಧರಣಿ ನಿರತ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ, ‘ಪರಮಪೂಜ್ಯರು ಸಮಾಜದ ಏಳಿಗೆಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರ ಸಮುದಾಯದ ಪ್ರಮುಖ ಬೇಡಿಕೆಗಳ ಬಗ್ಗೆ ಈಗಾಗಲೇ ನ್ಯಾ. ನಾಗಮೋಹನ್ ದಾಸ್ ವರದಿ ಕೊಟ್ಟಿದ್ದಾರೆ. ಜೊತೆಗೆ ಅವರ ಬೇಡಿಕೆಗಳ ಸಂಪೂರ್ಣ ಅರಿವೂ ನನಗಿದೆ. ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ವಿಧಾನಸಭೆಯಲ್ಲಿ ನಾನು ಈ ಹಿಂದೆ ಹೇಳಿದ್ದೆ. ಆದರೆ ಇರುವ ಕಾನೂನಿನಲ್ಲಿ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಏನೆಲ್ಲಾ ಕೊಡಲು ಸಾಧ್ಯವೋ? ಅದನ್ನೆಲ್ಲಾ ಖಂಡಿತವಾಗಿ ಕೊಡುತ್ತೇವೆ. ವರದಿ ಬಂದ ತಕ್ಷಣ ಶೀಘ್ರದಲ್ಲೇ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಗುರುಗಳ ಆಶೀರ್ವಾದದಿಂದ ಸಮಾಜಕ್ಕೆ ಒಳ್ಳೆಯದಾಗಬೇಕು.

  ವರದಿ ಆದ್ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸಮುದಾಯದ ಜನರ ಬದುಕಿಗೆ ಸಹಾಯ ಮಾಡುವ ಕೆಲಸವನ್ನು ಮಾಡುತ್ತೇವೆ. ಭಗವಂತ ಹೆಚ್ಚಿನ ಆರೋಗ್ಯ ಹಾಗೂ ಶಕ್ತಿಯನ್ನ ನೀಡಲಿ. ನಾನು ನಿಮ್ಮವನೇ ಅನ್ನೋದನ್ನು ಮಾತ್ರ ಹೇಳುತ್ತೇನೆ. ನಾನು ಯಾವುದೇ ಆಶ್ವಾಸನೆ ಕೊಡಲ್ಲ, ವರದಿ ನೋಡಿ ನಾನು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು. ಜೊತೆಗೆ ಧರಣಿ ನಿರತ ಪಿಎಸ್​ಐ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳನ್ನು ಸಿಎಂ ಭೇಟಿ ಮಾಡಿದ್ದು ಮತ್ತೊಂದು ವಿಶೇಷ.

  ಪಿಎಸ್​ಐ ಅಕ್ರಮ ನೇಮಕಾತಿ ಪ್ರತಿಭಟನಾ  ನಿರತರ ಭೇಟಿ!

  ಸ್ವಾಮೀಜಿಗಳ ಭೇಟಿಯ ಬಳಿಕ ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡುತ್ತಿರುವ ಅಭ್ಯರ್ಥಿಗಳನ್ನೂ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದು ವಿಶೇಷವಾಗಿತ್ತು. ಧರಣಿ ನಿರತರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ತನಿಖೆಯಾಗುವವರೆಗೂ ನೀವು ಸಮಾಧಾನವಾಗಿ ಇರಬೇಕು. ನಾನು ಈಗ ಯಾವುದೇ ಭರವಸೆಯನ್ನು ಕೊಡಲು ಆಗುವುದಿಲ್ಲ’ ಎಂದರು. ಸ್ವತಃ ಮುಖ್ಯಮಂತ್ರಿಗಳೇ ತಮ್ಮನ್ನು ಭೇಟಿ ಮಾಡಿದ್ದು ಪ್ರಾಮಾಣಿಕವಾಗಿ ಪಿಎಸ್​ಐ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

  ಮತ್ತೆ ‘ಕಾಮನ್ ಮ್ಯಾನ್’ ಆದ ‘ಸಿಎಂ’ ಬೊಮ್ಮಾಯಿ!

  ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಧರಣಿ ಸತ್ಯಾಗ್ರಹಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ವಾಲ್ಮಿಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಮಳೆ-ಗಾಳಿ-ಬಿಸಿಲು ಎನ್ನದೇ ಕಳೆದ 108ದಿನಗಳಿಂದ ಫ್ರೀಡಂ ಪಾರ್ಕ್​ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜೊತೆಗೆ ಪರೀಕ್ಷಾ ಅಕ್ರಮವಾಗಿರುವ ಪಿಎಸ್​ಐ ಪರೀಕ್ಷೆಯನ್ನು ಪ್ರಾಮಾಣಿಕಆಗಿ ಬರೆದಿರುವ ಅಭ್ಯರ್ಥಿಗಳು ಧರಣಿ ಸತ್ಯಾಗ್ರಹ ಮಾತ್ತಿದ್ದಾರೆ. ಅವರನ್ನು ಸಿಎಂ ಬೊಮ್ಮಾಯಿ ದಿಢೀರ್ ಭೇಟಿ ಮಾಡಿದ್ದಾರೆ.

  Ashwath Narayan: ಸಚಿವ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲು

  ಒಟ್ಟಾರೆ ನಾನು ಸಿಎಂ ಅಂದರೆ ‘ಕಾಮನ್ ಮ್ಯಾನ್’ (ಸಾಮಾನ್ಯ ಮನುಷ್ಯ) ಎಂದು ಕರೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ನಡೆಗೆ ನಾಡಿನ ಜನರ ಮೆಚ್ಚುಗೆ ವ್ಯಕ್ತವಾಗಿದ್ದಂತೂ ನಿಜ. ಜೊತೆಗೆ ಧರಣಿ ನಿರತದ ಬೇಡಿಕೆಗಳನ್ನು ಆದಷ್ಟು ಬೇಗ ಸರ್ಕಾರ ಈಡೇರಿಸಲಿ ಎಂಬುದು ಜನರ ಆಶಯ.

  ವರದಿ: ಅನಿಲ್ ಬಾಸೂರ್
  Published by:Pavana HS
  First published: