ಬೆಂಗಳೂರು: ದೇವಾಲಯದ ಲೋಕಾರ್ಪಣೆ (Temple Inauguration) ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸ್ವಾಮೀಜಿ ವಿರುದ್ಧ ವೇದಿಕೆಯಲ್ಲೇ ಸಿಡಿಮಿಡಿಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ (Bengaluru) ಗರುಡಾಚಾರ್ ಪಾಳ್ಯದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ (Manjunath Swami Temple) ಲೋಕಾರ್ಪಣೆ ವೇಳೆ ಕಾಗಿನೆಲೆಯ ಈಶ್ವರಾನಂದಪುರಿ ಸ್ವಾಮೀಜಿ (Kaginele Eshwanandapuri swami) ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.
ಹೌದು.. ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಇರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಲೋಕಾರ್ಪಣೆ ಸಂದರ್ಭದಲ್ಲಿ ವೇದಿಕೆಯಲ್ಲಿ ಹಾಜರಿದ್ದ ಕಾಗಿನೆಲೆಯ ಈಶ್ವರಾನಂದಪುರಿ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿವೃದ್ಧಿ ವಿಚಾರದಲ್ಲಿ ಟಾಂಗ್ ನೀಡಿದ್ದರು. ನೀವು ಬೆಂಗಳೂರಿನ ಪ್ರವಾಹಕ್ಕೆ ಕೇವಲ ಆಶ್ವಾಸನೆ ಕೊಡುವ ಮುಖ್ಯಮಂತ್ರಿ ಆಗಬಾರದು ಎಂದು ಹೇಳಿದ್ದರು. ಈ ವೇಳೆ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಕಾಗಿನೆಲೆ ಸ್ವಾಮೀಜಿ ವಿರುದ್ಧ ಗರಂ ಆಗಿದ್ದಾರೆ.
ಸ್ವಾಮೀಜಿ ಕೈಯಿಂದ ಮೈಕ್ ಕಸಿದ ಸಿಎಂ ಬೊಮ್ಮಾಯಿ!
ಗರುಡಾಚಾರ್ ಪಾಳ್ಯದಲ್ಲಿ ಇರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಖಾರವಾಗಿ ಕಾಗಿನೆಲೆಯ ಈಶ್ವರಾನಂದಪುರಿ ಸ್ವಾಮೀಜಿ ಅವರು ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ, ನೀವು ಬೆಂಗಳೂರಿನ ಪ್ರವಾಹಕ್ಕೆ ಕೇವಲ ಆಶ್ವಾಸನೆ ಕೊಡುವ ಮುಖ್ಯಮಂತ್ರಿ ಆಗಬಾರದು ಎಂದು ಹೇಳಿದರು. ಈ ವೇಳೆ ಸಿಟ್ಟುಗೊಂಡ ಬೊಮ್ಮಾಯಿ ಅವರು ಸ್ವಾಮೀಜಿ ಕೈಯಿಂದ ಮೈಕ್ ಕಸಿದುಕೊಂಡು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ನಾನು ಆಶ್ವಾಸನೆ ಕೊಡುವ ಮುಖ್ಯಮಂತ್ರಿಯಲ್ಲ, ಹೇಳಿದ ರೀತಿಯೇ ನಡೆದುಕೊಳ್ಳುವ ಮುಖ್ಯಮಂತ್ರಿ ಎಂದು ಗರಂ ಆಗಿಯೇ ಬೊಮ್ಮಾಯಿ ಉತ್ತರಿಸಿದರು.
ಬೃಹತ್ ರಾಷ್ಟ್ರಧ್ವಜ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಗಣರಾಜ್ಯೋತ್ಸವದ ಹಿನ್ನೆಲೆ ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ 24×36 ಅಡಿ ಅಗಲದ ರಾಷ್ಟ್ರಧ್ವಜವನ್ನು ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು. ಗಣರಾಜ್ಯೋತ್ಸವ ಹಿನ್ನೆಲೆ ತಯಾರು ಮಾಡಲಾಗಿದ್ದ ಈ ಬೃಹತ್ ರಾಷ್ಟ್ರ ಧ್ವಜದ ಉದ್ಘಾಟನೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಸ್ಥಳೀಯ ಶಾಸಕ ಅಹ್ಮದ್ ಹ್ಯಾರೀಸ್ ಅವರೂ ಭಾಗಿಯಾಗಿದ್ದರು.
ರಾಷ್ಟ್ರಗೀತೆ ಹಾಡುವಾಗಲೂ ಯಡವಟ್ಟು!
ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ 24×36 ಅಡಿ ಅಗಲದ ರಾಷ್ಟ್ರಧ್ವಜ ಉದ್ಘಾಟನೆ ವೇಳೆ ಆಯೋಜಕರಿಂದ ಯಡವಟ್ಟು ಆಗಿದ್ದು ಒಂದೆಡೆಯಾದರೆ ಅದೇ ವೇದಿಕೆಯಲ್ಲಿ ರಾಷ್ಟ್ರಗೀತೆ ಹಾಡುವಾಗಲೂ ಯಡವಟ್ಟು ಆಗಿದ ಪ್ರಸಂಗವೂ ಜರುಗಿದೆ. ರಾಷ್ಟ್ರ ಧ್ವಜಕ್ಕೆ ಸರಿಯಾಗಿ ಹಗ್ಗ ಕಟ್ಟದೇ ಇದ್ದುದರಿಂದ ಧ್ವಜದ ಗಂಟು ಬಿಚ್ಚಿ ಕೊಳ್ಳದೆ ಧ್ವಜ ಹಾರಲಿಲ್ಲ. ಹೀಗಾಗಿ ಬಹಳ ಹೊತ್ತು ಧ್ವಜ ಹಾರಲಿಲ್ಲ. ಸುಮಾರು 15 ನಿಮಿಷಗಳ ಕಾಲ ಧ್ವಜ ಹಾರಿಸಲು ಸಿಎಂ ಬೊಮ್ಮಾಯಿ ಮತ್ತು ಶಾಸಕ ಹ್ಯಾರೀಸ್ ಕಸರತ್ತು ನಡೆಸಿದರು. ಬಳಿಕ ಅದೇ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೂ ಅಪಮಾನ ಮಾಡಲಾಗಿದ್ದು, ಒಮ್ಮೆ ರಾಷ್ಟ್ರಗೀತೆ ಶುರುವಾಗಿ ಮೊಟಕುಗೊಳಿಸಿ ಬಳಿಕ ಎರಡನೇ ಸಲ ಪೂರ್ಣ ರಾಷ್ಟ್ರಗೀತೆ ಹಾಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ