Basavaraja Bommai: ಕೆಎಂಎಫ್​ನಿಂದ ಹಾಲು ಉತ್ಪಾದಕರ ಬ್ಯಾಂಕ್ ತೆರೆಯಲು ಸಿಎಂ ಬಸವರಾಜ ಬೊಮ್ಮಾಯಿ ಸಲಹೆ

ಹಾಲಿನ ದರ ಹೆಚ್ಚಳ ಮಾಡುವ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈ ಕುರಿತು ನಾನು ಯಾವುದೇ ಆಶ್ವಾಸನೆ ಕೊಡುವುದಿಲ್ಲ. ಕೊಡಲು ಬರುವುದಿಲ್ಲ. ನಾಯಕರಾದ ಯಡಿಯೂರಪ್ಪ ಪ್ರೋತ್ಸಾಹ ಧನ ನೀಡಿದ್ದರು. ಕೋವಿಡ್ ಸಂದರ್ಭದಲ್ಲಿ 1250 ಕೋಟಿ ಸಹಾಯ ಮಾಡಲಾಗಿದೆ ಎಂದರು.

ಬಸವರಾಜ ಬೊಮ್ಮಾಯಿ.

ಬಸವರಾಜ ಬೊಮ್ಮಾಯಿ.

 • Share this:
  ಬೆಂಗಳೂರು: ರೈತ ಕುಟುಂಬ ಕೃಷಿ ಹೊರತಾಗಿ ಹೈನುಗಾರಿಕೆಯಲ್ಲಿ (Dairy Farm) ಕಾರ್ಯ ಮಾಡುತ್ತಿದ್ದಾರೆ. ಕೆಎಂಎಫ್ (KMF) ರೈತರ ಪರವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಹಕಾರಿ ಸಂಸ್ಥೆಗಳು ಶ್ರೀಮಂತಗೊಳ್ಳಬೇಕು. ಅದರಲ್ಲಿ ಕೆಲವರು ಮಾತ್ರ ಶ್ರೀಮಂತಗೊಳ್ಳುವುದು ನಮಗೆ ಬೇಕಾಗಿಲ್ಲ. ಸಹಕಾರ ಕ್ಷೇತ್ರದ ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಬೇಕಿದೆ. ಹಾಲು ಉತ್ಪಾದಕರ ಬ್ಯಾಂಕ್ (Milk Producer Bank) ತೆರೆಯಿರಿ. ಇದು ನನ್ನ ಹಾಗೂ ಸಚಿವ ಸತೀಶ್ ಮನದಾಸೆಯಿದೆ. ಈಗಾಗಲೇ ಕೆಎಂಎಫ್ ಗೆ ಎಲ್ಲ ಅರ್ಹತೆಯಿದೆ. ಈ ಕುರಿತು ಮುಂದೆ ಕಾರ್ಯೋನ್ಮುಖರಾಗಿ. ಆಗ ಸರ್ಕಾರಕ್ಕೆ ಪದೇ ಪದೇ ಅನುದಾನ ಕೇಳುವುದು ತಪ್ಪುತ್ತದೆ. ಈ ರೀತಿ ಮಾಡಿದರೆ 100 ಕೋಟಿ ಕ್ಯಾಪಿಟಲ್ ಸರ್ಕಾರ ನೀಡಲಾಗುತ್ತದೆ ಎಂದು ಕೆಎಂಎಎಫ್​ಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಸಲಹೆ ನೀಡಿದರು.

  ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ವತಿಯಿಂದ ಆಯೋಜಿಸಿರುವ ಕರ್ನಾಟಕ ಹಾಲು ಮಹಾಮಂಡಳದ ಸಾಮೂಹಿಕ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲಾಗುವುದು. ಆರಂಭಕ್ಕೆ ಬೇಕಾದ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ. ನಿರ್ವಹಣೆಯನ್ನು ಪಶುಸಂಗೋಪನೆ ಇಲಾಖೆ ನೋಡಿಕೊಳ್ಳಬೇಕು.
  No profit no loss ರೀತಿ ಕಾರ್ಯ ನಿರ್ವಹಿಸಬೇಕು. ಗೋಶಾಲೆ ಪುಣ್ಯದ ಕೆಲಸ ಅದನ್ನು ನಾವೆಲ್ಲ ಸೇರಿ ಮಾಡಬೇಕು. ಯಾವ ಜಿಲ್ಲೆಯಲ್ಲಿ ನೀರಾವರಿ, ಹಸಿರು ಇದೆ ಅಲ್ಲಿ ಗೋವುಗಳನ್ನು ಹೆಚ್ಚು ರೈತರಿಗೆ ನೀಡಲಾಗುವುದು. ಕೇಂದ್ರ ಹಾಗು ರಾಜ್ಯ ಸರ್ಕಾರ ಹೊಸ ಯೋಜನೆಗಳನ್ನು ಮುಂದೆ ಆರಂಭಿಸಲಾಗುವುದು ಎಂದರು.

  ಹಾಲಿನ ದರ ಹೆಚ್ಚಳ ಮಾಡುವ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈ ಕುರಿತು ನಾನು ಯಾವುದೇ ಆಶ್ವಾಸನೆ ಕೊಡುವುದಿಲ್ಲ. ಕೊಡಲು ಬರುವುದಿಲ್ಲ. ನಾಯಕರಾದ ಯಡಿಯೂರಪ್ಪ ಪ್ರೋತ್ಸಾಹ ಧನ ನೀಡಿದ್ದರು. ಕೋವಿಡ್ ಸಂದರ್ಭದಲ್ಲಿ 1250 ಕೋಟಿ ಸಹಾಯ ಮಾಡಲಾಗಿದೆ. ಇದಕ್ಕೆ ಬಿಎಸ್ ವೈ ಗೆ ಅಭಾರಿಯಾಗಿದ್ದೇನೆ. ಬಿಎಸ್ ವೈ ಅವರ ಯೋಜನೆ ಮುಂದುವರೆಸಲಾಗುವುದು. ಕೆಎಂಎಫ್ ಗೆ ಈ ವರ್ಷ 50 ಕೋಟಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.

  ಸಿಎಂ ಪರಿಹಾರ ನಿಧಿಗೆ 54 ಕೋಟಿ ರೂ. ಕೊಡುಗೆ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

  ಸಹಕಾರ ಸಚಿವ ಎಸ್.ಟಿ‌. ಸೋಮಶೇಖರ್ ಮಾತನಾಡಿ, ಸಿಎಂ‌ ಪರಿಹಾರ ನಿಧಿಗೆ 54 ಕೋಟಿ‌ ಕೆಎಂಎಫ್ ನಿಂದ ಕೋವಿಡ್ ಸಮಯದಲ್ಲಿ ನೀಡಿದ್ದೇವೆ. ಎರಡು ಕೋಟಿ 11 ಲಕ್ಷ ಜನರಿಗೆ ಉಚಿತವಾಗಿ ಹಾಲು ವಿತರಣೆ ಮಾಡಿದ್ದೇವೆ. ಕೆಎಂಎಫ್ ಹಾಗೂ ಮಿಲ್ಕ್ ಯೂನಿಯನ್ ಕಷ್ಟದ ಸಮಯದಲ್ಲಿ ಜನರ ಜತೆ ನಿಂತಿವೆ. ಮುಂದೆಯೂ ಜನರ ಜೊತೆಗೆ ಇರಲಿದೆ ಎಂಬುದನ್ನು ಮಾಜಿ ಸಿಎಂ ಬಿಎಸ್‌ವೈ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

  ಇದನ್ನು ಓದಿ: H Vishwanath: ಸಿದ್ದರಾಮಯ್ಯರನ್ನು ಕುರುಬರ ಸಮಾವೇಶಗಳಿಂದ ದೂರ ಇಟ್ಟಿಲ್ಲ, ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು; ಎಚ್. ವಿಶ್ವನಾಥ್

  ಸಿಎಂ ಉದ್ಘಾಟಿಸಿದ ಕೆಎಂಎಫ್ ಸಾಮೂಹಿಕ ಯೋಜನೆಗಳು

  1. ನಂದಿನಿ ಹೈಟೆಕ್ ಮೆಗಾ ಹಾಲಿನ ಪುಡಿ ಉತ್ಪಾದನಾ ಘಟಕ
  2. ಧಾರವಾಡದಲ್ಲಿ ಪಶು ಆಹಾರ ಉತ್ಪಾದನಾ ಘಟಕ -2
  3. ಗುಬ್ಬಿಯಲ್ಲಿ ಪಶು ಆಹಾರ ಉತ್ಪಾದನಾ ಘಟಕ -2
  4. ಹೆಸರುಘಟ್ಟದಲ್ಲಿ ಹೈಟೆಕ್ ಬುಲ್ ಮದರ್ ಫಾರಂ ಮತ್ತು ಮೇವು ಅಭಿವೃದ್ದಿ ಕೇಂದ್ರ
  5. ಬೆಂಗಳೂರಿನಲ್ಲಿ ರಾಜ್ಯ ಕೇಂದ್ರೀಯ ಪ್ರಯೋಗಾಲಯ
  6. ಕಲಬುರ್ಗಿ ಕೆ ಎಂಎಫ್ ತರಬೇತಿ ಕೇಂದ್ರ
  7. ಹಾಸನ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ದಿ ಕಾಮಗಾರಿಗಳು
  8. ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ದಿ ಕಾಮಗಾರಿಗಳು
  9. ಶಿಕಾರಿಪುರ ಪಶು ಆಹಾರ ಘಟಕದಲ್ಲಿ ಕಾಕಂಬಿ ಶೇಖರಣಾ ಟ್ಯಾಂಕ್

  ಕಾರ್ಯಕ್ರಮದಲ್ಲಿ ಪಶುಸಂಗೋಪನ ಸಚಿವ ಪ್ರಭು ಚೌಹಾಣ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ, ಕೆಎಂ‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದ ಉಮೇಶ್ ಜಾಧವ್ ಮತ್ತು ಇತರರು ಉಪಸ್ಥಿತರಿದ್ದರು.
  Published by:HR Ramesh
  First published: