ನಾಳೆ ತುಮಕೂರಿಗೆ Amit Shah; ಸಿದ್ದಗಂಗಾ ಮಠದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದ ಸಿಎಂ

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಶ್ರೀಗಳ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ಪಡೆದರು. ಬಳಿಕ ಕಾರ್ಯಕ್ರಮದ ಭದ್ರತೆಯ ಕುರಿತು ಜಿಲ್ಲಾಧಿಕಾರಿ ವೈಎಸ್ ಪಾಟೀಲ್, ಎಸ್ ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಜೊತೆ ಚರ್ಚೆ ನಡೆಸಿದರು.

ಅಮಿತ್​ ಶಾ ಬೆಂಗಳೂರು ಅರಮನೆ ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಹಿನ್ನಲೆ ಅದರ ಸಿದ್ಧತೆ ಪರಿಶೀಲನೆ ನಡೆಸಿದ್ದ ಸಿಎಂ (ಫೋಟೋ; ಸಿಎಂ ಟ್ವೀಟರ್​​)

ಅಮಿತ್​ ಶಾ ಬೆಂಗಳೂರು ಅರಮನೆ ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಹಿನ್ನಲೆ ಅದರ ಸಿದ್ಧತೆ ಪರಿಶೀಲನೆ ನಡೆಸಿದ್ದ ಸಿಎಂ (ಫೋಟೋ; ಸಿಎಂ ಟ್ವೀಟರ್​​)

 • Share this:
  ತುಮಕೂರು (ಮಾ. 31):  ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ ಶ್ರೀ ಶಿವಕುಮಾರ ಸ್ವಾಮೀಜಿಯವರ (DR. Shivakumara swamiji)  115ನೇ ಜಯಂತ್ಯೋತ್ಸವದಲ್ಲಿ ಭಾಗಿಯಾಗುವ ಸಲುವಾಗಿ ನಾಳೆ ಸಿದ್ಧಗಂಗಾ ಮಠಕ್ಕೆ (Siddaganga Mutt)  ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಆಗಮಿಸುತ್ತಿದ್ದಾರೆ. ಈ ಹಿನ್ನಲೆ ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ತುಮಕೂರಿ(Tumkur)ಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ವಿಧಾನಸೌಧದಿಂದ ನೇರವಾಗಿ ತುಮಕೂರಿಗೆ ತೆರಳಿದ ಅವರು ನಾಳಿನ ಕಾರ್ಯಕ್ರಮದ ಸಿದ್ಧತೆ ವೀಕ್ಷಣೆ ಮಾಡಿದರು. ಈ ವೇಳೆ ಸಚಿವ ಮಾಧುಸ್ವಾಮಿ, ವಿ ಸೋಮಣ್ಣ ಕೂಡ ಉಪಸ್ಥಿತರಿದ್ದರು.

  ಗದ್ದುಗೆ ದರ್ಶನ ಮಾಡಿದ ಸಿಎಂ
  ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಶ್ರೀಗಳ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ಪಡೆದರು. ಬಳಿಕ ಕಾರ್ಯಕ್ರಮದ ಭದ್ರತೆಯ ಕುರಿತು ಜಿಲ್ಲಾಧಿಕಾರಿ ವೈಎಸ್ ಪಾಟೀಲ್, ಎಸ್ ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಜೊತೆ ಚರ್ಚೆ ನಡೆಸಿದರು. ಈ ವೇಳೆ ಸಿಎಂ ಅವರನ್ನು ವೇದಿಕೆ ಮೇಲೆ ನೋಡಿದ ಮಕ್ಕಳು ಹರ್ಷದಿಂದ ಜೈಕಾರ ಕೂಗಿದರು.

  ನಗರದಲ್ಲಿ ಬಿಗಿ ಬಂದೋಬಸ್ತ್​
  ಇನ್ನು ಕೇಂದರ ಗೃಹ ಸಚಿವರ ಆಗಮನ ಹಿನ್ನಲೆ ನಗರದ ಮತ್ತು ಮಠದ ಸುತ್ತ ಬಿಗಿ ಬಂದೋಬಸ್ತ್​ ನಡೆಸಲಾಗಿದೆ. ತುಮಕೂರು ವಿವಿ ಹೆಲಿಪ್ಯಾಡ್‍ನಿಂದ ಹಿಡಿದು ಸಿದ್ದಗಂಗಾ ಮಠದವರೆಗೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ಬಿಜೆಪಿ ನಾಯಕ ವಿಜಯೇಂದ್ರ ಕೂಡ ಕಳೆದೆರಡುಗಳಿಂದ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಾರ್ಯಕ್ರಮದ ಸಿದ್ದತೆ ನಡೆಸಿದ್ದಾರೆ.

  ಇದನ್ನು ಓದಿ:  ಕೊನೆಗೂ ರಾಜೀನಾಮೆ ನೀಡಿದ ಸಿ.ಎಂ ಇಬ್ರಾಹಿಂ ಮಂತ್ರಾಲಯ ದರ್ಶನ ಪಡೆಯಲಿದ್ದಾರೆ!

  ಸರ್ಕಾರದ ಹಲವು ಸಚಿವರು, ನಾಯಕರು ಭಾಗಿ
  ಇನ್ನು ನಾಳೆ ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಕೂಡ ಸಾನಿಧ್ಯವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಹ್ಲಾದ್ ಜೋಶಿ, ಭಗವಂತ್ ಖೂಬ ಸೇರಿದಂತೆ ಹಲವು ಕೇಂದ್ರ ನಾಯಕರು ಆಗಮಿಸಲಿದ್ದಾರೆ. ಸಿಎಂ ಬೊಮ್ಮಾಯಿ, ಬಿಎಸ್​​ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವು ಸಚಿವರುಗಳು ಆಗಮಿಸಲಿದ್ದಾರೆ. ಮಾಧುಸ್ವಾಮಿ, ಬಿ.ಸಿ. ನಾಗೇಶ್, ಡಾ. ಜಿ. ಪರಮೇಶ್ವರ್ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಪಕ್ಷಾತೀತವಾಗಿ ಆಗಮಿಸಲಿದ್ದಾರೆ.

  ಇದನ್ನು ಓದಿ : ಅಲ್ಲಮ ಪ್ರಭು ಜಾತ್ರೆಯಲ್ಲಿ ಹಿಂದೂ-ಮುಸ್ಲಿಂ ಸಮಾಗಮ! ರಾಜ್ಯಕ್ಕೆ ಮಾದರಿಯಾಯ್ತು ಈ ಗ್ರಾಮ

  ತುಮಕೂರು ಬಳಿಕ ಚಿಕ್ಕಬಳ್ಳಾಪುರಕ್ಕೆ ಅಮಿತ್​ ಶಾ ಪ್ರಯಾಣ
  ನಾಳೆ ತುಮಕೂರಿಗೆ 11 ಗಂಟೆ ಸುಮಾರಿಗೆ ಅಮಿತ್​ ಶಾ ಆಗಮಿಸಲಿದ್ದು, ಶ್ರೀಗಳ ಗದ್ದುಗೆ ದರ್ಶನ ಮಾಡಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಠದಲ್ಲೇ ಪ್ರಸಾದ ಸೇವಿಸಿ ಅವರು ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದಾರೆ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಸತ್ಯ ಸಾಯಿ ಆಶ್ರಮಕ್ಕೆ ಭೇಟಿ ನೀಡಿ, 400 ಬೆಡ್ ಗಳ ಸತ್ಯ ಸಾಯಿ ಸರಳಾ ಮೇಮೊರಿಯಲ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

  ಭರ್ಜರಿ ಸ್ವಾಗತಕ್ಕೆ ತಯಾರಿ

  ನಾಳಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದು ರಾತ್ರಿ  ಕೇಂದ್ರ ಗೃಹ ಸಚಿವರು ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ. ರಾತ್ರಿ 11 ಗಂಟೆಗೆ ಎಚ್​​ಎಎಲ್​​ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಲಿದ್ದಾರೆ. ಈ ಹಿನ್ನಲೆ ಅವರ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆಸಲಾಗಿದೆ. ನಗರ ರಸ್ತೆಗಳಲ್ಲಿ ಬಿಜೆಪಿ ಫ್ಲಾಗ್ ಗಳ ಅಳವಡಿಸಲಾಗಿದ್ದು, ಪ್ರಮುಖ ರಸ್ತೆ ಹಾಗೂ ಸರ್ಕಲ್ ಗಳಲ್ಲಿ ಕೇಸರಿ ಧ್ವಜ ಗಳಿಂದ ಅಲಂಕಾರ ಮಾಡುವ ಮೂಲಕ ಅವರಿಗೆ ಸ್ವಾಗತ ಕೋರಲಾಗಿದೆ.
  Published by:Seema R
  First published: