• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • CM Visit: ಮಳೆ ಹಾನಿ ಪ್ರದೇಶಗಳಿಗೆ ಬಸವರಾಜ ಬೊಮ್ಮಾಯಿ ವಿಸಿಟ್; ಅತ್ತ ಎಚ್‌ಡಿಕೆ ಪ್ರತ್ಯೇಕ ಭೇಟಿ

CM Visit: ಮಳೆ ಹಾನಿ ಪ್ರದೇಶಗಳಿಗೆ ಬಸವರಾಜ ಬೊಮ್ಮಾಯಿ ವಿಸಿಟ್; ಅತ್ತ ಎಚ್‌ಡಿಕೆ ಪ್ರತ್ಯೇಕ ಭೇಟಿ

ನೆರೆಪೀಡಿತ ಪ್ರದೇಶಗಳಿಗೆ 
ನಿನ್ನೆ ಭೇಟಿ ನೀಡಿದ್ದ ಸಿಎಂ

ನೆರೆಪೀಡಿತ ಪ್ರದೇಶಗಳಿಗೆ ನಿನ್ನೆ ಭೇಟಿ ನೀಡಿದ್ದ ಸಿಎಂ

ಸಿಎಂ ಬಸವರಾಜ ಬೊಮ್ಮಾಯಿ ಮಳೆ ಹಾನಿ ಪ್ರದೇಶಗಳಿಗೆ ಇಂದೂ ಕೂಡ ಭೇಟಿ ನೀಡಿದ್ರು. ಈ ವೇಳೆ ಸ್ಥಳೀಯ ನಿವಾಸಿಗಳ ಸಮಸ್ಯೆ ಆಲಿಸಿದ ಸಿಎಂ, ಸಮಸ್ಯೆಗಳನ್ನು ಬಗೆ ಹರಿಸುವಂತೆ ಇಂಜಿನಿಯರ್​ಗಳಿಗೆ ಸೂಚನೆ ನೀಡಿದ್ರು. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೂಡ ಪ್ರತ್ಯೇಕವಾಗಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು.

ಮುಂದೆ ಓದಿ ...
  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಜನರಿಗೆ ಮಳೆ (Rain) ಇಂದು ಕೊಂಚ ಬಿಡುವು (Break) ನೀಡಿದೆ. ಆದರೂ ಮೋಡ ಕವಿದ ವಾತಾವರಣದ ಜೊತೆ ಚಳಿ ಗಾಳಿ ಮುಂದುವರೆದಿದೆ. ಇನ್ನು ಮಳೆ ನಿಂತರೂ ಅವರಿಂದ ಉಂಟಾದ ಅವಾಂತರಗಳು ಮುಂದುವರೆದಿದೆ. ಹಲವು ಕಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ಕೊಳಚೆ ನೀರು (Drainage Water) ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಮಳೆ ಹಾನಿ ಪ್ರದೇಶಗಳಿಗೆ ಇಂದು ಭೇಟಿ (Visit) ನೀಡಿದ್ರು. ಈ ವೇಳೆ ಸ್ಥಳೀಯ ನಿವಾಸಿಗಳ ಸಮಸ್ಯೆ (Problems) ಆಲಿಸಿದ ಸಿಎಂ, ಸಮಸ್ಯೆಗಳನ್ನು ಬಗೆ ಹರಿಸುವಂತೆ ಇಂಜಿನಿಯರ್​ಗಳಿಗೆ (Engineers) ಸೂಚನೆ ನೀಡಿದ್ರು. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಕೂಡ ಪ್ರತ್ಯೇಕವಾಗಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು.


ಇಂದೂ ಮುಂದುವರೆದ ಸಿಎಂ ಸಿಟಿ ರೌಂಡ್ಸ್


ರಾಜಧಾನಿಯಲ್ಲಿ ಮಳೆ ಅವಾಂತರ ಹಿನ್ನಲೆ ಇಂದು ಕೂಡಾ ಸಿಎಂ ಸಿಟಿ ರೌಂಡ್ಸ್ ಹೊಡೆದರು. ರಾಮಮೂರ್ತಿ ನಗರ, ಹೊರಮಾವು ಶ್ರೀಸಾಯಿ ಲೇಔಟ್ ಸೇರಿದಂತೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ಸ್ಥಳೀಯರ ಸಮಸ್ಯೆ ಆಲಿಸಿದ್ರು. ಈ ವೇಳೆ  ಅಧಿಕಾರಿಗಳ ಬಳಿ ಸಿಎಂ ಮಾಹಿತಿ ಪಡೆದ್ರು.


ಮಳೆ ಹಾನಿ ತಡೆಗೆ ಟಾಸ್ಕ್ ಫೋರ್ಸ್ ರಚನೆ


ಬೆಂಗಳೂರಿನ ಕೆಆರ್ ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಾದ ರಾಮಮೂರ್ತಿ ನಗರದ ನಾಗಪ್ಪ‌ ಬಡಾವಣೆ ಭೇಟಿಗೆ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಗರದ ಎಂಟು ಝೋನ್‌ಗಳ ಪೈಕಿ ಒಂದೊಂದು ಝೋನ್‌ಗೆ ಒಂದೊಂದು ಟಾಸ್ಕ್‌ ಫೋರ್ಸ್ ರಚನೆ ಮಾಡಲಾಗುವುದು ಎಂದರು. ಟಾಸ್ಕ್‌ ಫೋರ್ಸ್‌ಗೆ ಒಬ್ಬ ಸಚಿವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುವುದು. ಶಾಸಕರು, ಎಂಪಿಗಳು ಸದಸ್ಯರಾಗಿರುತ್ತಾರೆ. ಇಂಜಿನಿಯರ್ , ಜಂಟಿ ಆಯುಕ್ತರು ಇರುತ್ತಾರೆ ಎಂದು ತಿಳಿಸಿದರು.ಅಭಿವೃದ್ದಿ ಕೆಲಸ, ಹಾಗೂ ನೆರೆ ಬಂದಾಗ ಕೂಡಲೇ ಕ್ರಮ ಕೈಗೊಳ್ಳಲು ಟಾಸ್ಕ್‌ ಫೋರ್ಸ್‌ ರಚನೆ ಮಾಡುವುದು ಉದ್ದೇಶವಾಗಿದೆ ಅಂತ ಮಾಹಿತಿ ನೀಡಿದರು.


ಇದನ್ನೂ ಓದಿ: Land Slides: ಉತ್ತರ ಕನ್ನಡದಲ್ಲಿ ಮತ್ತೆ ಭೂ ಕುಸಿತದ ಭೀತಿ; ಈ ವರ್ಷ ಈ 5 ಪ್ರದೇಶಗಳಿಗೆ ಅಪಾಯವಂತೆ!


ಸಿಎಂ ವಿರುದ್ದ ಸ್ಥಳೀಯರ ಆಕ್ರೋಶ


ಕೆಆರ್‌ ಪುರಂ ವ್ಯಾಪ್ತಿಯಲ್ಲಿ ಭೇಟಿ ನೀಡಿದ ವೇಳೆ ಕೆಲ ಏರಿಯಾಗಳಲ್ಲಿ ನಮ್ಮ ಸಮಸ್ಯೆ ಕೇಳಿಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ರು. ಏರಿಯಾಗೆ ಬಂದ ಐದೇ ನಿಮಿಷದಲ್ಲಿ ಹೊರಟರು. ಮುಖ್ಯದ್ವಾರದ ಬಳಿಯೇ ನಿಂತು ಅಧಿಕಾರಿಗಳ ಬಳಿ ಮಾಹಿತಿ ಪಡೆದು ಸಿಎಂ ವಾಪಸ್ ಹೊರಟ್ರು. ಇದರಿಂದ ಸಿಎಂಗಾಗಿ ಕಾಯ್ತಿದ್ದ ಜನರಿಗೆ ನಿರಾಸೆಯಾಯ್ತು. ಸಿಎಂ ಕೇವಲ ಕಾಟಾಚಾರಕ್ಕೆ ಭೇಟಿ ಕೊಟ್ರು, ನಮ್ಮ ಅಹವಾಲು ಕೇಳಲಿಲ್ಲ, ಒಳಗೆ ಬಂದು ಏನೆಂದು ಪರಿಸ್ಥಿತಿ ನೋಡಲಿಲ್ಲ, ರಸ್ತೆಯಲ್ಲೇ ನಿಂತು ನೋಡಿ ಹೊರಟರು ಅಂತ ಜನ ಆಕ್ರೋಶ ಹೊರಹಾಕಿದ್ರು. ಬರೀ ಆಶ್ವಾಸನೆ ಕೊಟ್ಟು ಹೋಗ್ತಿದ್ದಾರೆ‌..ಅಲ್ಲೇ ನಿಂತು ಹೋಗೋಕೆ ಯಾಕೆ ಬರ್ಬೇಕು ಅಂತ ಪ್ರಶ್ನಿಸಿದ್ರು.


“42 ಕೋಟಿ ಅನುದಾನದಲ್ಲಿ ಸಮಸ್ಯೆ ಬಗೆಹರಿಸ್ತೇವೆ”


ಕೆಆರ್‌ ಪುರಂನಲ್ಲಿ ಮಾತನಾಡಿದ ಸಿಎಂ, ಈ ಭಾಗದ ರೈಲ್ವೆ ಭಾಗದಲ್ಲಿ ಸಮಸ್ಯೆ ಇದೆ, 42 ಕೋಟಿ ಅನುದಾನದಲ್ಲಿ ಅಲ್ಲಿ ಕಾಮಗಾರಿ ನಡೆಸಿ ಸಮಸ್ಯೆ ಬಗೆ ಹರಿಸುತ್ತೇವೆ ಎಂದರು. 900 ಮೀಟರ್ ಅಡಿಷನಲ್ ಡ್ರೈನೇಜ್ ಕೂಡ ಮಾಡ್ತಿದ್ದೇವೆ, ರಾಜ ಕಾಲವೇ ಮೇಲೆ ಮನೆ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಅದನ್ನು ತೆರವು ಮಾಡಿಸುವ ಕೆಲಸ ಮಾಡ್ತೀವಿ ಅಂತ ಹೇಳಿದ್ರು.


ಮಳೆ ಹಾನಿ ಪ್ರದೇಶಗಳಿಗೆ ಎಚ್‌ಡಿಕೆ ಭೇಟಿ


ಮತ್ತೊಂದೆಡೆ ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ರು. ದಾಸರಹಳ್ಳಿ ವ್ಯಾಪ್ತಿಯ ರುಕ್ಮಿಣಿ‌ನಗರ, ಬೆಲ್ಮಾರ್ ಬಡಾವಣೆ, ಚಿಕ್ಕಬಾಣಾವಾರ ಸೇರಿ ಹಲವು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ರು. ಈ ವೇಳೆ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್, ಎಂ‌ಎಲ್‌ಸಿ ಶರವಣ ಸಾಥ್ ನೀಡಿದ್ದರು.


“ನಗರ ಪ್ರದಕ್ಷಿಣೆ ಬರೀ ಫೋಟೋ ಶೂಟ್‌ ಆಗಬಾರದು”


ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್‌ಡಿಕೆ, ನಗರ ಪ್ರದಕ್ಷಿಣಿ ಕಾಟಾಚಾರದ, ಫೋಟೋ ಶೂಟ್ ಆಗಬಾರದು, ಬಡವರ ಜೀವನದ ಜೊತೆ ಚೆಲ್ಲಾಟವಾಡವಾರದು, ಕೆಆರ್ ಪುರಂ‌ಗೆ 1600 ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೂ ಆದ್ರೆ ಅಲ್ಲಿನ ಜನ ನೀರಿನಲ್ಲಿ ತೇಲ್ತಾ ಇದಾರೆ. ಸಿಎಂ ನಾಲ್ಕು ದಿನದ ಪ್ರದಕ್ಷಿಣೆಯಲ್ಲಿ ಅವರಿಗೆ ಅನುಭವ ಆಗಿದೆ ಅಂತ ವ್ಯಂಗ್ಯವಾಡಿದ್ರು.


“ಬೆಂಗಳೂರಿನಲ್ಲಿ ಈಗ ದರೋಡೆಕೋರರಿದ್ದಾರೆ!”


ಒಂದು ಕಾಲದಲ್ಲಿ ಚಂಬಲ್ ಕಣಿವೆ ದರೋಡೆ ಕೋರರನ್ನ ಕಾಣುತ್ತಿದ್ದೆವು, ಈಗ ಬೆಂಗಳೂರಿನಲ್ಲಿ ದರೋಡೆ ಕೋರರಿದ್ದಾರೆ ಅಂತ ಎಚ್‌ಡಿಕೆ ಆರೋಪಿಸಿದ್ರು. ಸಾಕು ದರೋಡೆ ಮಾಡಿದ್ದು, ತಿನ್ನೋದು ಎರಡು ತುತ್ತು ಅನ್ನ, ಒಂದ್ಸಲ ಯೋಚನೆ ಮಾಡಿ, 20 ವರ್ಷದಿಂದ ರಾಜಕಾಲುವೆ ಅಂತಾ ಚರ್ಚೆ ಮಾಡ್ತಾರೆ. ಇಷ್ಟು ದಿನ ಬೇಕಾ ಸಮಸ್ಯೆ ಬಗೆಹರಿಸೋದು ? ಅಂತ ಪ್ರಶ್ನಿಸಿದ್ರು. ಜನಗಳ ಮದ್ಯೆ ಶೋ ಮಾಡೊದಲ್ಲ ಕಾಮನ್ ಮ್ಯಾನ್ ಚೀಫ್ ಮಿನಿಸ್ಟರ್ ಕಾಮನ್ ಮ್ಯಾನ್‌ಗಳ ಸಮಸ್ಯೆ ಬಗೆಹರಿಸಬೇಕು  ಅಂತ ಆಗ್ರಹಿಸಿದ್ರು.


ಇದನ್ನೂ ಓದಿ: Heavy Rain: ಕೊಡಗಿನಲ್ಲಿ ಭಾರೀ ಮಳೆ! ಮನೆಗಳಿಗೆ ನೀರು, 15 ಡಿಗ್ರಿಗೆ ಇಳಿದ ತಾಪಮಾನ


“ಸರ್ಕಾರ ಮಲಗಿತ್ತು, ಮೂರು ಕಾಸಿನ ಕೆಲಸ ಮಾಡಿಲ್ಲ”


ಇನ್ನು ಬೆಂಗಳೂರು ಮಳೆ ಅವಾಂತರದ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಸಮಸ್ಯೆ ಬಗೆಹರಿಸಬೇಕಾದ್ರೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ರಾಜಕಾಲುವೆ ಸ್ವಚ್ಚತೆ ಸೇರಿದಂತೆ ಅನೇಕ ಕ್ರಮ ಕೈಗೊಳ್ಳಬೇಕು, ಇವೆಲ್ಲ ಮಳೆಗಾಲಕ್ಕೂ ಮೊದಲೇ ಮಾಡಬೇಕಿತ್ತು. ಆದ್ರೆ ಆಗ ಸರ್ಕಾರ ಮಲಗಿತ್ತು, ಮೂರುಕಾಸಿನ ಕೆಲಸ ಮಾಡಿಲ್ಲಾ ಅಂತ ವ್ಯಂಗ್ಯವಾಡಿದ್ರು.

First published: