ಪಟ್ಟು ಬಿಡದೆ ಪಾದಯಾತ್ರೆಗೆ ಮುಂದಾಗಿರುವ Congress ನಾಯಕರಿಗೆ ಮೃದುವಾಗೇ ವಾರ್ನಿಂಗ್ ಕೊಟ್ಟ CM

ಕೊರೋನಾ ಎಲ್ಲರಿಗೂ ಒಂದೇ ಅಲ್ವಾ, ಅದೇನು ಪಕ್ಷ ಆಧಾರಿತವಾಗಿ ಬರುತ್ತಾ.? ಕೊರೋನಾ ನಿಯಮಗಳನ್ನು ಪಾಲಿಸಬೇಕು ಎನ್ನುವುದೇ ನನ್ನ ಅಪೇಕ್ಷೆ. ಕಾನೂನು ಪಾಲಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಸಿಎಂ, ಡಿಕೆಶಿ

ಸಿಎಂ, ಡಿಕೆಶಿ

  • Share this:
ಮಂಡ್ಯ: ನಿನ್ನೆಯಷ್ಟೇ ರಾಜ್ಯ ಸರ್ಕಾರ ಕೋವಿಡ್​ ಕಠಿಣ ನಿಯಮಗಳನ್ನು (Covid Guidelines) ಜಾರಿಗೆ ತಂದಿದ್ದು, ಇದಕ್ಕೆ ಕಾಂಗ್ರೆಸ್​​ Congress ಆಕ್ರೋಶ ವ್ಯಕ್ತಪಡಿಸಿದೆ. ಮೇಕೆದಾಟು ಪಾದಯಾತ್ರೆ (Mekedatu Padaytre) ಹತ್ತಿಕ್ಕುವ ಸಲುವಾಗಿಯೇ ನಿಯಮಗಳನ್ನು ತಂದಿದ್ದಾರೆ ಎಂದು ಕೈ ನಾಯಕರು ಟೀಕಿಸಿದ್ದರು. ಇದಕ್ಕೆ ಸಿಎಂ ಬಸವರಾಜ ಬೊಮ್ಮಯಿ (CM Basavaraj Bommai) ತಿರುಗೇಟು ಕೊಟ್ಟಿದ್ದಾರೆ. ಪಾದಯಾತ್ರೆ ಮಾಡೇ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ನಾಯಕರ ವಿರುದ್ಧ ನಾಗಮಂಗಲ ತಾಲೂಕಿನ ಬಿಜಿ ನಗರದಲ್ಲಿ ಸಿಎಂ ಕಿಡಿಕಾರಿಸರು. ಕೊರೋನಾ ಎಲ್ಲರಿಗೂ ಒಂದೇ ಅಲ್ವಾ, ಅದೇನು ಪಕ್ಷ ಆಧಾರಿತವಾಗಿ ಬರುತ್ತಾ.? ಕೊರೋನಾ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ, ಹೆಚ್ಚಾಗುತ್ತಿರುವಾಗ ಸರ್ಕಾರದ ಕರ್ತವ್ಯ ಇರುತ್ತದೆ. ಹಿಂದಿನ ಎರಡು ಅಲೆಯ ಅನುಭವದಿಂದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಆ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಕೊರೋನಾಕ್ಕಾಗಿಯೇ ಒಂದು ಕಾನೂನು ಇದೆ. ಆ ಕಾನೂನು ಅನ್ವಯ ಅನುಸರಿಸಬೇಕು ಎಂದು ಮಾತಿನಲ್ಲೇ ಚಾಟಿ ಬೀಸಿದರು.

ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ

ವಿರೋಧ ಪಕ್ಷಕ್ಕೂ ತನದೇ ಆದ ಕರ್ತವ್ಯ ಇದೆ. ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಡೆದುಕೊಳ್ಳಬೇಕೆಂಬ ಅಪೇಕ್ಷೆ ನನಗೆ ಇದೆ. ಇಲ್ಲ ನಾವು ಹೀಗೆ ನಡೆದುಕೊಳ್ಳುತ್ತೇವೆ ಎಂದರೆ ಜನರು ಗಮನಿಸುತ್ತಾರೆ. ಕೊರೋನಾ ನಿಯಂತ್ರಣ ಆಗಬೇಕು, ಆ ಮೇಲೆ ಕೂತು ಮಾತನಾಡಬಹುದು. ಎಲ್ಲರಿಗೂ ತನ್ನದೇ ಆದ ಜವಾಬ್ದಾರಿ ಇದೆ, ವಿಶೇಷವಾಗಿ ರಾಜಕೀಯ ಪಕ್ಷಗಳಿಗೆ ಜವಾಬ್ದಾರಿ ಇದೆ. ಹಿಂದೆ ಅವರು ಸರ್ಕಾರ ನಡೆಸಿದ್ದಾರೆ, ಅವರು ಕಾನೂನುಗಳನ್ನು ತಂದಿದ್ದಾರೆ. ಕೊರೋನಾ ನಿಯಮಗಳನ್ನು ಪಾಲಿಸಬೇಕು ಎನ್ನುವುದೇ ನನ್ನ ಅಪೇಕ್ಷೆ. ಕಾನೂನು ಪಾಲಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಇದನ್ನೂ ಓದಿ: ನೀರಿಗೋಸ್ಕರ ನಡೆಯುತ್ತೇನೆ, ಇವರಿಗೆ ಪಕ್ಷ ಮುಖ್ಯವೇ ಹೊರತು ಜನರ ಪ್ರಾಣ ಅಲ್ಲ: DK Shivkumar

ಕೊರೋನಾ ಷಡ್ಯಂತ್ರನಾ? ಇದು ಕೇವಲ ಕರ್ನಾಟಕದಲ್ಲಿ ಮಾತ್ರ ಹೆಚ್ಚಾಗುತ್ತಿಲ್ಲ. ಎಲ್ಲಾ ರಾಜ್ಯದಲ್ಲೂ ಕೊರೋನಾ ಹೆಚ್ಚಾಗುತ್ತಿದೆ. ಒಂದಷ್ಟು ನಿಯಮಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಅವುಗಳನ್ನು ಎಲ್ಲರೂ ಅನುಸರಿಬೇಕು ಎಂದರು.

ಡಿಕೆಶಿಗೆ ಟ್ವೀಟ್​ ಮೂಲಕ ತಿರುಗೇಟು

ಇನ್ನು ಇದು ಕೊರೊನಾ ಲಾಕ್​​ಡೌನ್​ ಅಲ್ಲ, ಬಿಜೆಪಿ ಲಾಕ್​ಡೌನ್​ ಎಂದು ಟೀಕಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಬಿಜೆಪಿ ಟ್ವೀಟ್​ ಮೂಲಕ ಪ್ರತ್ಯುತ್ತರ ಕೊಟ್ಟಿದೆ. ಬಿಜೆಪಿ ಸರ್ಕಾರಕ್ಕೆ ಲಾಕ್‌ಡೌನ್ ಅಗತ್ಯವಿಲ್ಲ.‌ ಜನಸಾಮಾನ್ಯರ ಆರೋಗ್ಯ ರಕ್ಷಣೆಯೇ ನಮ್ಮ ಸರ್ಕಾರದ ಆದ್ಯತೆ. ಮೊದಲನೇ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಲು ಆಗ್ರಹಿಸಿ ನೀವು ಆಡಿದ ಮಾತುಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ನೀರಿಗಾಗಿ ನಡಿಗೆ..!? ಭಾರೀ ಸೋಜಿಗದ ಸಂಗತಿ. ಡಿಕೆಶಿ ಅವರೇ, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಈ ಹಿಂದೆ ನೀವು ಮಾಡಿದ್ದು ನೀರಿನ ನಡಿಗೆಯಲ್ಲವೇ? ಫಲಿತಾಂಶವೇನು? ಎಂದು ಟ್ವೀಟ್​ ಮೂಲಕ ಪ್ರಶ್ನಿಸಿದೆ.

ಪಟ್ಟು ಬಿಡದ ‘ಕನಕಪುರ ಬಂಡೆ’

ನಿಗಧಿಯಾಗಿರುವ ಪಾದಯಾತ್ರೆ ದಿನಾಂಕ ಬದಲಾಗಲ್ಲ. ಎಲ್ಲ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ನಾವು ಪಾದಯಾತ್ರೆ ಮಾಡುತ್ತೇವೆ. ನಾವು ಮಾತ್ರ ಓಡಾಡೋದು ಇವರಿಗೆ ಕಾಣಿಸುತ್ತಾ? ಬೇರೆ ಯಾರೂ ಓಡೋಡಾದು ಇವರಿಗೆ ಕಾಣಲ್ವಾ ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ನಾನು ಪಾದಯಾತ್ರೆ ಯಾಕೆ ಅಂತ ಕರೀತಿರಿ. ನಾನು ನೀರಿಗಾಗಿ ನಡೆಯುತ್ತಿದ್ದೇವೆ. ಕಾವೇರಿ ತಾಯಿಯ ನೀರನ್ನು ಬೆಂಗಳೂರಿಗೆ ತರಲು ನಡೆಯುತ್ತಿದ್ದೇವೆ . ಆ ನೀರನ್ನು ತರಬೇಕು ಅನ್ನೋದು ನಮ್ಮ ಉದ್ದೇಶ. ಆ ನೀರನ್ನು ಇವರಿಗೂ ಸಹ ಕುಡಿಸುತ್ತೇವೆ. ನಾನು ಮೆರವಣಿಗೆ, ಧರಣಿ ಯಾವುದನ್ನೂ ಮಾಡಲ್ಲ. ನೀರಿಗಾಗಿ ನಡೆಯುತ್ತಿದ್ದೇವೆ ಎಂದು ಹೇಳಿದರು. ವೀಕೆಂಡ್ ಕರ್ಫ್ಯೂ ನೋಟಿಸ್ ನಮಗೂ ಬಂದಿದೆ. ಅದನ್ನು ನಾನು ಗಮನಿಸುತ್ತಿದ್ದೇನೆ. ಬೆಂಗಳೂರಿನ ನಡಿಗೆ ಉಸ್ತುವಾರಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರು ತೆಗೆದುಕೊಂಡಿದ್ದಾರೆ. ನಾನು ಬೆಂಗಳೂರಿನ ಶಾಸಕರು ಮತ್ತು ವಿಪಕ್ಷ ನಾಯಕರ ಜೊತೆ ಈ ಕುರಿತು ಮಾತನಾಡುತ್ತೇನೆ ಎಂದರು.
Published by:Kavya V
First published: